Advertisement

ರಂಗೋಲಿ 2019 ತ್ರಿದಿನ ರಂಗ ಶಿಬಿರಕ್ಕೆ ಚಾಲನೆ.

11:27 AM Apr 09, 2019 | keerthan |

ಕಾಸರಗೋಡು: ವಿವಿಧ ಬಣ್ಣಗಳು ಸೇರಿ ಬಣ್ಣದ ರಂಗೋಲಿಯಾಗುವಂತೆ ವಿವಿಧ ಕಲೆಗಳನ್ನು ಸತತ ಪರಿಶ್ರಮದಿಂದ ಕರಗತ ಮಾಡಿಕೊಂಡಾಗ ಮಕ್ಕಳು ಸೂರ್ಯನಂತೆ ಪ್ರಕಾಶಿಸುತ್ತಾರೆ. ಅದಕ್ಕೆ ತಕ್ಕ ಅವಕಾಶವನ್ನು ಸೃಷ್ಟಿಸುವಲ್ಲಿ ರಂಗ ಚೇತನ ರಂಗೋಲಿಯಂತಹ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ರಂಗ ನಿರ್ದೇಶಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಬಾ.ಸು.ಮ.ಕೊಡಗು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು

Advertisement

ರಂಗ ಚೇತನ ಕಾಸರಗೋಡು ನೇತೃತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮತ್ತು ಬಿ.ಪಿ.ಪಿ.ಎ.ಎಲ್.ಪಿ ಶಾಲೆ ಪೆರ್ಮುದೆ ಇದರ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡ ರಂಗೋಲಿ 2019 ತ್ರಿದಿನ ರಂಗ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಂಗಚೇತನಾ ಕಾಸರಗೋಡಿನ ಅಧ್ಯಕ್ಷರಾದ ಬಾಲಕೃಷ್ಣ ಅಡೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ವಿದ್ದು ಉಚ್ಚಿಲ್, ಕೇರಳ ಪ್ತಾಂತ್ಯ ಕನ್ನಡ ಮಾಧ್ಯಮ ಸಂಘ ಕೇಂದ್ರ ಸಮಿತಿ ಅಧ್ಯಕ್ಷರಾದ ರವೀಂದ್ರ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಾಲಾ ಮುಖ್ಯಸ್ಥರಾದ ರವಿಶಂಕರ ಭಟ್, ಶಂಕರ ನಾರಾಯಣ ಭಟ್, ನಿವೃತ್ತ ಶಿಕ್ಷಕಿ ಶಾರದ.ಎ, ಪಿ.ಟಿ.ಎ. ಅಧ್ಯಕ್ಷರಾದ ಸತೀಶ್ ರೈ ಕುಡಾಲುಗುತ್ತು ಉಪಸ್ಥಿತರಿದ್ದರು. ಅಶೋಕ್ ಮಾಸ್ಟರ್ ಕೊಡ್ಲಮೊಗರು ಸ್ವಾಗತಿಸಿ ರಂಗಕರ್ಮಿ ಉದಯಸಾರಂಗ್ ಧನ್ಯವಾದ ಸಮರ್ಪಿಸಿದರು.  ರಂಗಚೇತನದ ಗೌರವಾಧ್ಯಕ್ಷರಾದ ಯತೀಶ್ ಮಾಸ್ಟರ್ ಮುಳ್ಳೇರಿಯಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next