ದುಬಾೖ: ಸೌದಿ ಅರೇಬಿಯಾ ಸಾಮ್ರಾಜ್ಯದ ಅತ್ಯುನ್ನತ ಧಾರ್ಮಿಕ ಪ್ರಾಧಿಕಾರ, ಕೋವಿಡ್ 19 ಮುಂದುವರಿದರೆ ರಮ್ಜಾನ್ ಸಮಯದಲ್ಲಿ ಪ್ರಾರ್ಥನೆ ಮತ್ತು ಅನಂತರದ ಈದ್ ಅಲ್-ಫಿತರ್ ಹಬ್ಬವನ್ನು ಮನೆಯಲ್ಲಿ ನಡೆಸಬೇಕು ಎಂದಿದೆ.
ಕೋವಿಡ್-19 ಹರಡುವಿಕೆಯ ವಿರುದ್ಧ ಕೈಗೊಳ್ಳಲಾದ ಕ್ರಮಗಳಿಂದಾಗಿ ಮಸೀದಿಗಳಲ್ಲಿ ಇವನ್ನು ಮಾಡಲು ಸಾಧ್ಯವಾಗದಿದ್ದರೆ
“ರಮ್ಜಾನ್ ನ ತಾರವೀಹ್’ (ಸಂಜೆ) ಪ್ರಾರ್ಥನೆಯನ್ನು ಮನೆಯಲ್ಲಿಯೇ ಮಾಡಬಹುದು ಎಂದು ಗ್ರಾÂಂಡ್ ಮುಫ್ತಿ ಶೇಖ್ ಅಬ್ದುಲಜೀಜ್ ಅಲ್-ಶೇಖ್ ಹೇಳಿದ್ದಾರೆ ಎಂದು ಒಕಾಜ್ ಪತ್ರಿಕೆ ವರದಿ ಮಾಡಿದೆ. ಮುಂದಿನ ವಾರ ಹಬ್ಬ ಆರಂಭವಾಗಲಿದೆ.
ಕೋವಿಡ್ 19 ಹರಡುವುದನ್ನು ತಡೆಯುವ ಪ್ರಯತ್ನಗಳ ಭಾಗವಾಗಿ ಮಾರ್ಚ್ ಮಧ್ಯದಲ್ಲಿ ಸೌದಿ ಅರೇಬಿಯಾ ಜನರು ತಮ್ಮ ಐದು ದೈನಂದಿನ ಪ್ರಾರ್ಥನೆ ಮತ್ತು ವಾರಕ್ಕೊಮ್ಮೆ ಶುಕ್ರವಾರದ ಪ್ರಾರ್ಥನೆಯನ್ನು ಮನೆಗಳಲ್ಲೇ ಮಾಡುತ್ತಿದ್ದಾರೆ; ಮಸೀದಿಗಳಲ್ಲಿ ನಿಲ್ಲಿಸಲಾಗಿದೆ.
ಮದೀನಾದ ಪ್ರವಾದಿ ಮುಹಮ್ಮದ್ ಅವರ ಮಸೀದಿಯಲ್ಲಿ ರಮ್ಜಾನ್ ಸಮಯದಲ್ಲಿ ಅಗತ್ಯವಿರುವವರಿಗೆ ತಮ್ಮ ದೈನಂದಿನ ಉಪವಾಸವನ್ನು ಮುರಿಯಲು ಸಂಜೆಯ ಊಟವನ್ನು ವಿತರಿಸುವ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಸೌದಿ ಅರೇಬಿಯಾವು ಕರ್ಫ್ಯೂ ಅನ್ನು ಅನಿರ್ದಿಷ್ಟಾವಧಿಗೆ ಈಗಾಗಲೇ ವಿಸ್ತರಿಸಿದೆ.