ಗಣತಿ ಕಾರ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲ ನೇತೃತ್ವದಲ್ಲಿ ಭಾನುವಾರ ನಡೆಯಿತು.
Advertisement
ಮೈಸೂರು ನೇಚರ್ ಬರ್ಡ್ಸ್ ಗ್ರೂಪ್ ಹಾಗೂ ಬೆಂಗಳೂರು ಬರ್ಡ್ಸ್ ಗ್ರೂಪ್‌ನ ಸದಸ್ಯರು ಸೇರಿ ಇತರೆ 80ಕ್ಕೂಹೆಚ್ಚು ಮಂದಿ ಪಕ್ಷಿ ತಜ್ಞರು ಭಾಗವಹಿಸಿದ್ದರು. ರಂಗನತಿಟ್ಟು ಪಕ್ಷಿಧಾಮದಲ್ಲಿನ ಐಲ್ಯಾಂಡ್ ಪ್ರದೇಶದಲ್ಲಿ ಯಾವ ಜಾಗ
ದಲ್ಲಿ ಯಾವ ಮರಗಳ ಮೇಲೆ ಯಾವ ಪಕ್ಷಿಗಳಿಗೆ ಅನುಕೂಲವಿರುತ್ತದೆ. ಅಲ್ಲಿ ವಾಸಿಸುವ ಪಕ್ಷಿಗಳ ಸ್ಥಳ ಪರಿಶೀಲನೆ
ನಡೆಸಿ ಮಾಹಿತಿ ಸಂಗ್ರಹಿಸಿದರು. ಕಳೆದ ಮಾರ್ಚ್‌ನಲ್ಲಿ ಮೊದಲ ಸುತ್ತಿನ ಗಣತಿ ಕಾರ್ಯ ನಡೆಸಲಾಗಿತ್ತು.
ಹೀಗೆ 3 ತಿಂಗಳಿಗೊಮ್ಮೆ ಗಣತಿ ಕಾರ್ಯ ನಡೆಸಿ ಒಂದು ವರ್ಷದಲ್ಲಿ ಒಂದು ಹಕ್ಕಿ ಅದರ ವಾಸ, ಯಾವ ಮರ
ಬಳಕೆ, ಯಾವ ಗೂಡಿನಲ್ಲಿ ವಾಸ ಮಾಡುತ್ತದೆ ಎಂಬ ಬಗ್ಗೆ ತಜ್ಞರು ಮಾಹಿತಿ ಕಲೆ ಹಾಕಿ ಅದರ ಗಣತಿ ಮಾಡುತ್ತಾರೆ.