Advertisement
ರಾಜ್ಯದ ಪ್ರತೀ ಜಿಲ್ಲೆಯಲ್ಲಿನ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿ ಹಾಗೂ ಜೆಡಿಎಸ್ ಸಾಮರ್ಥ್ಯದ ಬಗ್ಗೆಯೂ ವಾಸ್ತವಿಕ ವರದಿ ಪಡೆದ ಅನಂತರವಷ್ಟೇ ಟಿಕೆಟ್ ಅಂತಿಮಗೊಳಿಸಲು ನಿರ್ಧರಿಸಿದೆ.
Related Articles
Advertisement
ಸುರ್ಜೇವಾಲ ಕಸರತ್ತು: ಸುರ್ಜೇವಾಲ ಅವರೂ ನಾಯಕರ ನಡುವಿನ ಭಿನ್ನಮತ ಶಮನಕ್ಕೂ ಕಸರತ್ತು ನಡೆಸಿ ಸೂತ್ರ ಸಿದ್ಧಪಡಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಶಿವಮೊಗ್ಗ, ತುಮಕೂರು, ಬೆಳಗಾವಿ ಸಹಿತ ಹಲವು ಜಿಲ್ಲೆಗಳಲ್ಲಿ ಆಂತರಿಕವಾಗಿ ಇರುವ ಸಮಸ್ಯೆಗಳ ನಿವಾರಣೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಈ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿ ಆಗಲಿದೆ ಎಂಬ ಮಾಹಿತಿ ಹೈಕಮಾಂಡ್ ತಲುಪಿದೆ. ಹೀಗಾಗಿಯೇ ಸುಜೇìವಾಲ ಅವರಿಗೆ ಈ ಹೊಣೆಗಾರಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.
ರಾಜ್ಯ ನಾಯಕರ ಜತೆ ಮುನಿಸಿ ಕೊಂಡಿದ್ದ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಪರಿಷತ್‌ನ ಮಾಜಿ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರನ್ನು ಬಿಜೆಪಿಯತ್ತ ಸೆಳೆಯಲು ನಡೆಸಿದ್ದ ಪ್ರಯತ್ನದ ಮಾಹಿತಿ ಪಡೆದ ಸುಜೆೇìವಾಲ ಇಬ್ಬರ ಜತೆಯೂ ಚರ್ಚಿಸಿ ಖುದ್ದು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿ ಯಾದರು. ಇದೇ ರೀತಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ನಾಯಕರ ನಡುವೆ ಇದ್ದ ಭಿನ್ನಾಭಿಪ್ರಾಯ ನಿವಾರಣೆಗೆ ಸಭೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ನಾಯಕರ ನಡುವಿನ ಭಿನ್ನಾ ಭಿಪ್ರಾಯ ಶಮನಗೊಳಿಸಿ ಪ್ರತೀ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ, ಅದಕ್ಕೆ ಹಾಕಬೇಕಾಗಿರುವ ಶ್ರಮ, ಜಾತಿವಾರು ಲೆಕ್ಕಾ ಚಾರ ಜತೆಗೆ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಸಾಮರ್ಥ್ಯ ಎಲ್ಲ ಅಂಶಗಳೂ ಈ ವರದಿಯಲ್ಲಿ ಇರ ಲಿದೆ ಎಂದು ತಿಳಿದು ಬಂದಿದೆ.
ವರದಿಯಲ್ಲಿ ಏನಿರಲಿದೆ?ಜಿಲ್ಲೆಯಲ್ಲಿನ ರಾಜಕೀಯ ಪರಿಸ್ಥಿತಿ
ಕ್ಷೇತ್ರಗಳಲ್ಲಿನ ಬಿಜೆಪಿ, ಜೆಡಿಎಸ್‌ನ ಸಾಮರ್ಥ್ಯ
ಕಾಂಗ್ರೆಸ್‌ನ ಆಂತರಿಕ ತಿಕ್ಕಾಟಗಳ ಮಾಹಿತಿ
ಕ್ಷೇತ್ರಗಳಲ್ಲಿನ ಜಾತಿವಾರು ಲೆಕ್ಕಾಚಾರ -ಎಸ್.ಲಕ್ಷ್ಮೀ ನಾರಾಯಣ