Advertisement

Ranbir Kapoor: ಹೊಸ ಲುಕ್‌ನಲ್ಲಿ ರಣಬೀರ್‌ ಕಪೂರ್‌; ಧೂಮ್‌ 4ಗೆ ತಯಾರಿ?

04:14 PM Oct 16, 2024 | Team Udayavani |

ನಟ ರಣಬೀರ್‌ ಕಪೂರ್‌ ಈಗ ಬಾಲಿವುಡ್‌ನ‌ಲ್ಲಿ ಅತ್ಯಂತ ಬಿಝಿಯಾಗಿರುವ ನಟ. ಅನಿಮಲ್‌ ಸಿನಿಮಾ ಭರ್ಜರಿ ಗೆಲುವಿನ ನಂತರ ಅವರ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ರಾಮಾಯಣ ಚಿತ್ರದಲ್ಲಿ ರಾಮನ ಪಾತ್ರಧಾರಿಯಾಗಿದ್ದಾರೆ.

Advertisement

ಇದರ ನಡುವೆಯೇ ಅವರ ಹೊಸ ಲುಕ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನೂತನವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡ ರಣಬೀರ್‌, ಅದರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸದ್ಯ ಅಭಿಮಾನಿಗಳು ಅವರ ಹೊಸ ಲುಕ್‌ಗೆ ಫಿದಾ ಆಗಿದ್ದು, ಇದು ಧೂಮ್‌ 4 ಚಿತ್ರಕ್ಕಾಗಿನ ತಯಾರಿ ಎಂದು ಮಾತನಾಡುತ್ತಿದ್ದಾರೆ.

ಬಾಲಿವುಡ್‌ನ‌ಲ್ಲಿ ಹೊಸ ಕ್ರೇಜ್‌ ಹುಟ್ಟಿಸಿದ ಧೂಮ್‌ ಫ್ರಾಂಚೈಸಿ ಸಿನಿಮಾ, ಈಗ ನಾಲ್ಕನೇ ಅವತರಣಿಕೆಯಲ್ಲಿ ಬರಲು ಸಜ್ಜಾಗುತ್ತಿದೆ. ಇದರಲ್ಲಿ ರಣಬೀರ್‌ ಖಳನಟನಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಅದಕ್ಕಾಗಿ ಈ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next