Advertisement

ರಂಗಸಿರಿ ಭಾಗವತಿಕೆ ರಂಗಪ್ರವೇಶ

07:40 PM May 11, 2019 | Team Udayavani |

ಬದಿಯಡ್ಕ: ಬದಿಯಡ್ಕ ಕೇಂದ್ರೀಕರಿಸಿ ನಾಡಿನಾದ್ಯಂತ ಸದಾ ತನ್ನ ಉತ್ತಮ ಚಟುವಟಿ ಕೆಗಳಿಂದಾಗಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಗುರುತಿಸಲ್ಪಟ್ಟಿದೆ. ಈಗಾಗಲೇ ಯಕ್ಷಗಾನ ಕ್ಷೇತ್ರಕ್ಕೆ ಹಲವು ರತ್ನಗಳನ್ನು ಕೊಡುಗೆ ನೀಡಿದ ಸಂಸ್ಥೆಯು ಇದೀಗ ತನ್ನ ಮೊದಲ ಹಿಮ್ಮೇಳ ತರಗತಿಯ ವಿದ್ಯಾರ್ಥಿಗಳನ್ನು ರಂಗಪ್ರವೇಶ ಮಾಡಿಸುತ್ತಿರುವುದು ಸಂತಸದ ವಿಚಾರ ಎಂಬುದಾಗಿ ನಿವೃತ್ತ ಪ್ರಾಂಶುಪಾಲ, ಅರ್ಥದಾರಿ, ರಂಗಸಿರಿಯ ಗೌರವ ಸಲಹೆಗಾರ ಡಾ|ಬೇಸಿ ಗೋಪಾಲಕೃಷ್ಣ ಭಟ್‌ ನುಡಿದರು.

Advertisement

ಅವರು ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ರಂಗಸಿರಿ ಸಂಸ್ಥೆಯ ವಿದ್ಯಾರ್ಥಿ ಶ್ರೀಶ ಕುಮಾರ ಪಂಜಿತ್ತಡ್ಕ ಅವರ ಭಾಗವತಿಕೆ ರಂಗಪ್ರವೇಶ ಹಾಗೂ ತಾಳಮದ್ದಳೆ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತಾಡಿದರು.

ಸೂರ್ಯನಾರಾಯಣ ಪದಕಣ್ಣಾಯ ಅವರ ಶಿಷ್ಯನಾಗಿ ಈಗಾಗಲೇ ಹವ್ಯಾಸಿ ಯಕ್ಷರಂಗದಲ್ಲಿ ಕಟ್ಟು, ರಾಜ, ಪಕಡಿ, ಸ್ತ್ರೀ, ಬಣ್ಣದ ವೇಷ ಹೀಗೆ ಎಲ್ಲಾ ವೇಷಗಳಲ್ಲೂ ಒಟ್ಟು ಸುಮಾರು 500ರಷ್ಟು ವೇದಿಕೆಗಳನ್ನೇರಿ ತನ್ನದೇ ಗುರುತನ್ನು ಮೂಡಿ ಸುತ್ತಿರುವ ಅಧ್ಯಾಪಕ ಶ್ರೀಶ ಕುಮಾರ ಪಂಜಿತ್ತಡ್ಕ ಅವರು ಭಾಗವತಿಕೆ ಕ್ಷೇತ್ರಕ್ಕೂ ಪ್ರವೇಶಿಸಿದರು.
ಪ್ರಸ್ತುತ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿಯಾಗಿರುವ ಅವರು ಸಂಸ್ಥೆಯನ್ನು ಸ್ಥಾಪಿಸಲು ಯಕ್ಷಗಾನ ಗುರುಗಳ ಹಾಗೂ ಹಿರಿಯರನೇಕರ ಪ್ರೇರಣೆ, ಸಹಕಾರ ಕಾರಣವೆಂದು ಸ್ಮರಿಸಿಕೊಳ್ಳುತ್ತಾರೆ.

ಇಂದು ಯಕ್ಷಗಾನ ನಾಟ್ಯ, ಹಿಮ್ಮೇಳ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ ತರಗತಿಗಳನ್ನು ನಡೆಸುತ್ತಿರುವ ರಂಗಸಿರಿಯು ವಿಶಾಲವಾಗಿ ಬೆಳೆದು ದಶಮಾನೋತ್ಸವದ ಹೊಸ್ತಿಲಲ್ಲಿ, ತನ್ನ ಹಿಮ್ಮೇಳ ತರಗತಿಯ ಮೊದಲ ವಿದ್ಯಾರ್ಥಿಗಳ ಭಾಗವತಿಕೆಯ ರಂಗಪ್ರವೇಶವನ್ನು ಕಾಣುತ್ತಿರುವುದು ಸಂಸ್ಥೆಯ ಸಾಧೆಗಳಲ್ಲೊಂದು. ಶ್ರೀ ಸೂರ್ಯನಾರಾಯಣ ಪದಕಣ್ಣಾಯರು ಸಂಸ್ಥೆಯ ಯಕ್ಷಗಾನ ಗುರುಗಳಾಗಿ ನಾಟ್ಯ, ಹಿಮ್ಮೇಳ ತರಗತಿಗಳನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ.

ಭಾಗವತಿಕೆ ರಂಗಪ್ರವೇಶದಂಗವಾಗಿ ಭಕ್ತ ಸುಧನ್ವ ತಾಳಮದ್ದಳೆ ಸೇವೆಯನ್ನು ಆಯೋಜಿಸಲಾಗಿತ್ತು. ಭಾಗವತಿಕೆಯಲ್ಲಿ ವಿದ್ಯಾರ್ಥಿಗಳಾದ ಶ್ರೀಶ ಕುಮಾರ ಪಂಜಿತ್ತಡ್ಕ, ವಿದ್ಯಾ ಕುಂಟಿಕಾನಮಠ ಹಾಗೂ ಶಶಿಧರ ಮುಳ್ಳೇರಿಯ ಸಹಕರಿಸಿದರು.

Advertisement

ಚೆಂಡೆಯಲ್ಲಿ ಶಿವಶಂಕರ ಭಟ್‌ ಅಂಬೆಮೂಲೆ ಹಾಗೂ ಮದ್ದಳೆಯಲ್ಲಿ ಸವ್ಯಸಾಚಿ ಯಕ್ಷಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ತಮ್ಮ ಕೈಚಳಕ ಮೆರೆದರು.ಶ್ರುತಿಯಲ್ಲಿ ಸುಧೀರ್‌ ಕುಮಾರ್‌ ರೈ ಮುಳ್ಳೇರಿಯ ಸಹಕಾರ ನೀಡಿದರು. ಅರ್ಥಗಾರಿಕೆಯಲ್ಲಿ ಕೃಷ್ಣನಾಗಿ ಡಾ.ಬೇಸಿ ಗೋಪಾಲಕೃಷ್ಣ ಭಟ್‌, ಅರ್ಜುನನಾಗಿ ಶ್ರೀಶ ಕುಮಾರ ಪಂಜಿತ್ತಡ್ಕ, ಸುಧನ್ವನಾಗಿ ವಿದ್ಯಾ ಕುಂಟಿಕಾನಮಠ, ಪ್ರಭಾವತಿಯಾಗಿ ಸುಪ್ರೀತಾ ಸುಧೀರ್‌ ಮುಳ್ಳೇರಿಯ ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next