Advertisement

ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವ

01:02 PM Dec 31, 2019 | Team Udayavani |

ಹೊಳಲ್ಕೆರೆ: ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷ, ತಿರುಕ ನಾಮಾಂಕಿತ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 24ನೇ ಹಾಗೂ ಶ್ರೀ ಸೂರುದಾಸ್‌ಜಿ ಅವರ 22ನೇ ಪುಣ್ಯಾರಾಧನೆ ಅಂಗವಾಗಿ ಜ.1ರಿಂದ 3ರವರೆಗೆ ತಿರುಕನೂರಿನಲ್ಲಿ ರಂಗದಾಸೋಹ-17 ನಾಟಕೋತ್ಸವ ಜರುಗಲಿದೆ.

Advertisement

ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆಯುವ ನಾಟಕೋತ್ಸವದಲ್ಲಿ ನಾಡಿನ ವಿಶ್ವಸ್ತರು, ಸಾಹಿತಿಗಳು, ರಾಜಕೀಯ ಧುರೀಣರು, ಶಿಕ್ಷಣ ತಜ್ಞರು ಹಾಗೂ ಮಲ್ಲಾಡಿಹಳ್ಳಿ ಹಾಗೂ ಸುತ್ತಮುತ್ತಲಿನ ಅನಾಥ ಸೇವಾಶ್ರಮದ ಭಕ್ತವೃಂದ ಭಾಗವಹಿಸಲಿದೆ ಎಂದು ಅನಾಥ ಸೇವಾಶ್ರಮದ ವ್ಯವಸ್ಥಾಪಕ ಎಚ್‌. ಎಸ್‌. ಸಿದ್ರಾಮಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಟಕೋತ್ಸವದ ಅಂಗವಾಗಿ ದಿನಾಂಕ ಡಿ.30ರಿಂದ ಜನವರಿ 3 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7.30ರವರೆಗೆ ಯೋಗ ಶಿಬಿರ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. 7 ಗಂಟೆಗೆ ಸೂರುದಾಸ್‌ಜಿ ರಂಗ ಮಂಟಪದಲ್ಲಿ ನಾಟಕಗಳು ನಡೆಯಲಿವೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ.ರಾಜಶೇಖರಪ್ಪ ನಾಟಕೋತ್ಸವಕ್ಕೆ ಚಾಲನೆ ನೀಡಲಿರುವರು. ಕಾರ್ಯಕ್ರಮದಲ್ಲಿ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸಂಸ್ಥಾಪಕ ಶ್ರೀ ರಾಘವೇಂದ್ರ ಸ್ವಾಮೀಜಿಯವರತತ್ವ ಮತ್ತು ಆದರ್ಶಗಳನ್ನೊತ್ತು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅನಾಥ ಸೇವಾಶ್ರಮದ ಆಡಳಿತ ಮಂಡಳಿಯು “ತಿರುಕಶ್ರೀ’ ಪ್ರಶಸ್ತಿ ಕೊಡಲು ತೀರ್ಮಾನಿಸಿ 2020ನೇ ಸಾಲಿನ ಪ್ರಶಸ್ತಿಯನ್ನು ಹಿರಿಯರಂಗಕರ್ಮಿ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಜಿ ಕಪ್ಪಣ್ಣ ಅವರಿಗೆ ನೀಡಲಾಗುವುದು. ಜ.1 ಬುಧವಾರ ಬೆಳಗ್ಗೆ 9 ಗಂಟೆಗೆ ಜಾನಪದ ಕಲಾ ತಂಡಗಳೊಂದಿಗೆ ಪೂಜ್ಯರ ಭಾವಚಿತ್ರ, ಸ್ಥಬ್ದಚಿತ್ರಗಳ ಭವ್ಯ ಮೆರವಣಿಗೆ ಮಲ್ಲಾಡಿಹಳ್ಳಿಯ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ಅದೇ ದಿನ ಸಂಜೆ 7 ಗಂಟೆಗೆ ದ.ರಾ. ಬೇಂದ್ರೆ ರಚಿಸಿರುವ ಉಮೇಶ್‌ ಪತ್ತಾರ್‌ ನಿರ್ದೇಶನದ ಸಾಯುವ ಆಟ ನಾಟಕವನ್ನು ಜಮುರಾ ಕಲಾವಿದರು ಪ್ರದರ್ಶಿಸಲಿದ್ದಾರೆ. ಜ.2ರಂದು ಸಂಜೆ 7 ಗಂಟೆಗೆ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ವೈ.ಡಿ. ಬದಾಮಿ ನಿರ್ದೇಶನದ “ಮಹಾಬೆರಗು’ ಹಾಗೂ ಜ.3ರಂದು ಬಿ.ವಿ. ಕಾರಂತರ ಪಂಜರ ಶಾಲೆ ನಾಟಕ ಪ್ರದರ್ಶನವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next