Advertisement

Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್

08:21 PM Jul 03, 2024 | Team Udayavani |

ಹೊಸನಗರ: ಬುಧವಾರ ಸುರಿದ ಮಳೆಗೆ ತಾಲೂಕಿನ ನಗರ ಸಮಗೋಡು ಮಾರ್ಗ ಮಧ್ಯೆ ಭೂತನೋಣಿಯಲ್ಲಿ ಧರೆ ಕುಸಿದು 3 ಗಂಟೆ ಕಾಲ ಸಂಚಾರ ಬಂದ್ ಆಗಿತ್ತು.

Advertisement

ಭಾರೀ ಪ್ರಮಾಣದ ಧರೆ ಕುಸಿತ ಮತ್ತು‌ ಮರಗಳು ರಸ್ತೆಗೆ ಅಡ್ಡಲಾಗಿ‌ ಬಿದ್ದು ರಾಣಿಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ-766c ಯಲ್ಲಿ ವಾಹನ ಸಂಚಾರ ಸ್ತಬ್ದಗೊಂಡಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ನಗರ ಪೊಲೀಸರು ದೌಡಾಯಿಸಿ ಜೆಸಿಬಿ ತರಿಸಿ ಕಾಮಗಾರಿ ಆರಂಭಿಸಲಾಯ್ತು. ಸ್ಥಳೀಯರ ಸಹಕಾರದಿಂದ ಸತತ ಕಾರ್ಯಾಚರಣೆ ಬಳಿಕ ಸಂಜೆ 4 ಗಂಟೆಯಿಂದ ಬಂದ್ ಹೆದ್ದಾರಿ ಮಾರ್ಗವನ್ನು 7 ಗಂಟೆಗೆ ಮುಕ್ತಗೊಳಿಸಲಾಯಿತು.

ವಾಹನಗಳ ಪರದಾಟ: ಹೆದ್ದಾರಿ ಸಂಚಾರ ಸ್ಥಗಿತಗೊಳಿಸುತ್ತಿದ್ದಂತೆ ಬಸ್ಸು, ಟೂರಿಸ್ಟ್ ಕಾರು, ಬಸ್ಸುಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಕಾರ್ಯಾಚರಣೆ ವೇಳೆ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು ಪ್ರಯಾಣಿಕರು ತಮ್ಮ ವಾಹನಗಳಲ್ಲೇ ಜಾಮ್ ಆಗಿದ್ದು ಗಮನಸೆಳೆಯಿತು. ಅಲ್ಲದೇ ಶಾಲಾ ಕಾಲೇಜುಗಳಿಂದ ಮನೆಗೆ ತೆರಳುವ ಸಮಯವಾಗಿದ್ದರಿಂದ ಬಪ್ಪನಮನೆ, ಮತ್ತಿಮನೆ, ಸಂಪೇಕಟ್ಟೆ, ಬೈಸೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಪರದಾಡುವಂತಾಯ್ತು. 3 ಗಂಟೆ ಟ್ರಾಫಿಕ್ ಜಾಮ್ ಆದ ಕಾರಣ ಹೆದ್ದಾರಿಯ ಎರಡು ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವ್ಯಾಪಕ ಮಳೆ:
ಮಂಗಳವಾರ ರಾತ್ರಿಯಿಂದ ಹೊಸನಗರ ತಾಲೂಕು, ಅದರಲ್ಲೂ ನಗರ ಹೋಬಳಿ ವ್ಯಾಪ್ತಿಯಲ್ಲಿ ಬಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳ ತೊರೆಗಳು ತುಂಬಿ‌ಹರಿಯುತ್ತಿದ್ದು ಶರಾವತಿ ನದಿಗೆ ಯತೇಚ್ಚ ನೀರು ಹರಿದು ಹೋಗುತ್ತಿದೆ.

Advertisement

ರಜೆ ನೀಡುವುದು ಶಾಲೆಗಳ ಜವಾಬ್ದಾರಿ:
ವಾರದಿಂದ ಬಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡುವ ಸಂಬಂಧ ಆಯಾಯ ಶಾಲೆ ಮತ್ತು ಶಾಲಾಭಿವೃದ್ಧಿ ಸಮಿತಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಬಿಇಒ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: Mangaluru: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ… ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next