Advertisement

Ranebennur: ದೇವಿ ಆರಾಧನೆಯಿಂದ ಸಾತ್ವಿಕ ಗುಣ ಪ್ರಾಪ್ತಿ

02:42 PM Oct 23, 2023 | Team Udayavani |

ರಾಣಿಬೆನ್ನೂರ: ಹುಬ್ಬಳ್ಳಿ ಸಿದ್ಧಾರೂಢರು ಸ್ವಯಂ ದೇವಿ ಸ್ವರೂಪವೇ ಆಗಿದ್ದು, ಮನುಷ್ಯರಲ್ಲಿರುವ ದುರ್ಗುಣಗಳನ್ನು ದೂರ ಮಾಡಿ, ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳುವ ಶಕ್ತಿ ತುಂಬಿದವರು. ದೇವಿ ಆರಾಧನೆಯಿಂದ ದುಷ್ಟ ಗುಣಗಳು ನಾಶವಾಗಿ
ಸುಗುಣವಂತರಾಗಲು ಸಾಧ್ಯ ಎಂದು ಪೂಜ್ಯ ಶ್ರೀ ಗುರು ನಾಗರಾಜಾನಂದ ಮಹಾಸ್ವಾಮೀಜಿ ಹೇಳಿದರು.

Advertisement

ರವಿವಾರ ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಲೋಕಕಲ್ಯಾಣಾರ್ಥ ಏರ್ಪಡಿಸಲಾಗಿದ್ದ 28ನೇ ವರ್ಷದ ದೇವಿ ಪುರಾಣ ಪ್ರವಚನದ ಮಂಗಲೋತ್ಸವ ಮತ್ತು ಗಾಯತ್ರಿ ಹೋಮ, ಹವನ ಹಾಗೂ ಪೂಜಾ ವಿಧಿ ವಿಧಾನಗಳ ನಂತರ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿ ಆಶೀರ್ವಚನ ನೀಡಿದರು.

ಆರೂಢ ಪರಂಪರೆಯ ಮಠಗಳು ತನ್ನನ್ನು ತಾನು ಮೊದಲು ತಿಳಿಯಲು ಜ್ಞಾನದ ಅಮೃತಧಾರೆ ಉಣಿಸುತ್ತಾ ಬಂದಿವೆ. ಅದ್ವೈತ ಜ್ಞಾನದಿಂದ ಜನಸಾಮಾನ್ಯರು ಮುಕ್ತಿಯ ಮಾರ್ಗ ಪಡೆಯಲು ಸದಾ ಗುರು ಚಿಂತನೆ ಹಾಗೂ ಗುರು ಮಾರ್ಗದಲ್ಲಿ ನಡೆದರೆ ಮಾತ್ರ ಸಾಧ್ಯ. ಎಲ್ಲ ನದಿಗಳು ಸಮುದ್ರ ಸೇರುವಂತೆ ಎಲ್ಲಾ ಮಠಗಳ ಉದ್ದೇಶ ಜನರನ್ನು ಮುಕ್ತಿ ಮಾರ್ಗದೆಡೆಗೆ ಕೊಂಡೊಯ್ಯುವುದೇ ಆಗಿದೆ ಎಂದರು.

ತೇತ್ರಾಯುಗದಲ್ಲಿ ಶ್ರೀರಾಮಚಂದ್ರನು ನಾರದ ಮುನಿಗಳ ಮಾರ್ಗ ದರ್ಶನದಂತೆ ನವರಾತ್ರಿ ವ್ರತ ಆಚರಿಸಿ ರಾವಣನನ್ನು ಸಂಹರಿಸಲು ಹಾಗೂ ದ್ವಾಪರ ಯುಗದಲ್ಲಿ ದೇವತೆಯನ್ನು ಪೂಜಿಸಿ ಆಶೀರ್ವಾದ ಪಡೆದಿದ್ದರಿಂದ ಪಾಂಡವರು ದುಷ್ಟರಿಂದ ಬಿಡುಗಡೆ ಹೊಂದಿದರು ಎಂಬುದನ್ನು ಮಹಾಭಾರತದಲ್ಲಿ ನಾವು ನೋಡುತ್ತೇವೆ. ಅದರ ಸಂಕೇತವಾಗಿ ಇಂದು ನಾವು ದಸರಾ ಉತ್ಸವ ಆಚರಿಸುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಚಳಗೇರಿಯ ವೇ. ಚನ್ನಯ್ಯ ಶಾಸ್ತ್ರಿಗಳು ಹಾಗೂ ಸಂಗಡಿಗರು ಸಿದ್ಧಾರೂಢರ ಮೂರ್ತಿ ಹಾಗೂ ಗಾಯತ್ರಿ ದೇವಿ ಮೂರ್ತಿಗೆ ಬ್ರಾಹ್ಮಿ ಮೂರ್ತದಲ್ಲಿ ಅಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳ ಅಲಂಕಾರ ಮಾಡಿ, ಗಾಯತ್ರಿ ಹೋಮ, ಹವನ ಹಾಗೂ ನವಗ್ರಹ ಪೂಜಾ ವಿಧಿವಿಧಾನಗಳನ್ನು ಸತತ 3 ಗಂಟೆಗಳ ಕಾಲ ನಡೆಸಿಕೊಟ್ಟರು.

Advertisement

ವಿಧಾಸಭೆ ಉಪಸಭಾಧ್ಯಕ್ಷ ಹಾಗೂ ಶ್ರೀಮಠದ ಕಾರ್ಯದರ್ಶಿ ರುದ್ರಪ್ಪ ಮಾನಪ್ಪ ಲಮಾಣಿ, ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪ ಗೌಡ್ರ, ಡಾ| ಮೋಹನ ಹಂಡೆ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಕಡೂರು, ಅರುಣಸ್ವಾಮಿ ಹಿರೇಮಠ, ಗೋಪಾಲ ಕೊಡ್ಲೆರ, ಮಹೇಶ ಹನಗೋಡಿ, ಕರಬಸಪ್ಪ ಮಾಕನೂರ, ಡಾಕೇಶ ಲಮಾಣಿ, ಶಿವಪ್ಪ ಬಣಕಾರ, ಗುಡ್ಡಪ್ಪ ಹೆಡಿಯಾಲ, ಮಹಾದೇವಪ್ಪ ಬಣಕಾರ, ಗಂಗಾಧರ ಬಣಕಾರ, ಬಸನಗೌಡ ಮುದಿಗೌಡ್ರ, ಶಿವು
ಗುತ್ತೂರ, ವಿಶ್ವನಾಥ ಕುಂಬಳೂರ, ಮೈಲಾರಪ್ಪ ಸೋಮಲಾಪುರ, ಮಲ್ಲಿಕಾಜುನ ಹಲಗೇರಿ ಸೇರಿದಂತೆ ಸಾವಿರಕ್ಕೂ ಅಧಿಕ ಭಕ್ತರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next