Advertisement

ರಾಂಚಿ: ಮಿಂಚಿನ ಆಟವಾಡಿ ಗೆದ್ದ ಆಸೀಸ್‌

12:30 AM Mar 09, 2019 | |

ರಾಂಚಿ: ಸತತ 2 ಪಂದ್ಯಗಳನ್ನು ಸೋತು ಸರಣಿ ಸೋಲಿನ ಅಂಚಿನಲ್ಲಿದ್ದ ಆಸ್ಟ್ರೇಲಿಯ ರಾಂಚಿಯಲ್ಲಿ ಮಿಂಚಿನ ಆಟವಾಡಿ ಗೆಲುವಿನ ಖಾತೆ ತೆರೆದಿದೆ. ಸರಣಿಯನ್ನು ಜೀವಂತವಾಗಿರಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 5 ವಿಕೆಟಿಗೆ 313 ರನ್‌ ಪೇರಿಸಿದರೆ, ಭಾರತ 281ಕ್ಕೆ ಆಲೌಟ್‌ ಆಯಿತು. ಭಾರತದ ಅಭಿಮಾನಿಗಳಿಗೆ ಸಮಾಧಾನ ಮೂಡಿಸಿದ ಸಂಗತಿಯೆಂದರೆ ನಾಯಕ ವಿರಾಟ್‌ ಕೊಹ್ಲಿ ಬಾರಿಸಿದ ಸತತ 2ನೇ ಶತಕ. ಆರಂಭಿಕರ ವೈಫ‌ಲ್ಯದ ಬಳಿಕ ತಂಡದ ಬ್ಯಾಟಿಂಗ್‌ ಭಾರ ಹೊತ್ತ ಕೊಹ್ಲಿ 95 ಎಸೆತಗಳಿಂದ 123 ರನ್‌ ಸೂರೆಗೈದರು (16 ಬೌಂಡರಿ, 1 ಸಿಕ್ಸರ್‌). ಇದು ಕೊಹ್ಲಿ ಅವರ 41ನೇ ಏಕದಿನ ಶತಕ. ತವರಿನ ಹೀರೋ ಧೋನಿ ಕೇವಲ 26 ರನ್‌ ಮಾಡಿ ನಿರಾಸೆ ಮೂಡಿಸಿದರು.

Advertisement

ಖ್ವಾಜಾ-ಫಿಂಚ್‌ ಭರ್ಜರಿ ಪಂಚ್‌
ಉಸ್ಮಾನ್‌ ಖ್ವಾಜಾ ಮತ್ತು ನಾಯಕ ಆರನ್‌ ಫಿಂಚ್‌ 32ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಭಾರತದ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು. ಇವರ ಅಬ್ಬರದ ಜತೆಯಾಟದಲ್ಲಿ 193 ರನ್‌ ಹರಿದು ಬಂತು. ಖ್ವಾಜಾ ಮೊದಲ ಶತಕ ಸಂಭ್ರಮವನ್ನಾಚರಿಸಿದರೆ, ಬ್ಯಾಟಿಂಗ್‌ ಬರಗಾಲದಿಂದ ಹೊರಬಂದ ಫಿಂಚ್‌ ಏಳೇ ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು. ಖ್ವಾಜಾ 113 ಎಸೆತಗಳನ್ನೆದುರಿಸಿ 104 ರನ್‌ ಬಾರಿಸಿದರು. ಇದರಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಒಳಗೊಂಡಿತ್ತು. ಫಿಂಚ್‌ ಅವರ 93 ರನ್‌ 99 ಎಸೆತಗಳಿಂದ ಬಂತು. ಸಿಡಿಸಿದ್ದು 10 ಫೋರ್‌, 3 ಸಿಕ್ಸರ್‌. ಫಿಂಚ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸುವ ಮೂಲಕ ಕುಲದೀಪ್‌ ಯಾದವ್‌ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ರಾಂಚಿಯಲ್ಲಿ ರನ್‌ ಸರಾಗವಾಗಿ ಹರಿದು ಬರುತ್ತಿದ್ದುದನ್ನು ಗಮನಿಸಿದ ಫಿಂಚ್‌, 3ನೇ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಕ್ರೀಸಿಗೆ ಇಳಿಸಿದರು. ಎಂದಿನ ಸಿಡಿಲಬ್ಬರದ ಹೊಡೆತಗಳಿಗೆ ಮುಂದಾದ “ಮ್ಯಾಕ್ಸಿ’, 31 ಎಸೆತಗಳಿಂದ 47 ರನ್‌ ಬಾರಿಸಿದರು (3 ಬೌಂಡರಿ, 3 ಸಿಕ್ಸರ್‌).

ಸಾಮಾನ್ಯವಾಗಿ ಡೆತ್‌ ಓವರ್‌ಗಳಲ್ಲಿ ಧಾರಾಳ ರನ್‌ ಬಿಟ್ಟುಕೊಡುತ್ತಿದ್ದ ಭಾರತದ ಬೌಲರ್‌ಗಳು ಇಲ್ಲಿ ನಿಯಂತ್ರಣ ಸಾಧಿಸಿದ್ದು ವಿಶೇಷವಾಗಿತ್ತು. ಕೊನೆಯ 10 ಓವರ್‌ಗಳಲ್ಲಿ ಆಸೀಸ್‌ಗೆ ಗಳಿಸಲು ಸಾಧ್ಯವಾದದ್ದು 69 ರನ್‌ ಮಾತ್ರ. ಇಲ್ಲವಾದರೆ ಪ್ರವಾಸಿಗರ ಸ್ಕೋರ್‌ 350ರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು.

ಯೋಧರ ಕ್ಯಾಪ್‌ ಧರಿಸಿದ ಕ್ರಿಕೆಟಿಗರು
ರಾಂಚಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾರತೀಯ ಕ್ರಿಕೆಟಿಗರು ರಾಂಚಿ ಪಂದ್ಯದ ವೇಳೆ ಗೌರವ ಸಲ್ಲಿಸಿದ್ದಾರೆ. ಟೀಮ್‌ ಇಂಡಿಯಾ ಸದಸ್ಯರೆಲ್ಲರೂ ಯೋಧರ ಕ್ಯಾಪ್‌ ಧರಿಸಿ ಆಡಿದರು. ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್‌ ಆಗಿರುವ ಧೋನಿ ಈ ಕ್ಯಾಪ್‌ಗ್ಳನ್ನು ಹಸ್ತಾಂತರಿಸಿದರು. ಜತೆಗೆ ಭಾರತದ ಆಟಗಾರರೆಲ್ಲ ಒಂದು ದಿನದ ಪಂದ್ಯದ ಸಂಭಾವನೆಯನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಅರ್ಪಿಸಿದ್ದಾರೆ. ಒಂದು ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರಿಗೆ ತಲಾ 8 ಲಕ್ಷ ರೂ. ಸಿಗುತ್ತದೆ. ಮೀಸಲು ಆಟಗಾರರಿಗೆ ಇದರ ಅರ್ಧದಷ್ಟು ಸಂಭಾವನೆ ಸಿಗುತ್ತದೆ. ಎಲ್ಲ ಆಟಗಾರರಿಂದ ಸೇರಿ ಒಟ್ಟು 1.2 ಕೋಟಿ ರೂ. ರಕ್ಷಣಾ ನಿಧಿಗೆ ಸೇರಲಿದೆ.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ
ಆರನ್‌ ಫಿಂಚ್‌    ಎಲ್‌ಬಿಡಬ್ಲ್ಯು ಕುಲದೀಪ್‌    93
ಉಸ್ಮಾನ್‌ ಖ್ವಾಜಾ    ಸಿ ಬುಮ್ರಾ ಬಿ ಶಮಿ    104
ಗ್ಲೆನ್‌ ಮ್ಯಾಕ್ಸ್‌ವೆಲ್‌    ರನೌಟ್‌    47
ಶಾನ್‌ ಮಾರ್ಷ್‌    ಸಿ ಶಂಕರ್‌ ಬಿ ಕುಲದೀಪ್‌    7
ಮಾರ್ಕಸ್‌ ಸ್ಟೋಯಿನಿಸ್‌    ಔಟಾಗದೆ    31
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಎಲ್‌ಬಿಡಬ್ಲ್ಯು ಕುಲದೀಪ್‌    0
ಅಲೆಕ್ಸ್‌ ಕ್ಯಾರಿ    ಔಟಾಗದೆ    21

Advertisement

ಇತರ        10
ಒಟ್ಟು  (50 ಓವರ್‌ಗಳಲ್ಲಿ 5 ವಿಕೆಟಿಗೆ)    313
ವಿಕೆಟ್‌ ಪತನ: 1-193, 2-239, 3-258, 4-263, 5-263.

ಬೌಲಿಂಗ್‌:
ಮೊಹಮ್ಮದ್‌ ಶಮಿ    10-0-52-1
ಜಸ್‌ಪ್ರೀತ್‌ ಬುಮ್ರಾ        10-0-53-0
ರವೀಂದ್ರ ಜಡೇಜ        10-0-64-0
ಕುಲದೀಪ್‌ ಯಾದವ್‌        10-0-64-3
ವಿಜಯ್‌ ಶಂಕರ್‌        8-0-44-0
ಕೇದಾರ್‌ ಜಾಧವ್‌        2-0-32-0

ಭಾರತ
ಶಿಖರ್‌ ಧವನ್‌   ಸಿ ಮ್ಯಾಕ್ಸ್‌ವೆಲ್‌ ಬಿ ರಿಚರ್ಡ್‌ಸನ್‌    1
ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ಕಮಿನ್ಸ್‌    14
ವಿರಾಟ್‌ ಕೊಹ್ಲಿ    ಬಿ ಝಂಪ    123
ಅಂಬಾಟಿ ರಾಯುಡು    ಬಿ ಕಮಿನ್ಸ್‌    2
ಎಂ.ಎಸ್‌. ಧೋನಿ    ಬಿ ಝಂಪ    26
ಕೇದಾರ್‌ ಜಾಧವ್‌    ಎಲ್‌ಬಿಡಬ್ಲ್ಯು ಝಂಪ    26
ವಿಜಯ್‌ ಶಂಕರ್‌      ಸಿ ರಿಚರ್ಡ್‌ಸನ್‌ ಬಿ ಲಿಯೋನ್‌    32
ರವೀಂದ್ರ ಜಡೇಜ       ಸಿ ಮ್ಯಾಕ್ಸ್‌ವೆಲ್‌ ಬಿ ರಿಚರ್ಡ್‌ಸನ್‌    24
ಕುಲದೀಪ್‌ ಯಾದವ್‌    ಸಿ ಫಿಂಚ್‌ ಬಿ ಕಮಿನ್ಸ್‌    10
ಮೊಹಮ್ಮದ್‌ ಶಮಿ    ಸಿ ಕಮಿನ್ಸ್‌ ಬಿ ರಿಚರ್ಡ್‌ಸನ್‌    8
ಜಸ್‌ಪ್ರೀತ್‌ ಬುಮ್ರಾ    ಔಟಾಗದೆ    0

ಇತರ        15
ಒಟ್ಟು  (48.2 ಓವರ್‌ಗಳಲ್ಲಿ ಆಲೌಟ್‌)    281
ವಿಕೆಟ್‌ ಪತನ: 1-11, 2-15, 3-27, 4-86, 5-174, 6-219, 7-251, 8-273, 9-281.

ಬೌಲಿಂಗ್‌:
ಪ್ಯಾಟ್‌ ಕಮಿನ್ಸ್‌        8.2-1-37-3
ಜೇ ರಿಚರ್ಡ್‌ಸನ್‌        9-2-37-3
ಮಾರ್ಕಸ್‌ ಸ್ಟೋಯಿನಿಸ್‌        5-0-39-0
ನಥನ್‌ ಲಿಯೋನ್‌        10-0-57-1
ಆ್ಯಡಂ ಝಂಪ        10-0-70-3
ಗ್ಲೆನ್‌ ಮ್ಯಾಕ್ಸ್‌ವೆಲ್‌        5-0-30-0

ಪಂದ್ಯಶ್ರೇಷ್ಠ: ಉಸ್ಮಾನ್‌ ಖ್ವಾಜಾ
 

Advertisement

Udayavani is now on Telegram. Click here to join our channel and stay updated with the latest news.

Next