Advertisement
ಜಿಲ್ಲೆಯಲ್ಲಿ ನಿತ್ಯ 5 ಸಾವಿರ ಜನರಿಗೆ ಕೊರೊನಾ ಪರೀಕ್ಷೆ ನಡೆಸುವ ಗುರಿ ಹೊಂದಿದ್ದೇವೆ. ಪ್ರೌಢ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು -ಬೋಧಕ ಸಿಬಂದಿ, ಹೊಟೇಲ್, ರೆಸ್ಟೋರೆಂಟ್, ಮಾಲ್, ಅಂಗಡಿ ಮುಂಗಟ್ಟುಗಳ ಮಾಲಕರು-ಸಿಬಂದಿ, ಕ್ಯಾಟರಿಂಗ್ ಸಿಬಂದಿ, ಮನೆ ಮನೆಗೆ ಆಹಾರ ಪದಾರ್ಥ ವಿತರಿಸುವವರು, ಕಾರ್ಖಾನೆ, ಕಚೇರಿಗಳು, ಪಬ್, ಬಾರ್, ಸಿನೆಮಾ ಮಂದಿರ, ಮಲ್ಟಿಪ್ಲೆಕ್ಸ್ ಗಳ ಸಿಬಂದಿಗೆ ಮುಂದಿನ ಒಂದು ವಾರದಲ್ಲಿ ರ್‍ಯಾಂಡಮ್ ಪರೀಕ್ಷೆ ಮಾಡಲಿದ್ದೇವೆ. ಸಾರ್ವಜನಿಕರು ಗುಂಪು ಸೇರಿದಾಗಲೂ ರ್‍ಯಾಂಡಮ್ ಪರೀಕ್ಷೆ ನಡೆಸುತ್ತೇವೆ ಎಂದರು.
Related Articles
Advertisement
ಕಾರ್ಯಕ್ರಮ ಮುಂದಕ್ಕೆ :
ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ, ಹಬ್ಬ-ಸಮಾರಂಭಗಳನ್ನು 2022ರ ಜನವರಿಗೆ 15ರವರೆಗೆ ಮುಂದೂಡಲು ಸೂಚನೆ ನೀಡಿದ್ದೇವೆ. ರಾಜಕೀಯ ಸಮಾವೇಶ, ಮದುವೆ ಸಹಿತವಾಗಿ ಎಲ್ಲ ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ 500 ಜನರಿಗೆ ಮಿತಿ ನೀಡಲಾಗಿದೆ. ಇಲ್ಲಿ ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಕಾರ್ಯಕ್ರಮ ಸಂಘಟಕರು ಅಥವಾ ವ್ಯವಸ್ಥಾಪಕರ ಜವಾಬ್ದಾರಿ. ಈ ಬಗ್ಗೆ ವಿಚಕ್ಷಣದಳದಿಂದ ನಿಗಾ ವಹಿಸಲಾಗುತ್ತದೆ. ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದವರಿಗೆ ಮಾತ್ರ ಮಾಲ್ ಹಾಗೂ ಚಿತ್ರಮಂದಿರಗಳಿಗೆ ಪ್ರವೇಶ ನೀಡಲಾಗುತ್ತದೆ. ಈ ಬಗ್ಗೆ ಅಲ್ಲಿನ ಸಿಬಂದಿ ಹಾಗೂ ವ್ಯವಸ್ಥಾಪಕರಿಗೆ ಸ್ಪಷ್ಟ ಸೂಚನೆ ನೀಡಲಾಗುತ್ತದೆ ಎಂದು ವಿವರ ನೀಡಿದರು.
ಜಿ.ಪಂ. ಸಿಇಒ ಡಾ| ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್, ಎಡಿಸಿ ಬಾಲಕೃಷ್ಣಪ್ಪ ಪತ್ರಿಕಾಗೋಷ್ಠಿ ಯಲ್ಲಿದ್ದರು.