Advertisement

ರಾಣೆಬೆನ್ನೂರ:ವಿಷಪೂರಿತ ಆಹಾರ ಸೇವನೆ: 40 ಕುರಿಗಳ ಸಾವು

06:04 PM Jun 12, 2023 | Team Udayavani |

ರಾಣೆಬೆನ್ನೂರ: ವಿಷಪೂರಿತ ಆಹಾರ ಸೇವಿಸಿ 40ಕ್ಕೂ ಅಧಿಕ ಕುರಿಗಳು ಮೃತಪಟ್ಟಿರುವ ಘಟನೆ ಹಿನ್ನೆಲೆಯಲ್ಲಿ ರವಿವಾರ ಮೃತಪಟ್ಟ ಕುರಿಗಳ ಮಾಲೀಕ ಸೋಮಪ್ಪ ಕುರವತ್ತಿ ಹಾಗೂ ಕುರಿಗಾಹಿಗಳು ಮತ್ತು ರೈತರು ಕುರಿಗಳು ಸಾವಿಗೆ ಕಾರಣವಾಗಿರುವ ಖಾಸಗಿ ಕಂಪನಿಯನ್ನು ಸ್ಥಗಿತಗೊಳಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.

Advertisement

ಮಾಗೋಡ ಗ್ರಾಮದ ಅಂಡರ್‌ಬ್ರಿಡ್ಜ್ ಬಳಿ ಶನಿವಾರ ಖಾಸಗಿ ಕಂಪನಿ ಅವಧಿ ಮುಗಿದಿರುವ ಕುರ್‌ಕುರೆ ಪ್ಯಾಕೆಟ್‌ಗಳನ್ನು ರಸ್ತೆ
ಮೇಲೆ ಚೆಲ್ಲಲಾಗಿತ್ತು. ರಸ್ತೆ ಮೇಲಿದ್ದ ಪದಾರ್ಥಗಳನ್ನು ಸುಮಾರು 60ಕ್ಕೂ ಅಧಿಕ ಕುರಿಗಳು ಸೇವಿಸಿದ್ದವು. ಅವುಗಳಲ್ಲಿ 40ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿದ್ದು, ಇನ್ನೂ ಕೆಲ ಕುರಿಗಳು ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿವೆ. ಹೀಗಾಗಿ ಸಂಬಂಧಪಟ್ಟ ಕುರ್‌ಕುರೆ ಖಾಸಗಿ ಕಂಪನಿಯನ್ನು ಸ್ಥಗಿತಗೊಳಿಸಿ ಸಾವನ್ನಪ್ಪಿದ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ಕುರಿ ಸಾಕಾಣಿಕೆದಾರ ಸಂಘಗಳ ಮಹಾಮಂಡಳಿ ನಿರ್ದೇಶಕ ಜೆ. ಜಯಪ್ಪ ಮಾತನಾಡಿ, ಕುರ್‌ಕುರೆ ವಿಷಪೂರಿತ ಆಹಾರ
ಪದಾರ್ಥವನ್ನು ರಸ್ತೆ ಮೇಲೆ ಬೇಕಾಬಿಟ್ಟಿಯಾಗಿ ಎಸೆದು 40ಕ್ಕೂ ಅಧಿಕ ಕುರಿಗಳ ಸಾವಿಗೆ ಕಾರಣವಾಗಿರುವ ಕಂಪನಿಯನ್ನು ರಾಜ್ಯಾದ್ಯಂತ ಸ್ಥಗಿತಗೊಳಿಸಬೇಕು. ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಇಲ್ಲವಾದಲ್ಲಿ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹಲಗೇರಿ ಗ್ರಾಮೀಣ ಪೊಲೀಸ್‌ ಠಾಣೆ  ಪಿಎಸ್‌ಐ ಬಸನಗೌಡ ಬಿರಾದಾರ, ತಾಲೂಕು ಕುರುಬ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಕಾರ್ಯದರ್ಶಿ ಮೃತ್ಯುಂಜಯ ಗುದಿಗೇರ, ಗ್ರಾಮಲೆಕ್ಕಾಧಿ ಕಾರಿ ಸಿ.ಎನ್‌. ಪೂಜಾರ, ಅಶೋಕ ಢವಳೇಶ್ವರ, ಆನಂದ್‌ ಹುಲ್ಬನ್ನಿ, ಬರಮಪ್ಪ ಕಂಬಳಿ, ರಾಮಪ್ಪ, ಸಿದ್ದಪ್ಪ, ಹನುಮಂತಪ್ಪ ಕುರವತ್ತಿ, ಸುರೇಶ ಮಡಿವಾಳರ, ನೀಲಪ್ಪ ದೇವರಗುಡ್ಡ, ಲೋಕಪ್ಪ ಇದ್ದರು.

ಮಾಗೋಡ ಗ್ರಾಮದ ರೈತ ಸೋಮಪ್ಪ ಬಸಪ್ಪ ಕುರುವತ್ತಿಯ ಕುರಿಗಳು ಸಾವನ್ನಪ್ಪಿರುವ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಸಾವನ್ನಪ್ಪಿರುವ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರವನ್ನು ಕೊಡಲು ನಮಗೆ ಬರುವುದಿಲ್ಲ. ಸ್ಥಳೀಯ ಶಾಸಕರ ಸಲಹೆ
ಪಡೆದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ಸೂಕ್ತ ಪರಿಹಾರ ನೀಡುವಂತೆ ಪ್ರಾಮಾಣಿಕ
ಪ್ರಯತ್ನ ಮಾಡುತ್ತೇವೆ.
ಎ. ಗುರುಬಸವರಾಜ,
ತಹಶೀಲ್ದಾರ್‌ ರಾಣೆಬೆನ್ನೂರ

Advertisement

ಕುರಿಗಳು ವಿಷಪೂರಿತ ಆಹಾರವನ್ನು ಸೇವಿಸಿ ಮೃತಪಟ್ಟಿವೆ. ಇನ್ನೂ ಕೆಲ ಕುರಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದೇವೆ.
ಮೃತಪಟ್ಟ ಕುರಿಗಳನ್ನು ಪೋಸ್ಟ್‌ ಮಾರ್ಟಂ ಮಾಡಿಸಿ ವರದಿ ಸಲ್ಲಿಸುತ್ತೇವೆ.
ಡಾ| ರಾಘವೇಂದ್ರ, ಪಶುವೈದ್ಯ

 

Advertisement

Udayavani is now on Telegram. Click here to join our channel and stay updated with the latest news.

Next