Advertisement

Ranbir Kapoor:‌ ‘ಅನಿಮಲ್‌’ ಟೀಸರ್‌ ಡೇಟ್‌ ಔಟ್; ಹೊಸ ಪೋಸ್ಟರ್‌ ನಲ್ಲಿ ಮಿಂಚಿದ ರಣ್ಬೀರ್

12:02 PM Sep 18, 2023 | Team Udayavani |

ಮುಂಬಯಿ: ಬಾಲಿವುಡ್‌ ನಟ ರಣ್ಬೀರ್‌ ಕಪೂರ್‌ ವೃತ್ತಿ ಬದುಕಿನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಅನಿಮಲ್‌’ ಸಿನಿಮಾದ ಬಿಗ್‌ ಅಪ್ಡೇಟ್‌ ವೊಂದು ಸೋಮವಾರ(ಸೆ.18 ರಂದು) ಹೊರಬಿದ್ದಿದೆ.

Advertisement

ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನ ಮಾಡಿರುವ ಸಿನಿಮಾದ ಚಿತ್ರೀಕರಣ ಇದೇ ವರ್ಷದ ಏಪ್ರಿಲ್ ನಲ್ಲಿ ಮನಾಲಿ, ಹಿಮಾಚಲ ಪ್ರದೇಶದಲ್ಲಿ ಶುರುವಾಗಿತ್ತು. ಇತ್ತೀಚೆಗೆ ರಣ್ಬೀರ್‌ ಕಪೂರ್‌ ಹಿಂದೆಂದೂ ಕಾಣಿಸಿಕೊಳ್ಳದ ಮಾಸ್‌ ಅವತಾರವುಳ್ಳ ಪೋಸ್ಟರ್‌ ವೊಂದನ್ನು ಸಿನಿಮಾ ತಂಡ ರಿವೀಲ್‌ ಮಾಡಿತ್ತು. ಈ ಪೋಸ್ಟರ್‌ ವೈರಲ್‌ ಆಗಿತ್ತು.

ಅಂದುಕೊಂಡಂತೆ ಆಗಿದ್ದರೆ ಪ್ಯಾನ್‌ ಇಂಡಿಯಾ ‘ಅನಿಮಲ್‌’ ಸಿನಿಮಾ ಈಗಾಗಲೇ ರಿಲೀಸ್‌ (ಆ.11 ರಂದು) ಆಗಿರಬೇಕಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದಿದ್ದರಿಂದ ಸಿನಿಮಾದ ರಿಲೀಸ್‌ ಡೇಟ್ ಮುಂದೂಡಲಾಗಿತ್ತು.

ಸಿನಿಮಾ ಡಿಸೆಂಬರ್‌ 1 ರಂದು ವರ್ಲ್ಡ್‌ ವೈಡ್‌ ರಿಲೀಸ್‌ ಆಗಲಿದೆ. ಇದೇ ಸೆ.28 ರಂದು ಬೆಳಗ್ಗೆ 10 ಗಂಟೆಗೆ ಸಿನಿಮಾದ ಟೀಸರ್‌ ರಿಲೀಸ್‌ ಮಾಡುವುದಾಗಿ ಸಿನಿಮಾ ತಂಡ ಪೋಸ್ಟರ್‌ ವೊಂದನ್ನು ರಿವೀಲ್‌ ಮಾಡುವುದರ ಜೊತೆಗೆ ಟೀಸರ್‌ ಡೇಟ್‌ ಅನೌನ್ಸ್‌ ಮಾಡಿದೆ. ವಿಶೇಷ ಅಂದರೆ ಅದೇ ದಿನ ನಟ ರಣ್ಬೀರ್‌ ಕಪೂರ್‌ ಅವರ ಹುಟ್ಟುಹಬ್ಬವಿದೆ. ಈ ದಿನವೇ ಟೀಸರ್‌ ರಿಲೀಸ್‌ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ರಣ್ಬೀರ್‌ ಕಪೂರ್‌  ಅವರೊಂದಿಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ʼಅನಿಮಲ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

View this post on Instagram
Advertisement

 

A post shared by tseriesfilms (@tseriesfilms)

 

Advertisement

Udayavani is now on Telegram. Click here to join our channel and stay updated with the latest news.

Next