Advertisement
ಮಧ್ಯ ಪ್ರದೇಶ ತಂಡದ 338 ರನ್ನಿಗೆ ಉತ್ತರವಾಗಿ ದಿಲ್ಲಿ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದು 180 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಪಡೆಯಲು ತಂಡ ಇನ್ನುಳಿದ 8 ವಿಕೆಟ್ ನೆರವಿನಿಂದ 158 ರನ್ ಗಳಿಸಬೇಕಾಗಿದೆ.
Related Articles
Advertisement
ದಿಲ್ಲಿ ಆರಂಭಿಕ ಆಘಾತ: ಅನುಭವಿ ಆಟಗಾರ ಗೌತಮ್ ಗಂಭೀರ್ ಅವರನ್ನು ಬೇಗನೇ ಕಳೆದುಕೊಂಡಾಗ ದಿಲ್ಲಿ ಆಘಾತ ಅನುಭವಿಸಿತು. ಆದರೆ ಕುನಾಲ್ ಚಾಂಡೇಲ ಮತ್ತು ದ್ರುವ್ ಶೋರೆ ದ್ವಿತೀಯ ವಿಕೆಟಿಗೆ 145 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಇದರಿಂದ ದಿಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಂತಾಯಿತು. ದಿನದ ಅಂತಿಮ ಅವಧಿಯ ಆಟದಲ್ಲಿ 78 ರನ್ ಗಳಿಸಿದ ದ್ರುವ್ ಔಟಾದರೆ ಚಾಂಡೇಲ 73 ರನ್ನುಗಳಿಂದ ಮೂರನೇ ದಿನದ ಆಟ ಮುಂದುವರಿಸಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮಧ್ಯ ಪ್ರದೇಶ 338 (ಹರ್‌ಪ್ರೀತ್ ಸಿಂಗ್ 107 ಔಟಾಗದೆ, ಅಂಕಿತ್ ದಾನೆ 59, ನುವನ್ ಓಜಾ 49, ಪುನೀತ್ ದಾತೆ 35, ವಿಕಾಸ್ ಮಿಶ್ರಾ 58ಕ್ಕೆ 3, ಮನನ್ ಶರ್ಮ 46ಕ್ಕೆ 4); ದಿಲ್ಲಿ 2 ವಿಕೆಟಿಗೆ 180 (ಕುನಾಲ್ ಚಾಂಡೇಲ 73 ಬ್ಯಾಟಿಂಗ್, ದ್ರುವ್ ಶೋರೆ 78).