Advertisement

ನವೆಂಬರ್‌ನಲ್ಲಿ ರಾಂಚಿ ಚಿತ್ರ ಬಿಡುಗಡೆ

10:29 AM Oct 06, 2019 | Sriram |

ಶಿವಮೊಗ್ಗ: ನೈಜ ಘಟನೆಯನ್ನು ಆಧರಿಸಿದ ಚಿತ್ರ “ರಾಂಚಿ’ ಚಿತ್ರವು ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಪ್ರಭು ಮುಂಡ್ಕೂರ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ರಾಂಚಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ “ರಾಂಚಿ’ ಚಲನಚಿತ್ರವಾಗಿದ್ದು, ಸಸ್ಪೇನ್ಸ್‌, ಥ್ರಿಲ್ಲರ್‌, ಕ್ರೈಮ್‌ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಶಶಿಕಾಂತ್‌ ಗಟ್ಟಿ ನಿರ್ದೇಶನ ಮಾಡಿದ್ದಾರೆ.

ರಾಂಚಿಗೆ ಹೋಗಿ ಅಲ್ಲಿ ಮೋಸ ಹೋದ ನೈಜ ಘಟನೆ ಆಧಾರಿತ ಸಿನಿಮಾ “ರಾಂಚಿ’ ಬಿಡುಗಡೆಗೆ ಸಿದ್ಧ ಘಟನೆಯನ್ನು ಕ್ರಿಕೆಟ್‌ ದಿಗ್ಗಜ ಎಂ.ಎಸ್‌. ಧೋನಿ ಅವರ ತವರೂರಾದ ರಾಂಚಿಯಲ್ಲೇ ಶೇ.50 ರಷ್ಟು ಚಿತ್ರಿಕರಣವನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಲಕ್ಷ್ಮಣ್‌ ಮತ್ತು ಸತ್ಯ ಖಳನಾಯಕರಾಗಿ ನಟಿಸಿದ್ದಾರೆ. ನನ್ನ ತಾಯಿ ಊರು ಶಿವಮೊಗ್ಗವಾಗಿದ್ದು, ಈ ಯುವ ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಖುಷಿ ತಂದಿದೆ ಎಂದರು.

ಚಿತ್ರದ ನಟಿ ದಿವ್ಯಾ ಮಾತನಾಡಿ, ನಾನು ಸಹ ತೀರ್ಥಹಳ್ಳಿಯವರಾಗಿದ್ದು, ಯುವ ದಸರಾದ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಸಂತೋಷವಾಗುತ್ತಿದೆ ಎಂದರು.
ಯುವ ದಸರಾ ಸಮಿತಿ ಅಧ್ಯಕ್ಷ ಇ.ವಿಶ್ವಾಸ್‌ ಮಾತನಾಡಿ, ಶಿವಮೊಗ್ಗ ದಸರಾವನ್ನು ಅತ್ಯಂತ ವೈಭವದಿಂದ ಆಚರಿಸಲು 12 ವಿಭಾಗಗಳನ್ನು ಮಾಡಲಾಗಿದೆ. ಅದರಲ್ಲಿ ಯುವ ದಸರಾ ಸಮಿತಿಯು ಒಂದು. ಯುವ ದಸರಾದಲ್ಲಿ ಯುವ ಜನಾಂಗಕ್ಕಾಗಿ ಮನರಂಜನೆ, ಕ್ರೀಡೆ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಸ್ಪರ್ಧೆಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ ಹಾಗೂ ನಗರದ ಜನತೆ ಸಹ ಸಹಕಾರ ನೀಡುತ್ತಿದ್ದಾರೆ. ಇಂದು ಸಂಜೆ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಯುವ ದಸರಾ ಸಮಾರಂಭದಲ್ಲಿ ರಾಂಚಿ ಚಿತ್ರತಂಡವನ್ನು ಆಹ್ವಾನಿಸಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಗೋಷ್ಠಿಯಲ್ಲಿ ಯುವ ದಸರಾ ಸಮಿತಿಯ ಸದಸ್ಯ ನಾಗರಾಜ್‌ ಕಂಕಾರಿ, ಚಿತ್ರ ನಿರ್ಮಾಪಕ ಅರುಣ್‌ಕುಮಾರ್‌, ಪೃಥ್ವಿಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next