Advertisement

Animal Teaser: ಸಿರಿವಂತನ ರಗಡ್‌ ಕಹಾನಿ; ಮಾಸ್‌ ಲುಕ್‌ ನಲ್ಲಿ ಮಿಂಚಿದ ʼರಾಕ್‌ ಸ್ಟಾರ್‌ʼ

10:26 AM Sep 28, 2023 | Team Udayavani |

ಮುಂಬಯಿ: ರಣ್ಬೀರ್‌ ಕಪೂರ್‌ ಅಭಿನಯದ ಬಹು ನಿರೀಕ್ಷಿತ ʼಅನಿಮಲ್‌ʼ ಚಿತ್ರದ ಟೀಸರ್‌ ಗುರುವಾರ(ಸೆ.28 ರಂದು) ರಿಲೀಸ್‌ ಆಗಿದೆ.

Advertisement

ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನ ʼಅನಿಮಲ್‌ʼ ಸಿನಿಮಾದಲ್ಲಿ ʼರಾಕ್‌ ಸ್ಟಾರ್‌ʼ ರಣ್ಬೀರ್‌ ಕಪೂರ್‌ ವಿಭಿನ್ನ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಪೋಸ್ಟರ್‌ ಇತ್ತೀಚೆಗೆ ರಿವೀಲ್‌ ಆಗಿತ್ತು. ಮೇಲ್ನೋಟಕ್ಕೆ ಇದೊಂದು ಮಾಸ್‌ ಕಂಟೆಂಟ್‌ ವುಳ್ಳ ಸಿನಿಮಾವೆನ್ನುವುದು ಅದರ ಪೋಸ್ಟರ್‌ ನೋಡಿದರೆ ತಿಳಿಯುತ್ತದೆ.

ಇದಲ್ಲದೆ ಈ ಸಿನಿಮಾದಲ್ಲಿ ಸೌತ್‌ ಬೆಡಗಿ ರಶ್ಮಿಕಾ ಮಂದಣ್ಣ ಅವರು ʼಗೀತಾಂಜಲಿʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚೆಗೆ ಪೋಸ್ಟರ್‌ ರಿಲೀಸ್‌ ಮಾಡುವ ಚಿತ್ರತಂಡ ಹೇಳಿತ್ತು. ನಟ ಬಾಬಿ ಡಿಯೋಲ್‌ ನೆಗೆಟಿವ್‌ ಶೆಡ್‌ ನಲ್ಲಿ ಕಾಣಿಸಿಕೊಳ್ಳಲಿರುವ ಬಗೆಗಿನ ಪೋಸ್ಟರ್‌ ರಿಲೀಸ್‌ ಮಾಡಿ ಸಿನಿಮಾದ ಹೈಪ್‌ ಹೆಚ್ಚಿಸಿದೆ.

ಇದೀಗ ʼಅನಿಮಲ್‌ʼ ಟೀಸರ್‌ ರಿಲೀಸ್‌ ಮಾಡಲಾಗಿದೆ. ಶ್ರೀಮಂತ ಮನೆತನದ ಹುಡುಗನೊಬ್ಬನ ಗ್ಯಾಂಗ್ ಸ್ಟರ್‌ ಕಥೆಯ ಎಳೆಯನ್ನು ಟೀಸರ್‌ ನಲ್ಲಿ ತೋರಿಸಲಾಗಿದೆ. ರಣ್ಬೀರ್‌ ಕಪೂರ್‌ ಇಲ್ಲಿ ಅಪ್ಪನ ಮಾತನ್ನು ಈಡೇರಿಸಲು ಪಾತಕಲೋಕದಲ್ಲಿ ನೆತ್ತರು ಹರಿಸುವ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ʼಗೀತಾಂಜಲಿʼ ಅವರಿಗೆ ತನ್ನ ಅಪ್ಪ ಜಗತ್ತಿನ ಬೆಸ್ಟ್‌ ಅಪ್ಪವೆಂದು ಹೇಳುವ ಮೂಲಕ ಟೀಸರ್‌ ಝಲಕ್‌ ಆರಂಭಿಸಲಾಗಿದೆ. ಕೊನೆಯಲ್ಲಿ ಸಿಕ್ಸ್‌ ಪ್ಯಾಕ್‌ ಲುಕ್‌ ನಲ್ಲಿ ಬಾಬಿ ಡಿಯೋಲ್‌ ಅವರ ಒಂದು ಲುಕ್‌ ನ್ನು ತೋರಿಸಲಾಗಿದೆ.

ಚಾಕ್ಲೇಟ್‌ ಬಾಯ್‌ ರಣ್ಬೀರ್‌ ಹುಟ್ಟುಹಬ್ಬಕ್ಕೆ ʼಅನಿಮಲ್‌ʼ ಟೀಸರ್‌ ರಿಲೀಸ್‌ ಆಗಿದ್ದು, ಮಾಸ್‌ ಟೀಸರ್‌ ನೋಡಿ ಅಭಿಮಾನಿಗಳ ಥ್ರಿಲ್‌ ಆಗಿದ್ದಾರೆ.

Advertisement

ರಣ್ಬೀರ್‌ ಕಪೂರ್‌  ಅವರೊಂದಿಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ʼಅನಿಮಲ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಡಿಸೆಂಬರ್‌ 1 ರಂದು ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next