ಮೈಸೂರು: ಮಕ್ಕಳಲ್ಲಿ ಸಾಂಸ್ಕೃತಿಕ ಮನಸ್ಥಿತಿ ಬೆಳೆಸುವ ಜತೆಗೆ ಪರಿಸರದ ಬಗ್ಗೆ ಸಾಮಾನ್ಯ ಜಾnನವನ್ನು ವೃದ್ಧಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ರೆರ್ಪಟರಿ ರಂಗಾಯಣದ ಚಿಣ್ಣರ ಮೇಳಕ್ಕೆ ಸೋಮವಾರ ಚಾಲನೆ ದೊರೆಯ ಲಿದ್ದು, ಇದಕ್ಕಾಗಿ ರಂಗಾಯಣ ಸಜಾjಗಿದೆ.
ಮಕ್ಕಳಲ್ಲಿ ಸಾಂಸ್ಕೃತಿಕ ಮನಸ್ಥಿತಿ ಮೂಡಿಸುವ ಜತೆಗೆ ಪರಿಸರ ಜಾಗೃತಿ ಹಾಗೂ ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ಈ ಬಾರಿಯ ಚಿಣ್ಣರಮೇಳವನ್ನು ಸಮಾನತೆ – ಚಿಣ್ಣರಮೇಳ ಶೀರ್ಷಿಕೆಯಲ್ಲಿ ನಡೆಸಲಾಗುತ್ತಿದೆ. ಒಂದು ತಿಂಗಳವರೆಗೆ ನಡೆಯುವ ಚಿಣ್ಣರ ಮೇಳದಲ್ಲಿ ಮಕ್ಕಳು ಅಭಿನಯ, ರಂಗಚಟುವಟಿಕೆಗಳ ಜತೆಗೆ ಹಕ್ಕಿ – ಪಕ್ಷಿಗಳು, ಗಿಡ – ಮರಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಗುವುದು.
ಏನೆಲ್ಲಾ ಕಾರ್ಯಕ್ರಮ: ಒಂದು ತಿಂಗಳ ಕಾಲ ನಡೆಯುವ ಚಿಣ್ಣರ ಮೇಳದಲ್ಲಿ ಮಕ್ಕಳಿಗೆ ಪ್ರತಿದಿನ ದೈಹಿಕ ಶಿಕ್ಷಣ ತರಗತಿ, ಸಮಾನತೆ ಕುರಿತ ಸಂಗೀತ ತರಗತಿ, ರಂಗಾಟಗಳು, ಚಿತ್ರ ಬರೆಯುವುದು, ಪೈಟಿಂಗ್, ಮುಖವಾಡ ತಯಾರಿಕೆ, ಹಾಡು, ಮ್ಯಾಜಿಕ್ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ, ವಚನ ಗಾಯನ,
ಕಥೆ ಕೇಳುವ ಕಾರ್ಯಕ್ರಮ, ಜಾನಪದ ಹಾಗೂ ಸಾಮೂಹಿಕ ನೃತ್ಯ ಪ್ರಾತ್ಯಕ್ಷಿಕೆ, ಡಾಗ್ ಶೋ, ಅಗ್ನಿಶಾಮಕ ಪ್ರಾತ್ಯಕ್ಷಿಕೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದಿಂದ ಮಕ್ಕಳಿಗೆ ಸಸ್ಯ ಪ್ರಪಂಚ ಕುರಿತಂತೆ ಮುಖಾ-ಮುಖೀ, ಪಾರಂಪರಿಕ ನಡಿಗೆ, ಪರಿಸರ ನಡಿಗೆ ಕಾರ್ಯಕ್ರಮಗಳು ನಡೆಯಲಿದೆ.
ಇಂದು ಉದ್ಘಾಟನೆ
ಚಿಣ್ಣರ ಮೇಳದ ಉದ್ಘಾಟನಾ ಕಾರ್ಯಕ್ರಮ ಸೋಮವಾರ ಸಂಜೆ 5ಕ್ಕೆ ರಂಗಾಯಣದ ವನ ರಂಗದಲ್ಲಿ ನಡೆಯಲಿದ್ದು, ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತೆ ಹುಬ್ಬಳ್ಳಿಯ ಸಿಯಾ ಖೋಡೆ ಚಿಣ್ಣರ ಚಾಲನೆ ನೀಡಲಿದ್ದಾರೆ. ಇವರೊಂದಿಗೆ ಮೈಸೂರಿನ ನಿವಾಸಿ ಹಾಗೂ ಕಲಾಶ್ರೀ ಪ್ರಶಸ್ತಿ ವಿಜೇತೆ ಅಂತಾ ರಾಷ್ಟ್ರೀಯ ಯೋಗಪಟು ಖುಷಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.