Advertisement

ಪ್ರಿಯಾಂಕಾ ವಾದ್ರಾ ಬಳಿಯ ಪೇಂಟಿಂಗ್‌ ಖರೀದಿಗೆ ಕಾಂಗ್ರೆಸ್‌ ಬಲವಂತ: ರಾಣಾ

12:40 AM Apr 25, 2022 | Team Udayavani |

ಮುಂಬಯಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬಳಿ ಇದ್ದ, ಖ್ಯಾತ ಕಲಾವಿದ ಎಂ.ಎಫ್. ಹುಸೇನ್‌ರ ಪೇಂಟಿಂಗ್‌ ಅನ್ನು 2 ಕೋಟಿ ರೂ.ಗಳಿಗೆ ಖರೀದಿಸುವಂತೆ ನನಗೆ ಬಲವಂತ ಮಾಡಲಾಗಿತ್ತು.

Advertisement

ಮಾರಾಟದಿಂದ ಬಂದ ಆ ಹಣವನ್ನು ಗಾಂಧಿ ಕುಟುಂಬವು ನ್ಯೂಯಾರ್ಕ್‌ನಲ್ಲಿ ಸೋನಿಯಾ ಗಾಂಧಿ ಅವರ ಆರೋಗ್ಯ ಚಿಕಿತ್ಸೆಗೆ ಬಳಸಿಕೊಂಡಿತ್ತು ಎಂಬ ಸ್ಫೋಟಕ ಸಂಗತಿಯನ್ನು “ಯೆಸ್‌ ಬ್ಯಾಂಕ್‌’ನ ಸಹ ಸಂಸ್ಥಾಪಕ ರಾಣಾ ಕಪೂರ್‌, ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಬಾಯ್ಬಿಟ್ಟಿದ್ದಾರೆ. ಅಲ್ಲದೆ “ದುಬಾರಿ ಪೇಂಟಿಂಗ್‌ ಖರೀದಿಸದೆ ಇದ್ದರೆ ಗಾಂಧಿ ಕುಟುಂಬದ ಜತೆ ಸಂಬಂಧ ಹೊಂದುವುದು ಮತ್ತು ಪದ್ಮಭೂಷಣ ಪಡೆ ಯುವುದೂ ಕನಸಿನ ಮಾತು ಎಂದು ಅಂದಿನ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ಸೂಚಿಸಿದ್ದರು’ ಎಂದು ಕಪೂರ್‌ ಹೇಳಿದ್ದಾರೆ.

5,050 ಕೋಟಿ ರೂ. ಹಣವಂಚನೆ ಪ್ರಕರಣ ಆರೋಪ ದಲ್ಲಿ ಬಂಧಿತರಾಗಿರುವ ರಾಣಾ ಕಪೂರ್‌ ವಿರುದ್ಧ ಇ.ಡಿ.ಯು ವಿಶೇಷ ಕೋರ್ಟ್‌ ಮುಂದೆ ಸಲ್ಲಿಸಿರುವ 2ನೇ ಹಂತದ ಚಾರ್ಜ್‌ಶೀಟ್‌ನಲ್ಲಿ ಈ ಹೇಳಿಕೆಗಳನ್ನು ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next