Advertisement

ರ್‍ಯಾಂಡಮ್‌ ಸೋಂಕು ಪರೀಕ್ಷೆ: ಮಂಗಮ್ಮನಪಾಳ್ಯದಲ್ಲಿ ನೆಗೆಟಿವ್‌!

04:42 AM May 16, 2020 | Lakshmi GovindaRaj |

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನಪಾಳ್ಯ ವಾರ್ಡ್‌ನಲ್ಲಿ ಗುರುವಾರ ರ್‍ಯಾಂಡಮ್‌ ಸೋಂಕು ಪರೀಕ್ಷೆ ಮಾಡಲಾಗಿದ್ದ 21ಜನರ ವರದಿಯೂ ನೆಗೆಟಿವ್‌ ಬಂದಿದ್ದು, ಈ ಭಾಗದಲ್ಲಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಹೊಂಗಸಂದ್ರದಲ್ಲಿ ಸೋಂಕು ದೃಢಪಟ್ಟ ಮೇಲೆ ಮಂಗಮ್ಮನಪಾಳ್ಯದಲ್ಲೂ ಆರು ಜನರಲ್ಲಿ ಸೋಂಕು ದೃಢಪಟ್ಟಿತ್ತು.

Advertisement

ಸೋಂಕು ದೃಢಪಟ್ಟವರ ಮೂಲದ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಗುರುವಾರ 21ಜನರನ್ನು ರ್‍ಯಾಂಡಮ್‌ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಬೊಮ್ಮನಹಳ್ಳಿಯ ಆರೋಗ್ಯಾಧಿಕಾರಿ ಡಾ.ಸುರೇಶ್‌ ಅವರು, ಈ ಭಾಗದಲ್ಲಿನ 21ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲರ ವರದಿ  ನೆಗೆಟಿವ್‌ ಬಂದಿದೆ.

ಶುಕ್ರವಾರ ಈ ಭಾಗದಲ್ಲಿ ರ್‍ಯಾಂಡಮ್‌ ಸೋಂಕು ಪರೀಕ್ಷೆ ಮಾಡಿಲ್ಲ. ಆದರೆ, ಸುತ್ತಮುತ್ತಲಿನ ಭಾಗದಲ್ಲಿ ಆರೋಗ್ಯ ತಪಾಸಣೆ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ವಿವರಿಸಿದರು. ಇನ್ನು ಹೊಂಗಸಂದ್ರದಲ್ಲಿ  ಕ್ವಾರಂಟೈನ್‌ ಅವಧಿ ಮುಗಿಸಿ  ರುವವರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು,

ಉತ್ತರ ಪ್ರದೇಶದಿಂದ ವಲಸೆ ಬಂದಿದ್ದ 19ಜನರನ್ನು ಶುಕ್ರವಾರ ಕಳುಹಿಸಲಾಗಿದ್ದು, ಬಿಹಾರದಿಂದ ವಲಸೆ ಬಂದಿದ್ದ 86ಜನರನ್ನು ಮೇ 21ಕ್ಕೆ ಅವರ ಊರು ಗಳಿಗೆ ರೈಲಿನ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next