Advertisement

ಟ್ವೀಟರ್‌ನಲ್ಲಿ ರಿಯಲ್‌ –ರೀಲ್‌ ತಂದೆ ಜತೆ ಧೋನಿ ಫೋಟೋ ಪೋಸ್‌

06:30 AM Oct 05, 2017 | |

ರಾಂಚಿ: ರಿಯಲ್‌ ಮತ್ತು ರೀಲ್‌ ತಂದೆಯ ಜತೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಫೋಟೋ ಪೋಸು ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು ರಿಯಲ್‌ ತಂದೆ ಪಾನ್‌ ಸಿಂಗ್‌ ಧೋನಿ ಮತ್ತು  ರೀಲ್‌ ತಂದೆ ಬಾಲಿವುಡ್‌ ನಟ ಅನುಪಮ್‌ ಖೇರ್‌. 

Advertisement

ಇತ್ತೀಚೆಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ ರಾಂಚಿಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಧೋನಿ ಮನೆಗೆ ಭೇಟಿ ನೀಡಿ ಧೋನಿ ಮತ್ತು ಅವರ ತಂದೆಯ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಟ್ವೀಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಲೈಕ್‌ ಮತ್ತು ಕಾಮೆಂಟ್‌ಗಳನ್ನು ನೀಡಿದ್ದಾರೆ. ಧೋನಿ ಜೀವನಚರಿತ್ರೆ ಆಧಾರಿತ ಚಿತ್ರ “ಎಂ.ಎಸ್‌.ಧೋನಿಃ ದಿ ಅನ್‌ಟೋಲ್ಡ್‌ ಸ್ಟೋರಿ’ ಕಳೆದ ವರ್ಷ ಬಿಡುಗಡೆಯಾಗಿ ಭಾರೀ ಯಶಸ್ಸು ಸಾಧಿಸಿದೆ. ಈ ಚಿತ್ರದಲ್ಲಿ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಧೋನಿ ಪಾತ್ರದಲ್ಲಿ ಅಭಿನಯಿಸಿದರೆ, ಧೋನಿ ತಂದೆ ಪಾತ್ರದಲ್ಲಿ ಅನುಪಮ್‌ ಖೇರ್‌ ಅಭಿನಯಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next