“ಮಠ’, “ಎದ್ದೇಳು ಮಂಜುನಾಥ’ ಚಿತ್ರಗಳ ಸೂಪರ್ ಹಿಟ್ ಸಕ್ಸಸ್‌ನಂತರ ನಿರ್ದೇಶಕ ಗುರು ಪ್ರಸಾದ್‌ಮತ್ತು ನಟ ಜಗ್ಗೇಶ್ ಕಾಂಬಿನೇಷನ್ ನಲ್ಲಿ ಮೂರನೇ ಚಿತ್ರ ಸೆಟ್ಟೇರಿದೆ. ಕೆಲ ತಿಂಗಳ ಹಿಂದೆಯೇ ಗುರು ಪ್ರಸಾದ್ ಮತ್ತು ಜಗ್ಗೇಶ್ ಜೋಡಿಯಮೂರನೇ ಚಿತ್ರಕ್ಕೆ “ರಂಗನಾಯಕ’ ಎಂದು ಹೆಸರಿಟ್ಟಿದ್ದ ಚಿತ್ರತಂಡ,
ಚಿತ್ರದ ಟೈಟಲ್ ಪೋಸ್ಟರ್ ಅನ್ನುಬಿಡುಗಡೆ ಮಾಡಿತ್ತು. ಆದರೆಆನಂತರ “ರಂಗ ನಾಯಕ’ ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ಸಿಕ್ಕಿರಲಿಲ್ಲ.ಇದೀಗ “ರಂಗ ನಾಯಕ’ಚಿತ್ರಕ್ಕೆ ಅಧಿಕೃತವಾಗಿಚಾಲನೆ ಸಿಕ್ಕಿದ್ದು, ಚಿತ್ರಸೋಮವಾರ ಸರಳವಾಗಿಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ.
ಬಸವನಗುಡಿಯರಾಘವೇಂದ್ರ ಸ್ವಾಮಿ ಮಠದಲ್ಲಿ ಚಿತ್ರದ ಮುಹೂರ್ತ ನೆರವೇರಿಸಿರುವ ಚಿತ್ರತಂಡ, ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇನ್ನು “ರಂಗನಾಯಕ’ ಚಿತ್ರದ ಮುಹೂರ್ತದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್, “ಬ್ರಾಹ್ಮೀ ಮುಹೂರ್ತದ ಶುಭಸಮಯ ರಂಗನಾಯಕ ಚಿತ್ರಬಸವನಗುಡಿ ರಾಯರ ಮಠದಲ್ಲಿಪ್ರಥಮ ಆರಂಭ ಪಲಕ ಹಾಗು ರಾಯರ ಬೃಂದಾವನದ ಚಿತ್ರಿಕರಣ ಮಾಡಿ ಕಾರ್ಯ ಆರಂಭವಾಯಿತು. “ಮಠ’,”ಎದ್ದೇಳು ಮಂಜುನಾಥ’ ನಂತರ ಗುರುಪ್ರಸಾದ್ ನನ್ನ ಸಮ್ಮಿಲನ… ನಗಿಸಲು ನಾವು ರೆಡಿ ಶುಭಹಾರೈಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಶವ ಸಂಸ್ಕಾರ ಸುತ್ತ ನಡೆದ ಸತ್ಯ ಕಥೆ
ಚಿತ್ರತಂಡ ಪ್ಲಾನ್ ಪ್ರಕಾರ, ಎಲ್ಲ ಅಂದುಕೊಂಡಂತೆ ನಡೆದಿದ್ದರೆ 2020 ರಲ್ಲೇ “ರಂಗ ನಾಯಕ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ ಲಾಕ್‌ಡೌನ್ ಮತ್ತಿತರ ಕಾರಣಗಳಿಂದ ನಿಗಧಿತ ಸಮಯಕ್ಕೆ ಈ ಚಿತ್ರದ ಚಿತ್ರೀಕರಣ ಆರಂಭವಾಗಿರಲಿಲ್ಲ. “ವಿಖ್ಯಾತ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ರಂಗ ನಾಯಕ’ ಚಿತ್ರಕ್ಕೆ ನಿರ್ದೇಶಕ ಗುರುಪ್ರಸಾದ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಹೊಣೆ ಹೊತ್ತುಕೊಂಡಿದ್ದಾರೆ. “ರಂಗ ನಾಯಕ’ನ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಉಳಿದಂತೆ “ರಂಗನಾಯಕ’ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ಒಟ್ಟಾರೆ ಸುಮಾರು ಒಂದು ದಶಕದ ಬಳಿಕ ಮತ್ತೂಮ್ಮೆ ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿಯ ಮೂರನೇ ಚಿತ್ರ ಶುರುವಾಗಿದ್ದು, “ರಂಗ ನಾಯಕ’ ಆರಂಭದಲ್ಲಿಯೇ ಒಂದಷ್ಟು ಕುತೂಹಲ, ನಿರೀಕ್ಷೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.ಸದ್ಯದ ಮಾಹಿತಿ ಪ್ರಕಾರ ಚಿತ್ರ ಮುಂದಿನ ವರ್ಷದ ಮಧ್ಯ ಭಾಗದಲ್ಲಿ ತೆರೆಗೆ ಬರಬಹುದು ಎನ್ನಲಾಗುತ್ತಿದೆ.