Advertisement
ಆತನಿಗೆ ಸರಿ ಸುಮಾರು 35 ರಿಂದ 40 ವರ್ಷ. ಅಷ್ಟೂ ವರ್ಷ ಯಾವುದಕ್ಕೂ ಅಡೆ ತಡೆ ಎಂಬುದಿಲ್ಲದೆ ಮನಸೊÕ ಇಚ್ಚೆ ಬದುಕಿದವನು. ಆದರೆ ಇಂದು, ಹುಟ್ಟಿನಿಂದಲೂ ಕಂಡು, ಕೇಳರಿಯದ ಯಾತನೆಯ ಬದುಕು ಸಾಗಿಸಲೇ ಬೇಕಾದ ಅನಿವಾರ್ಯತೆ ಇದೆ. ಅದೂ ಇನ್ನಾರದೊ ಯಡವಟ್ಟಿನಿಂದ , ಮತ್ತಾರದೋ ತಪ್ಪು ನಿರ್ಧಾರಗಳಿಂದ ಸ್ವತ್ಛ, ಸುಂದರ, ಸುಖೀ ಜೀವಕ್ಕೆ ಸುನಾಮಿ ಅಪ್ಪಳಿಸಿದೆ !. ಹೆಸರು ರಂಗ. ಅಲಿಯಾಸ್ ಜೆಂಟಲ್ ರಂಗ. ಹೋಮ್ ಟೌನ್ ಬನ್ನೇರುಘಟ್ಟ, ರೌಂಡಿಂಗ್ ಏರಿಯಾ ನೆಲಮಂಗಲ, ಮಾಗಡಿ ಸೇರಿದಂತೆ ಅಪ್ ಟೂ ತುಮಕೂರು ವರೆಗೂ. ಆದರೆ ಇಂದು ರಂಗ ಕೇವಲ 14 ಅಡಿಗೆ 14 ಅಡಿ ವಿಸ್ತೀರ್ಣದ ಬೃಹತ್ ನೀಲಗಿರಿ ಮರಗಳಿಂದ ನಿರ್ಮಾಣವಾಗಿರುವ ಕ್ರಾಲ್ ನಲ್ಲಿ ಬಂಧಿಯಾಗಿ 40 ದಿನ ಕಳೆದು ಹೋಗಿದೆ !
Related Articles
Advertisement
ನಾವು ಇಲ್ಲಿ ಹೇಳ ಹೊರಟಿರುವ ಕಥೆಯ ನಾಯಕನೇ ರಂಗ. ಏಷ್ಯಾ ಖಂಡದಲ್ಲೆ ರಾಜಧಾನಿಗೆ ಸಮೀಪದಲ್ಲಿರುವ ರಾಷ್ಟ್ರೀಯ ಉದ್ಯಾನವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬನ್ನೇರುಘಟ್ಟದಲ್ಲೇ ವಾಸ. ಕಾಡಾನೆಗಳ ತಂಡ ನಾಯಕನಂತಿದ್ದವನೆ ಕಾಡಾನೆ ರಂಗ.
ಬೆಂಗಳೂರು ಹೊರವಲಯದ ಮಾಗಡಿ ಬಳಿ ಕಳೆದ ಡಿಸೆಂಬರ್ ಎರಡನೇ ವಾರದಲ್ಲಿ ಪುಂಡ ಕಾಡಾನೆಗಳನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಡುವ ಕಾರ್ಯಚರಣೆಯನ್ನು ಅರಣ್ಯ ಇಲಾಖೆ ಕೈಗೊಂಡಿತ್ತು. ಅದರಲ್ಲಿ ಮೊದಲಿಗೆ ಸೆರೆ ಹಿಡಿದ ಎರಡು ಆನೆಗಳನ್ನು ನಾಗರಹೊಳೆ ಅರಣ್ಯದಲ್ಲಿ ಬಿಡಲಾಯಿತು. ನಂತರ ಡಿ 24 ರಂದು ಮತ್ತೂಂದು ಕಾಡಾನೆ ಹಿಡಿಯುವ ಕಾರ್ಯಚರಣೆ ಆರಂಭವಾಯಿತು. ಅಂದು ಸೆರೆ ಸಿಕ್ಕಿದವನೇ ಈ ರಂಗ.
ರಂಗ ಹೇಳಿ ಕೇಳಿ ಬನ್ನೇರುಘಟ್ಟ ಅರಣ್ಯದ ಮೂಲ ವಾಸಿ. ತನ್ನ ಬದುಕಿನುದ್ದಕ್ಕೂ ವರ್ಷದ ಬಹುತೇಕ ದಿನಗಳನ್ನು ಇದೇ ಕಾಡಿನಲ್ಲೇ ಕಳೆಯುತ್ತಿದ್ದನು. ಬಹುಶ: ರಂಗ ಆನೆಯ ಹುಟ್ಟು ಇದೇ ಅರಣ್ಯದಲ್ಲಿರಬಹುದು. ಇಲ್ಲವೇ ಬನ್ನೇರುಘಟ್ಟ ಅರಣ್ಯವನ್ನೇ ತನ್ನ ತವರು ಮನೆಯನ್ನಾಗಿ ಮಾಡಿ ಕೊಂಡಿರಲುಬಹುದು.
ರಂಗ ಬನ್ನೇರುಘಟ್ಟ ಅರಣ್ಯದಲ್ಲಿರುವ ಹಿರಿಯ ಆನೆಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಹಿರಿಕ. ಅಲ್ಲದೆ, ಈ ಅರಣ್ಯಭಾಗದ ಕಾವಲು ಆನೆ ಹಾಗೂ ಹಲವು ಗಂಡಾನೆಗಳಿಗೆ ಮಾರ್ಗದರ್ಶಕನೂ ಆಗಿದ್ದ. ಅದೆಲ್ಲದಕ್ಕೂ ಮುಖ್ಯವಾಗಿ ವಂಶಾಭಿವೃದ್ಧಿ ಮಾಡುವ ಆನೆಗಳಲ್ಲಿ ಪ್ರಮುಖನಾಗಿದ್ದ. (ಬ್ರಿàಡಿಂಗ್ ಬುಲ್) ಇಂತ ಆನೆಯ ಸೆರೆ ಹಿಡಿದದ್ದು ಈ ಭಾಗದ ಅರಣ್ಯದ ಆನೆ ವಂಶಾಭಿವೃದ್ದಿಯಲ್ಲಿ ದೊಡ್ಡ ಮಟ್ಟದ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂಬುದು ವನ್ಯಜೀವಿ ತಜ್ಞರ ಅಭಿಮತವೂ ಇದೆ.
ಇಂತ ರಂಗನ ಬದುಕಿನ ಅಧ್ಯಯನ ನಡೆಸಲು ಮುಂದಾದ ತಂಡಕ್ಕೆ ಕಳೆದ 17 ವರ್ಷಗಳಿಂದ ರಂಗ ಇರುವಿಕೆ ದಾಖಲೆ ಸಿಕ್ಕಿದೆ. 2000 ಇಸವಿಯಲ್ಲಿ ತುಮಕೂರಿನಲ್ಲಿ 2004 ರಿಂದ ಬನ್ನೇರುಘಟ್ಟದಲ್ಲಿ ಕಾಣಿಸಿ ಕೊಂಡಿದ್ದಕ್ಕೆ ದಾಖಲೆ ಇದೆ.
ಸಹಜವಾಗಿ ರಂಗ ಫಸಲು ಸಮಯದಲ್ಲಿ ಅಂದರೆ ನವೆಂಬರ್ ನಿಂದ ಏಪ್ರಿಲ್ ತಿಂಗಳವರೆಗೆ ಹಳ್ಳಿಗಳ ಆಸುಪಾಸಿನ ಅರಣ್ಯದಲ್ಲಿ ಕಾಣಿಸಿಕೊಂಡರೆ, ಉಳಿದ 7 ತಿಂಗಳು ಕಾಡಿನ ನಡುವೆ ವಾಸ ಮಾಡುವವನು. ಇವನಿಗೆ ಸಹಜವಾಗಿ 35 ರಿಂದ 40 ವರ್ಷ ವಯಸ್ಸಾಗಿರ ಬಹುದು. ಹಾಗಾಗಿ ರಂಗ ಸಧ್ಯ ಮೆಚೂÂರ್ ಎಲಿಫೆಂಟ್ ಆಗಿದ್ದ.
ಮತ್ತೂಂದು ಮುಖ್ಯ ಸಂಗತಿ ಎಂದರೆ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣು ಮತ್ತು ಗಂಡು ಆನೆಗಳ ಸರಾಸರಿ ಲೆಕ್ಕಾ ಹಾಕಿದಾಗ 5 ಹೆಣ್ಣಾನೆಗಳಿಗೆ ಒಂದು ಗಂಡಾನೆ ಅಂತಿದೆ. ಇಂತಹ ಸಮಯದಲ್ಲಿ ಕಾಡಾನೆಗಳ ವಂಶಾಭಿವೃದ್ದಿಗೆ ರಂಗ ಪಾತ್ರ ಮುಖ್ಯವಾಗಿತ್ತೋ ಏನೋ!
ರಂಗ ನಾಡಿಗೆ ಬರಲು ಕಾರಣ ಏನು?ಹುಡುಕಿ ಹೊರಟರೆ ಕಾರಣಗಳನ್ನು ನಮ್ಮನ್ನೇ ಸುತ್ತಿಕೊಳ್ಳುತ್ತವೆ. ಬೆಂಗಳೂರಿನ ಟ್ರಾಫಿಕ್ ಜಾಮ್‌ನಂತೆ. ಅದು ಹೇಗೆಂದರೆ…ರಂಗ ಬನ್ನೇರುಘಟ್ಟದಿಂದ ತುಮಕೂರಿನತ್ತ ಸಾಗುವ ಹಾದಿ ಆದರೂ ಯಾವುದು ಎಂದರೆ ಅದು ಕನಕಪುರ ಮುಖ್ಯ ರಸ್ತೆಯ ದೇವಿಕಾರಾಣಿ ಎಸ್ಟೇಟ್, ಮೈಸೂರು ಮುಖ್ಯ ರಸ್ತೆಯ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಸಮೀಪದಲ್ಲಿ ರಂಗ ಹೆದ್ದಾರಿ ಕ್ರಾಸ್ ಮಾಡಿ ನಂತರ ಮಂಚನಬೆಲೆ ಡ್ಯಾಮ್, ಮಂಡ್ರಕುಪ್ಪೆ, ಅಂತರಗಂಗೆ, ಹಾಗೆ ತುಮಕೂರು ಸೇರುತ್ತಿದ್ದ. ಈ ದಾರಿ ಪೂರ ವಾಹನಗಳ ದಟ್ಟಣೆ ಹೆಚ್ಚು. ಅಲ್ಲದೆ ಮೈಸೂರು ರಸ್ತೆಯ ಬಸವಗಂಗೋತ್ರಿ ಅನಾಥ ಮಕ್ಕಳ ಆಶ್ರಮದ ಕಾಂಪೌಂಡ್ ಗೇಟ್ ನಿಂದಲೇ ಯಾವಾಗಲು ಬಂದು ಹೋಗುತ್ತಿತ್ತು. ರಂಗ ಎಂದು ಹೆಸರು ಬರಲು ಕಾರಣ…2004ರ ದಿನಗಳಲ್ಲಿ ಬನ್ನೇರುಘಟ್ಟ ಪಾರ್ಕ್ ಸುತ್ತಲು ಅಲೆದಾಡುತ್ತಿದ್ದಾಗ ಮಾವುತರಿಗೆ ಇವನನ್ನು ನೋಡಿ ತಟಕ್ಕಂತೆ ನೆನಪಾಗಿದ್ದು, ಶಿವಮೊಗ್ಗದ ಸಕ್ರೆಬೈಲು ಬಿಡಾರದಲ್ಲಿದ್ದ ಆನೆ ರಂಗನಂತೆ. ಆಗ ಮಾವುತರು ಇಟ್ಟ ಹೆಸರೇ ಚಾಲ್ತಿಗೆ ಬಂತು. ರಂಗನಿಗೆ ವರ್ಷಕ್ಕೊಮ್ಮೆ ಮದವೇರುತ್ತಿದ್ದಂತೆ ಬನ್ನೇರುಘಟ್ಟ ಮೃಗಾಲಯದ ಸಾಕಾನೆಗಳನ್ನು ಹುಡುಕಿಕೊಂಡು ಬಂದು ಬಿಡುತ್ತಿದ್ದ. ಅದೂ ಹಾಡಹಗಲೇ. ಎಲ್ಲಂದರಲ್ಲಿ ಬಂದು ಹೋಗುತ್ತಿದ್ದ. ಇಂತಹ ದಿನಗಳಲ್ಲಿ ರಂಗನ ಅಬ್ಬರ ನೋಡಿ ಬನ್ನೇರುಘಟ್ಟ ಸುತ್ತ ಮುತ್ತಲ ಗ್ರಾಮಸ್ಥರು ಹೆದರಿದ್ದರೂ ಹಾಗೇ ಒಂದಷ್ಟು ಮಂದಿ ರಂಗನನ್ನು ಇಷ್ಟಪಟ್ಟರು. ಕಳೆದ ಹತ್ತು ವರ್ಷಗಳ ಹಿಂದೆ ಸಹಜವಾಗಿ ಯಂಗ್ ಏಜ್‌ನಲ್ಲಿದ್ದ ರಂಗ, ಒಂಟಿ ಆನೆ ಎಂಬುದಕ್ಕೆ ಸರಿಯಾಗಿ ಯಾರಿಗೂ ಹೆದರದೆ ಎಲ್ಲಂದರಲ್ಲಿ ಮನಸೋ ಇಚ್ಚೆ ತಿರುಗಾಡುತ್ತಿದ್ದ. ಹಾಗೆ ದಷ್ಟಪುಷ್ಠನಾಗಿದ್ದರಿಂದ ಇವನಿಗೆ ರೌಡಿ ಪಟ್ಟ ಕಟ್ಟಿದರು. ವಾಸ್ತವವಾಗಿ ರಂಗನಿಂದ ಯಾರಾದರು ಮೃತ ಪಟ್ಟಿದ್ದಾರೆ ಅನ್ನೋದಕ್ಕೆ ಯಾವುದೇ ದಾಖಲೆ ಸಿಗುವುದಿಲ್ಲ. ಕೇವಲ ವದಂತಿಗಳಿಂದ ರಂಗನಿಗೆ ರೌಡಿ ಪಟ್ಟ ಬಂದಿದೆ ಅನ್ನೋರು ಇದ್ದಾರೆ. ತೀರ ಹತ್ತಿರದಿಂದ ನೋಡಿದವರಿಗೆ ಗೊತ್ತಿದೆ ರಂಗನ ದಿ ಗ್ರೇಟ್ ಜೆಂಟಲ್ ಎಲಿಫ್ಯಾಂಟ್ ಅಂತ. ರಂಗ 40
ಡಿಸೆಂಬರ್ 24 ರ ಬೆಳ್ಳಂಬೆಳಗ್ಗೆ ಮಾಗಡಿ ಸಮೀಪದ ಅರಣ್ಯದೊಳ್ಳಕ್ಕೆ ಡಾ ಉಮಾಶಂಕರ್ ನೇತೃತ್ವದ ತಂಡ ರಂಗನ್ನು ಹುಡುಕಿ ಹೊರಟಿತ್ತು. ದೂರದ ಪೊದೆಗಳಲ್ಲಿ ಕಂಡ ಆನೆ ರಂಗನೇ ಎಂದು ಖಚಿತ ಪಡಿಸಿಕೊಂಡ ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿ ರಂಗನ್ನು ನೆಲಕ್ಕೆ ಉರುಳಿಸಿದರು.
ನೆಲಕ್ಕೆ ಬಿದ್ದ ರಂಗನ ಕತ್ತು, ಕಾಲಿಗೆ ಹಗ್ಗ ಕಟ್ಟಿ ಸಾಕಾನೆಗಳಾದ ಅಭಿಮನ್ಯು, ಗಜೇಂದ್ರ, ಕೃಷ್ಣ, ಭೀಮಾ , ಹರ್ಷ ಎಂಬ ಐದು ಆನೆಗಳ ಸಹಾಯದಿಂದ ಕಾಡಿನಿಂದ ಹೊರಕ್ಕೆ ಎಳೆ ತಂದು, ಅಲ್ಲಿಂದ ಲಾರಿ ಹತ್ತಿಸಿ ಬನ್ನೇರುಘಟ್ಟಕ್ಕೆ ರಾತ್ರಿ 11 ಗಂಟೆ ಸುಮಾರಿಗೆ ತರಲಾಯಿತು. ರಂಗ ಆನೆಯನ್ನು ಕ್ರಾಲ್‌ನಲ್ಲಿ ಬಂಧಿಸಲು ಎರಡು ಗಂಟೆಗಳ ಸಿದ್ಧತೆ ಬಳಿಕ, ಗಜೇಂದ್ರ ಎಂಬ ಆನೆ ರಂಗನನ್ನು ಎಳೆದು ಕ್ರಾಲ್ ಬಳಿ ನಿಲ್ಲಿಸಿದ. ಅಭಿಮನ್ಯು ರಂಗನನ್ನು ಒಳ ನೂಕಲು ಮುಂದಾದ. ಕೊಡಲೆ ಮಂಪರಿನಲ್ಲಿದ್ದ ರಂಗ ವಿರೋಧ ವ್ಯಕ್ತ ಪಡಿಸಿದ. ಆಗ ಪಕ್ಕದಲ್ಲೇ ಇದ್ದ ಮೂರು ಆನೆಗಳು ಅಭಿಮನ್ಯುವಿಗೆ ಸಾಥ್ ನೀಡಿ ಕ್ರಾಲ್ ಒಳಗೆ ನೂಕಿ ಬಿಟ್ಟವು. ಅಂದೇ ಕಾಡಾನೆ ರಂಗ ತನ್ನ ಸ್ವೇಚ್ಚೆ ಬದುಕು ಕೊನೆ ಗೊಂಡಂತಾಯಿತು. ಇಂದಿಗೆ ಅದು 40 ದಿನಗಳು! ಮೊದಲ ದಿನ ಜೌಷಧ ಮಂಪರಿನಲ್ಲಿದ್ದ ರಂಗ ಕ್ರಾಲ್‌ನ ಮರದ ದಿಮ್ಮಿಗಳಿಗೆ ಗುದ್ದುತ್ತಿದ್ದ, ಹೂಂಕರಿಸುತ್ತಿದ್ದ. ನಿಧಾನವಾಗಿ ಮಂಪರು ಕಡಿಮೆಯಾಗುತ್ತಿದ್ದಂತೆ, ತಾನು ಬಂಧನದಲ್ಲಿದ್ದೆನೆಂದು ತಿಳಿಯುತ್ತಿದ್ದಂತೆ ತನ್ನ ಆರ್ಭಟ ಪ್ರದರ್ಶಿಸತೊಡಗಿದ. ಎರಡನೇ ದಿನ ರಾತ್ರಿ ರಂಗ 25 ಅಡಿಗಳ ಕ್ರಾಲ್‌ನಿಂದ ಹೊರ ಬರುಸು ಪ್ರಯತ್ನಿಸಿದ್ದ. ಅದೊಂದು ರಾತ್ರಿ ಕ್ರಾಲ್ ಬಳಿ ಯಾರು ಇರದಿದ್ದರೆ ಇಷ್ಟೊತ್ತಿಗೆ ರಂಗ ಗ್ರೇಟ್ ಎಸ್ಕೇಪ್. ಅಂದು ಮಾವುತರು ಕ್ರಾಲ್ ಸುತ್ತುವರೆದು ಮೇಲೆ ಏರುತ್ತಿದ್ದ ರಂಗನನ್ನು ಕೆಳಗೆ ನಿಲ್ಲುವಂತೆ ಮಾಡಿದ್ದರು. ಅರ್ಜುನ ಬಂದ
ರಂಗನ ಆರ್ಭಟಕ್ಕೆ ಹೆದರಿದ ಅಧಿಕಾರಿಗಳು ಕೂಡಲೆ ಮೈಸೂರು ದಸರಾ ಅಂಬಾರಿ ಹೊರುವ , ಕಾಡಾನೆಗಳನ್ನು ಹಿಡಿಯುವ ತಂಡದ ನಾಯಕ ಅರ್ಜುನನನ್ನು ಬರ ಮಾಡಿ ಕೊಂಡರು. ಅದೇ ದಿನದಲ್ಲಿ ಅರ್ಜುನನಿಗೆ ಮಧವೇರಿತ್ತು. ಮಧದ ವಾಸನೆ ಹಿಡಿದ ರಂಗ ಕ್ರಾಲ್‌ನಲ್ಲೇ ಮದುಡಿ ಹೋದ. ಇದೇ ಅವಕಾಶವನ್ನು ಬಳಸಿಕೊಂಡ ಮಾವುತರು ರಂಗನಿಗೆ ಪಾಠ ಕಲಿಸಲು ಮುಂದಾದರು.
40 ದಿನಗಳಲ್ಲಿ ರಂಗನ ಆರ್ಭಟ ಸಂಪೂರ್ಣ ಕಡಿಮೆಯಾಗಿದೆ. ಮಾವುತರ ಮಾತಿಗೆ ತಲೆ ಬಾಗುತ್ತಿದ್ದಾನೆ. ಸದ್ಯ ಕೂರುವುದು, ಸುಮ್ಮನೆ ನಿಲ್ಲುವುದು , ಊಟ ಕೊಟ್ಟಾಗ ಸ್ವೀಕರಿಸುವುದು ಹೀಗೆ ಪಾಠಗಳನ್ನು ರಂಗ ಕಲಿತಿದ್ದಾನೆ. ರಂಗನಿಗೆ ಮೆಸ್ಟ್ರ ಯಾರೂ?
ರಂಗನಿಗೆ ಪಾಠ ಹೇಳಿ ಕೊಡಲು ಆನೆ ಕುಟುಂಬದವರಾದ ಕೃಷ್ಣ ಮತ್ತು ದಿವಾಕರ್ ಎಂಬ ಇಬ್ಬರು ಯುವಕರನ್ನು ನೇಮಿಸಲಾಗಿದೆ. ಇವರೊಂದಿಗೆ ಅರ್ಜುನ ಆನೆಗಳ ಕಾವಾಡಿ ಮಹೇಶ್ ಮಾರ್ಗದರ್ಶನ ನೀಡುತ್ತಿದ್ದಾರೆ. ಮೈಸೂರು ಮೂಲ ಕೃಷ್ಣ ಆನೆ ಕುಟುಂಬದಿಂದ ಬಂದವನು. ಇವರ ತಂದೆ ಕೂಡ ಅಂಬಾರಿ ಆನೆಯ ಮಾವುತನಾಗಿದ್ದವರು. ಅವರ ಗರಡಿಯಲ್ಲಿ ಪಳಗಿರುವವನು ಕೃಷ್ಣ. ಇನ್ನೂ ದಿವಾಕರ್ ಸಹ ಆನೆ ಸಾಕುವ ಕುಟುಂಬದಿಂದಲೆ ಬಂದವರು. ಕಳೆದ ಆರು ವರ್ಷಗಳಿಂದ ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿ ಕೊಂಡವನಾಗಿದ್ದಾನೆ. ಕ್ರಾಲ್ ನಿರ್ಮಾಣ ಹೇಗೆ ?
ಕಾಡಿನಲ್ಲಿನ ಆನೆಗಳನ್ನು ಸೆರೆ ಹಿಡಿದು ಬಂಧಿಸಲು, ಪಳಗಿಸಲು ಎಲಿಫೆಂಟ್ ಕ್ರಾಲ್ ನಿರ್ಮಾಣ ಮಾಡಲಾಗುತ್ತದೆ. ಸಹಜವಾಗಿ ಕ್ರಾಲ್ ಆನೆ ಬಿಡಾರಗಳ ಬಳಿ ನಿರ್ಮಾಣವಾಗುತ್ತವೆ. ಕ್ರಾಲ್ ನಿರ್ಮಾಣಕ್ಕೆ ಮೂರು ಅಡಿಗಳಿಗೂ ಹೆಚ್ಚು ಅಗಲವಾಗಿರುವ 25 ಅಡಿಗಳಷ್ಟು ಉದ್ದವಿರುವ ನೀಲಗಿರಿ ಮರದ ದಿಮ್ಮೆಗಳನ್ನು ಸಂಗ್ರಹಿಸಿ ಕೊಳ್ಳಲಾಗುತ್ತದೆ. ಕ್ರಾಲ್ ನಿರ್ಮಾಣದ ಸ್ಥಳಕ್ಕೆ ಅಷ್ಟು ಮರದ ದಿಮ್ಮೆಗಳನ್ನು ತಂದು ಹಾಕುವುದು ಇಲಾಖೆಯ ಆನೆಗಳೇ. 10 ಅಡಿಗಳಿಗೆ 10 ಅಡಿ, 14 ಅಡಿಗಳಿಗೆ 14 ಅಡಿಗಳ ಒಟ್ಟು ವಿಸ್ತೀರ್ಣದ ಕ್ರಾಲ್ ನಿರ್ಮಾಣ ಮಾಡಲಾಗುತ್ತದೆ. ನಾಲ್ಕು ದಿಕ್ಕುಗಳಲ್ಲಿ ಸುಮಾರು ಹತ್ತು ಅಡಿಗಳ ಹಳ್ಳ ತೆಗೆದು ಒಂದೊಂದು ದಿಕ್ಕಿನಲ್ಲಿ ಮೂರು ಮೂರು ಮರಗಳನ್ನು ನೆಟ್ಟು ಸುತ್ತಲು ಕಲ್ಲು ಮಣ್ಣು , ಸಿಮೆಂಟ್ ಕಾಂಕ್ರಿಟ್ ನಿಂದ ಭರ್ತಿ ಮಾಡುತ್ತಾರೆ. ಆ ಮೂರು ಮರಗಳ ಸಮವಾಗಿ ಎರಡೆರಡು ಮರಗಳನ್ನು ನೆಡಲಾಗುತ್ತದೆ. ಅದೂ ಎರಡು ಮರಗಳ ನಡುವೆ ಮತ್ತೂಂದು ಮರದ ದಿಮ್ಮಿ ಸೇರಿಸುವಷ್ಟು ಅಂತರ ಇಟ್ಟಿರುತ್ತಾರೆ. ಹೀಗೆ ನಾಲ್ಕು ದಿಕ್ಕುಗಳಲ್ಲಿ ಮರಗಳನ್ನು ನೆಡಲಾಗುತ್ತದೆ. ದಿಮ್ಮಿಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಲಾಗುತ್ತದೆ. ಕ್ರಾಲ್‌ನ ಒಂದು ಭಾಗ ಬಿಟ್ಟು ಉಳಿದ ಮೂರು ಭಾಗಗಳಲ್ಲಿ ಮರದ ದಿಮ್ಮಿಗಳನ್ನು ಜೋಡಿಸಿರುತ್ತಾರೆ. ಸೆರೆ ಹಿಡಿದ ಆನೆಯನ್ನು ಕ್ರಾಲ್‌ನಲ್ಲಿ ನಿಲ್ಲಿಸಿದ ನಂತರ ಆ ಭಾಗಕ್ಕೂ ಮರದ ದಿಮ್ಮಿಗಳನ್ನು ಜೋಡಿಸಿ ದೊಡ್ಡ ಹಗ್ಗದಿಂದ ದಿಮ್ಮಿಗಳು ಅಲುಗಾಡದಂತೆ ಬಿಗಿ ಮಾಡಲಾಗುತ್ತದೆ. ಮರಗಳ ನಂತರ 14 ಅಡಿಗಳ ಕ್ರಾಲ್ ನಿರ್ಮಾಣಕ್ಕೆ ಸುಮಾರು 50 ರಿಂದ 60 ಮರದ ದಿಮ್ಮಿಗಳು, ಒಂದು ತಿಂಗಳು ಕಾಲಾವಕಾಶ ಬೇಕು. ಬನ್ನೇರುಘಟ್ಟ ವಲಯದ ಸೀಗೆಕಟ್ಟೆ ಕೆರೆಯ ಅರಣ್ಯದೊಳಗೆ ಸುಮಾರು 10 ಲಕ್ಷ ರೂ ವೆಚ್ಚ ಮಾಡಿ ಎರಡು ಎಲಿಫೆಂಟ್ ಕ್ರಾಲ್‌ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಕುಶಾಲನಗರದ ಆನೆ ಬಿಡಾರದಿಂದ ನುರಿತ , ಅನುಭವಿ ಮಾವುತ ಜಿ.ಕೆ ಉರಾಣೆ ಹಾಗೂ ಕವಾಡಿ ಜಿ.ಕೆ ಪುಟ್ಟ ಇಬ್ಬರ ನೆರವು ದೊರೆತಿದೆ. ಇದಕ್ಕಾಗಿ ಸುಮಾರು 30 ಜನ ಸಿಬ್ಬಂದಿ ಸತತ ಒಂದು ತಿಂಗಳ ಕಾಲ ಶ್ರಮಿಸಿದ್ದಾರೆ. ಮರ ಸಾಗಿಸಲು ಕ್ರೆ„ನ್ ಮತ್ತು ಲಾರಿ ಬಳಿಸಿಕೊಂಡು 30 ಅಡಿ
ಉದ್ದ ಮೂರು ಅಡಿ ದಪ್ಪ ಇದ್ದ ಮರಗಳನ್ನು ಬಳಸಿಕೊಳ್ಳಲಾಗಿದೆ.
ಇದೇ ರಂಗನ ಮನೆ. ಮಂಜುನಾಥ ಎನ್ ಬನ್ನೇರುಘಟ್ಟ