Advertisement
ರೈಲ್ವೇಸ್‌ನ 76 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ತಮಿಳುನಾಡು 330 ರನ್ ಗಳಿಸಿತು. ಪುನಃ ಬ್ಯಾಟಿಂಗ್ ಬರಗಾಲ ಅನುಭವಿಸಿ ರೈಲ್ವೇಸ್ 90 ರನ್ನಿಗೆ ಸರ್ವಪತನ ಕಂಡಿತು. 22 ರನ್ ಮಾಡಿದ ನಾಯಕ ಅರಿಂದಮ್ ಘೋಷ್ ಅವರದೇ ಹೆಚ್ಚಿನ ಗಳಿಕೆ. ಆರ್. ಸಾಯಿಕಿಶೋರ್ 16ಕ್ಕೆ 5, ಆರ್. ಅಶ್ವಿನ್ 36ಕ್ಕೆ 3 ಹಾಗೂ ಟಿ. ನಟರಾಜನ್ 15ಕ್ಕೆ 2 ವಿಕೆಟ್ ಕಿತ್ತರು. ಸಂಕ್ಷಿಪ್ತ ಸ್ಕೋರ್: ರೈಲ್ವೇಸ್-76 ಮತ್ತು 90. ತಮಿಳುನಾಡು 330.
ತಿರುವನಂತಪುರ: ರಾಜಸ್ಥಾನ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕೇರಳ ಇನ್ನಿಂಗ್ಸ್ ಹಾಗೂ 96 ರನ್ನುಗಳ ಸೋಲಿಗೆ ಗುರಿಯಾಗಿದೆ. ಈ ಪಂದ್ಯ ಕೂಡ 2 ದಿನಗಳಲ್ಲಿ ಮುಗಿಯಿತು. ಕೇರಳ ಮೊದಲ ಸರದಿಯಲ್ಲಿ 90 ರನ್ನಿಗೆ ಕುಸಿಯಿತು. ರಾಜಸ್ಥಾನ 268 ರನ್ ಗಳಿಸಿತು. ದ್ವಿತೀಯ ಸರದಿಯಲ್ಲೂ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೇರಳ 82ಕ್ಕೆ ಆಲೌಟ್ ಆಯಿತು. ಸಂಕ್ಷಿಪ್ತ ಸ್ಕೋರ್: ಕೇರಳ-90 ಮತ್ತು 82. ರಾಜಸ್ಥಾನ-268. ಮನೋಜ್ ತಿವಾರಿ ಅಜೇಯ 303
ಕೋಲ್ಕತಾ: ಹೈದರಾಬಾದ್ ಎದುರಿನ ರಣಜಿ ಪಂದ್ಯದಲ್ಲಿ ಬಂಗಾಲದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಅಜೇಯ 303 ರನ್ ಬಾರಿಸಿ ಮೆರೆದಿದ್ದಾರೆ. ಬಂಗಾಲ 7 ವಿಕೆಟಿಗೆ 635 ರನ್ ಪೇರಿಸಿ ಡಿಕ್ಲೇರ್ ಮಾಡಿದೆ. ತಿವಾರಿ 414 ಎಸೆತ ನಿಭಾಯಿಸಿ ತ್ರಿಶತಕ ಪೂರೈಸಿದರು (30 ಬೌಂಡರಿ, 5 ಸಿಕ್ಸರ್). ಇದು ಬಂಗಾಲ ಪರ ರಣಜಿಯಲ್ಲಿ ದಾಖಲಾದ 2ನೇ ತ್ರಿಶತಕ. ಇದಕ್ಕೂ ಮೊದಲು 1998ರಲ್ಲಿ ಅಸ್ಸಾಮ್ ವಿರುದ್ಧ ದೇವಾಂಗ್ ಗಾಂಧಿ 323 ರನ್ ಬಾರಿಸಿದ್ದರು.
Related Articles
Advertisement