Advertisement

ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ

04:18 PM Oct 25, 2021 | Team Udayavani |

ಬೆಂಗಳೂರು: ಬಿಜೆಪಿಯವರು ಹಣದಿಂದ ಮತ ಖರೀದಿಗೆ ಹೊರಟಿದ್ದಾರೆ. ನಮ್ಮ‌ಅಭ್ಯರ್ಥಿಗಳಿಬ್ಬರು ಬಹಳ ಒಳ್ಳೆಯವರಿದ್ದಾರೆ. ಮಸ್ಕಿಯಲ್ಲಿ ಗೆದ್ದಂತೆ ಇಲ್ಲೂ ನಾವೇ ಗೆಲ್ಲುತ್ತೇವೆ. ಬಿಜೆಪಿಯ ಗರ್ವವನ್ನು ಮತದಾರರು ಮುರಿಯಲಿದ್ದಾರೆ. ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೆಕಗೆಸ್ಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಉಪಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಲಿದೆ. ಗೆಲುವಿನ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಇದು ನಮ್ಮ‌ವಿಶ್ವಾಸವಲ್ಲ, ಜನತೆಯ ವಿಶ್ವಾಸ. ರೈತರು, ದಲಿತರು, ಅಲ್ಪಸಂಖ್ಯಾತರು ನಮ್ಮ ಪರವಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅವರು ನಿಂತಿದ್ದಾರೆ ಎಂದರು.

ಬೆಂಗಳೂರಿನಲ್ಲಿ‌ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಆದರೆ ಇಬ್ಬರು ಮಂತ್ರಿಗಳು ಕಿತ್ತಾಡ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ಸರಿಪಡಿಸಲು ಆಗುತ್ತಿಲ್ಲ. ಬೆಂಗಳೂರು ಉಸ್ತುವಾರಿಗಾಗಿ ಕಚ್ಚಾಡ್ತಿದ್ದಾರೆ ಎಂದು ಕಿಡಿಕಾರಿದರು.

ಆರ್ ಎಸ್ಎಸ್ ಬಗ್ಗೆ ಜೆಡಿಎಸ್ ಆರೋಪ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ವಿಶ್ವವೇ ನೋಡುತ್ತಿದೆ. ನಾನೇನು ಹೆಚ್ಚು ಮಾತನಾಡುವುದಿಲ್ಲ ಎಂದರು.

ಇದನ್ನೂ ಓದಿ:ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

Advertisement

ಪೆಟ್ರೋಲ್, ಗ್ಯಾಸ್ ರೇಟ್ ಹೆಚ್ಚಳವಾಗಿದೆ. ಅಡಿಗೆ ಎಣ್ಣೆ 200 ರೂ ಆಗಿದೆ. ಅಂಗನವಾಡಿ ಮಕ್ಕಳಿಗೆ ಆಹಾರ ಸಿಗುತ್ತಿಲ್ಲ. ಇವರ ಅಧಿಕಾರದಲ್ಲಿ ಎಲ್ಲವೂ ಮಿಸ್ ಆಗುತ್ತಿದೆ. ಜನರ ವಿರುದ್ಧದ ಧೋರಣೆ ಬಿಜೆಪಿಯದ್ದಾಗಿದೆ. ಬಿಜೆಪಿ ಷಡ್ಯಂತ್ರ ಇಡೀ ಪ್ರಪಂಚ ನೋಡುತ್ತಿದೆ. ವಾಹನ ಸವಾರರು ಪೆಟ್ರೋಲ್ ಖರೀದಿಸಲಾಗುತ್ತಿಲ್ಲ. ಸಿಲಿಂಡರ್ ಕೊಳ್ಳಲಾಗದೆ ಮಹಿಳೆಯರು ಒದ್ದಾಡ್ತಿದ್ದಾರೆ. ಜನ ಇವತ್ತು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸುರ್ಜೆವಾಲಾ ಆಕ್ರೋಶ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next