Advertisement

ದೆಹಲಿ ಕರ್ನಾಟಕ ಸಂಘ: ರಂಗಕರ್ಮಿH.S.K ಅವರಿಗೆ ರಂಗನಮನ

03:31 PM Sep 13, 2017 | Team Udayavani |

ಮುಂಬಯಿ: ಹೊಸದಿಲ್ಲಿಯಲ್ಲಿ ಮೂರ್ನಾಲ್ಕು ದಶಕಗಳಿಂದ ಕನ್ನಡ ರಂಗ ಭೂಮಿಯ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ನಿಧನ ಹೊಂದಿದ  ರಂಗಕರ್ಮಿ ಎಚ್‌.ಎಸ್‌.ಕುಲಕರ್ಣಿ ಅವರಿಗೆ ದೆಹಲಿ ಕರ್ನಾಟಕ ಸಂಘದಲ್ಲಿ ರಂಗನಮನ ಕಾರ್ಯಕ್ರಮ ಜರಗಿತು.

Advertisement

ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ,  ಭೀಮರಾವ್‌ ಮುರಗೋಡ, ಚೆನ್ನು ಎಸ್‌. ಮಠದ, ಡಾ| ಎಸ್‌. ಎಲ್‌. ಭಂಡಾರ್‌ಕರ್‌,  ಕನ್ನಡತಿ ಡಾ| ಅಹಲ್ಯಾ ಚಿಂತಾಮಣಿ,  ರಾಧಾ ಕೌಜಲಗಿ ಅವರು  ರಂಗ ಕರ್ಮಿಗೆ ನಮನ ಸಲ್ಲಿಸಿದರು.  ಸ್ತ್ರೀ ಸಬಲೀಕರಣ ಕುರಿತಂತೆ  ಸಂದೇಶವನ್ನು ಒಳಗೊಂಡ 2 ನಾಟಕಗಳು ಹಾಗೂ ಉತ್ತರ ಕರ್ನಾಟಕದ ಬಾಗಲಕೋಟೆಯ ಜಾನಪದ ತಂಡದಿಂದ ಜಾನಪದ ಗೀತೆಗಳು ಮತ್ತು ರಂಗಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.

ನಡೆದಾಡುವ ರಂಗಭೂಮಿ ತಂಡದಿಂದ ಡಾ| ಸಾರಾ ಅಬೂಬಕ್ಕರ್‌ಅವರ ಕಾದಂಬರಿ ಆಧಾರಿತ ನಯನಾ ಜೆ. ಸೂಡ ನಿರ್ದೇಶನದ ನಾಟಕ ಚಂದ್ರಗಿರಿ ತೀರದಲ್ಲಿ   ಪ್ರದರ್ಶನಗೊಂಡಿತು.  ರಂಗ ಪಯಣ ತಂಡ ಬೆಂಗಳೂರು ಪ್ರಸ್ತುತಪಡಿಸಿದ ಸ್ತ್ರೀವಾದಿಯಾದ ಸಂಪತ್‌ಪಾಲ್‌ ದೇವಜಿಯವರ ಜೀವನ ಆಧಾರಿತ ನಾಟಕ ಗುಲಾಬಿ ಗ್ಯಾಂಗು  ಪ್ರದರ್ಶಿಸಲಾಯಿತು. ರಾಜ್‌ಗುರು ಹೊಸಕೋಟಿ ಅದರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನಗೈದರು.

 ರಾಜ್‌ಗುರು ಹೊಸಕೋಟಿ ತಂಡವು ರಂಗಗೀತೆಗಳನ್ನು ಪ್ರಸ್ತುತಪಡಿಸಿತು. ಗೌರಿಗಣೇಶ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೇರೂರು ಬಾಗಲಕೋಟೆಯ ಪವಿತ್ರಾ ಜಕ್ಕಪ್ಪನವರ್‌ ಮತ್ತು ತಂಡದವರು ನಶಿಸಿಹೋಗುತ್ತಿರುವ ಲಾವಣಿ, ಕುಟ್ಟು ಹಾಡು, ಬೀಸುಕಲ್ಲಿನ ಪದ ಮತ್ತು ತತ್ವಪದಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ರಂಗಾಯಣದ ಕಲಾವಿದ ಮತ್ತು ರಂಗ ನಿರ್ದೇಶಕರಾಗಿದ್ದ ಮಂಜುನಾಥ ಬೆಳಕೆರೆ ಅವರ  ಪತ್ನಿ ಪ್ರಶಾಂತಿ ಅವರಿಗೆ ಸಂಘದಿಂದ ಸಂಗ್ರಹಿಸಿದ 3 ಲಕ್ಷದ 25 ಸಾವಿರ ರೂ.   ಗೌರವ ನಿಧಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next