Advertisement

ರಂಗೋಲಿ ಹಿಂದಿನ ಅಧ್ಯಾತ್ಮ ದೃಷ್ಟಿಕೋನ

06:10 AM Dec 15, 2018 | |

ನೆಲವನ್ನು ಪೊರಕೆಯಿಂದ ಗುಡಿಸುವಾಗ ನೆಲದ ಮೇಲೆ ಸೂಕ್ಷ್ಮ ರೇಖೆಗಳು ನಿರ್ಮಾಣವಾಗಿ ಅವುಗಳಲ್ಲಿ ಒಂದು ರೀತಿಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಈ ರೇಖೆಗಳು ಅನಿಯುತವಾಗಿರುವುದರಿಂದ ಅವುಗಳ ಸ್ಪಂದನಗಳು ಸಹ ಅನಿಯುತವಾಗಿರುತ್ತವೆ. ಈ ಸ್ಪಂದನಗಳು ಶರೀರಕ್ಕೆ, ಕಣ್ಣುಗಳಿಗೆ ಮತ್ತು ಮನಸ್ಸಿಗೆ ಹಾನಿಕಾರಕವಾಗಿರುತ್ತವೆ. ಈ ಅನಿಷ್ಟ ಸ್ಪಂದನಗಳನ್ನು ತಡೆಗಟ್ಟಲು ನೆಲದ ಮೇಲೆ ರಂಗೋಲಿಯಿಂದ ಕೋನಗಳನ್ನು ಮತ್ತು ಶುಭಚಿಹ್ನೆಗಳನ್ನು ಬಿಡಿಸುತ್ತಾರೆ.

Advertisement

ದೇವತೆಯ ಹೆಸರಿನ ಅಥವಾ ದೇವತೆಯ ರೂಪದ ರಂಗೋಲಿಯನ್ನು ಬಿಡಿಸಬಾರದು. ಏಕೆಂದರೆ ರಂಗೋಲಿಗೆ ಸಗುಣ ಈಶ್ವರೀ ಶಕ್ತಿಯ ಬಂಧನವು ಬರುತ್ತದೆ. ಇದರಿಂದ ರಂಗೋಲಿಯ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಸ್ವಸ್ತಿಕ ಅಥವಾ ಚುಕ್ಕೆಗಳಿರುವ ರಂಗೋಲಿಗೆ ನಿರ್ಗುಣ ಶಕ್ತಿಯ ಆಧಾರವಿರುವುದರಿಂದ ಅದರ ಕ್ಷಮತೆಯು ಹೆಚ್ಚಾಗಿ, ಪ್ರಕಟ ಶಕ್ತಿಯಿಂದ ಹೆಚ್ಚು ಪ್ರಮಾಣದಲ್ಲಿ ಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ.

(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ “ದೇವರ ಪೂಜೆಯ ಪೂರ್ವತಯಾರಿ’)

Advertisement

Udayavani is now on Telegram. Click here to join our channel and stay updated with the latest news.

Next