Advertisement

40 ಸೀಟು ಗೆಲ್ಲಲು ಸಾಧ್ಯವಿಲ್ಲದ BJPಯಲ್ಲಿ 25ಕ್ಕೂ ಹೆಚ್ಚು ಸಿಎಂ ಆಕಾಂಕ್ಷಿಗಳು: Surjewala

08:59 PM Apr 20, 2023 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ. ಎಲ್ಲಾ ನಾಯಕರು ಸರ್ವ ಸಮ್ಮತದಿಂದ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ 40 ಪರ್ಸೆಂಟ್ ಸರಕಾರದ ಬಿಜೆಪಿ 40 ಸೀಟು ಗೆಲ್ಲಲು ಸಾಧ್ಯವಿಲ್ಲ‌ ಹೀಗಿರುವಾಗ 25 ಕ್ಕೂ ಹೆಚ್ಚು ಜನರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಲೇವಡಿ ಮಾಡಿದರು.

Advertisement

ಗುರುವಾರ ಸಂಜೆ ಇಲ್ಲಿನ ಬದಾಮಿ ನಗರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯಲ್ಲಿ ಬಿ.ಎಲ್.ಸಂತೋಷ, ಪ್ರಹ್ಲಾದ ಜೋಶಿ, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಸೇರಿದಂತೆ 25 ಕ್ಕೂ ಹೆಚ್ಚು ಜನ ಪೈಪೋಟಿ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಲ್ಲಿ ಈ ಬಗ್ಗೆ ಸ್ಪಷ್ಟತೆಯಿದ್ದು, 150 ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವುದಾಗಿದ್ದು, ಈ ಟಾರ್ಗೇಟ್ ಮುಟ್ಟುತ್ತೇವೆ. ಹೈಕಮಾಂಡ್ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರ ಮಾಡಲಿದೆ ಎಂದರು.

ಬಿಜೆಪಿ ಪಕ್ಷವು ಲಿಂಗಾಯತರು, ದಲಿತರನ್ನು, ಅಲ್ಪಸಂಖ್ಯಾತರನ್ನು ಅವಮಾನಿಸುವುದು ಅಜೆಂಡಾ ಆಗಿದೆ. ಪಕ್ಷದಲ್ಲಿ ದುಡಿದವರನ್ನು ಮೂಲೆಗುಂಪು ಮಾಡುವ ಮೂಲಕ ಅಪಮಾನ ಮಾಡುತ್ತಿದೆ. ಈ ಕುತಂತ್ರಕ್ಕೆ ಜನರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದೆ. ಬಿಜೆಪಿ ನಾಯಕರು ಎಷ್ಟೇ ವಾಮ ಮರ್ಗದಲ್ಲಿ ಹೋದರು ಜನರನ್ನು ವಂಚಿಸಲು ಸಾಧ್ಯವಿಲ್ಲ. ಜಗದೀಶ ಶೆಟ್ಟರಂತಹ ನಾಯಕರ ಆಗಮನದಿಂದ ಪಕ್ಷದ ಕಾರ್ಯಕರ್ತರು, ನಾಯಕಲ್ಲಿ ಹುಮ್ಮಸ್ಸು ಹಾಗೂ ಹೆಚ್ಚಾಗಿದೆ ಎಂದರು.

ಇದನ್ನೂ ಓದಿ: ಸಿದ್ದು ಸವದಿ ನಾಮಪತ್ರ ಸಲ್ಲಿಕೆ: ರಬಕವಿ-ಬನಹಟ್ಟಿಗೆ ಹರಿದು ಬಂದ ಜನಸಾಗರ

Advertisement

Udayavani is now on Telegram. Click here to join our channel and stay updated with the latest news.

Next