ಮೂಡುಬಿದಿರೆ: “ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ, ತುಳು ನಾಡ ಅಭಯರಾಣಿ ಅಬ್ಬಕ್ಕ ದೇವಿ ಸಂಸ್ಮರಣಾರ್ಥ ಅಂಚೆಚೀಟಿ ಬಿಡುಗಡೆಯು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಡಿ. 15ರಂದು ಅಪರಾಹ್ನ 3.15ಕ್ಕೆ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತಿಯಲ್ಲಿ ಜರಗಲಿದೆ ಎಂದು ಎಕ್ಸಲೆಂಟ್‌ನ ಅಧ್ಯಕ್ಷ ಯುವರಾಜ್ ಜೈನ್ ಪತ್ರಿಕಾಗೋಷ್ಠಿ ಯಲ್ಲಿ ಪ್ರಕಟಿಸಿದರು.
ಕೇಂದ್ರ ಸರಕಾರದ ಅಂಚೆ ಇಲಾಖೆ,ಸಂವಹನ ಸಚಿವಾಲಯದ ಸಹಭಾಗಿತ್ವ ದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ.
ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್ ಅಂಚೆಚೀಟಿ ಅನಾವರಣ ಗೊಳಿಸಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ದ ಡಾ| ಹೇಮಾವತಿ ವೀ. ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಪುತ್ತೂರು ಎಸ್‌ಎಸ್‌ಪಿ ನವೀನ್‌ಚಂದ್ರ, ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕಾರಾಮ ಪೂಜಾರಿ, ಅಂಚೆಚೀಟಿ ಬಿಡುಗಡೆ ಸಮಿತಿ ಪ್ರಮುಖರಾದ ಫಿಲಾಟೆಲಿಸ್ಟ್ ಮಹಾವೀರ ಕುಂಡೂರ್, ಮಾಜಿ ಸಚಿವ ಕೆ. ಅಭಯಚಂದ್ರ, ಚೌಟರ ಅರಮನೆಯ ಕುಲದೀಪ ಎಂ., ಮಹೇಂದ್ರ ಸಿಂಗಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ರಾಣಿ ಅಬ್ಬಕ್ಕ ಸಭಾಂಗಣ
ಎಕ್ಸಲೆಂಟ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಸಭಾಂಗಣಕ್ಕೆ ರಾಣಿ ಅಬ್ಬಕ್ಕ ಹೆಸರು ಇಡಲು ನಿರ್ಧರಿಸ ಲಾಗಿದೆ ಎಂದೂ ಯುವರಾಜ್ ಜೈನ್ ತಿಳಿಸಿದರು. ಪುತ್ತೂರು ಅಂಚೆ ವಿಭಾಗದ ಡಿವೈಎಸ್‌ಪಿ ಉಷಾ ಕೆ. ಮಾತನಾಡಿ, ಒಟ್ಟು ನಿಗದಿತ 3,26,000 ಅಂಚೆಚೀಟಿಗಳನ್ನು (ಒಮ್ಮೆ ಮಾತ್ರ) ಮುದ್ರಿಸಿದ್ದು ದೇಶಾದ್ಯಂತ ಡಿ. 16ರಿಂದ ಖರೀದಿಗೆ ಲಭ್ಯವಿದೆ ಎಂದರು.
ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಶೈಕ್ಷಣಿಕ ನಿರ್ದೇಶಕ ಡಾ| ಬಿ.ಪಿ. ಸಂಪತ್ ಕುಮಾರ್, ಪುತ್ತೂರು ಅಂಚೆ ವಿಭಾಗದ ಡಿವೈಎಸ್‌ಪಿ ಉಷಾ ಕೆ., ಎಎಸ್‌ಎಸ್‌ಪಿ ಚಂದ್ರ ನಾೖಕ್, ಮಾರುಕಟ್ಟೆ ವಿಭಾಗದ ಗುರುಪ್ರಸಾದ್ ಉಪಸ್ಥಿತರಿದ್ದರು.