Advertisement
ಸುದ್ದಿಗೋಷ್ಠಿಯಲ್ಲಿ ಮೂತ್ರಪಿಂಡ ತಜ್ಞ ಡಾ.ವೆಂಕಟೇಶ ಮೊಗೇರ ಮಾತನಾಡಿ, ಎಂಟು ವರ್ಷದ ಮಲ್ಲು ಕೋಟಿಕಲ್ಲ ಎಂಬ ಬಾಲಕನಿಗೆ ಆತನ ಅಜ್ಜನ ಮೂತ್ರಪಿಂಡ ದಾನ ಪಡೆದು ಜೋಡಿಸಲಾಗಿದೆ. ಇಂತಹ ಶಸ್ತ್ರಚಿಕಿತ್ಸೆ ಉತ್ತರ ಕರ್ನಾಟಕದಲ್ಲಿ ಮೊದಲು. ಕಳೆದ ಐದು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಬಾಲಕ ನಮ್ಮ ಆಸ್ಪತ್ರೆಗೆ ಬಂದಾಗ ಮೂತ್ರಪಿಂಡ ಜೋಡಣೆ ಅನಿರ್ವಾಯವಾಗಿತ್ತು. ಬಾಲಕನ ಅಜ್ಜನ ಕಿಡ್ನಿ ಪಡೆದು ಬಾಲಕನಿಗೆ ಜೋಡಿಸಲಾಗಿದೆ ಎಂದರು.
ತಿಳಿಸಿದರು. ಮಗುವಿನ ತಂದೆ ಸೋಮಪ್ಪ ಕೋಟಿಕಲ್ಲ, ಕಿಡ್ನಿ ದಾನ ಮಾಡಿದ ಹುಚ್ಚಪ್ಪ ನರಿ, ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಡಾ.ದಿಲೀಪ ಜವಳಿ, ಡಾ.ಮಂಜು ಪ್ರಸಾದ, ಡಾ.ಭರತ ಕ್ಷತ್ರಿ, ಡಾ.ಸಂಜೀವ ಕುಲಗೋಡ, ಡಾ.ಶ್ರೀನಿವಾಸ ಹರಪನಹಳ್ಳಿ, ಡಾ.ಬಸವರಾಜ ಕಲ್ಲಾಪುರ, ಡಾ.ವಿನೋದ ರಟ್ಟಿಗೇರಿ, ಡಾ.ಸುಧೀಂದ್ರ ಪತೇಪೂರ, ಡಾ.ಶೀತಲ ಕುಲಗೋಡ ಇದ್ದರು.