ಮೈಸೂರು: ರಂಜಾನ್ ಹಬ್ಬವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಸಗಡರ ಸಂಭ್ರಮದಿಂದ ಆಚರಿಸಿದರು. ಮೈಸೂರಿನ ತಿಲಕ್‌ನಗರದ ಈದ್ಗಾ ಮೈದಾನ, ರಾಜೀವ್‌ನಗರದ ಈದ್ಗಾ ಮೈದಾನ, ಉದಯಗಿರಿ-ಗೌಸಿಯಾ ನಗರದ ಈದ್ಗಾ ಮೈದಾನ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಮೊದಲಾದ ಗಣ್ಯರು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಧರ್ಮಗುರುಗಳಿಗೆ ಪುಪುಗುತ್ಛ ನೀಡಿ ಶುಭಾಶಯ ಕೋರಿದರು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ 5.30ಕ್ಕೆ ಮಸೀದಿಗಳಿಗೆ ತೆರಳಿದ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ 24 ದಿನಗಳ ಉಪವಾಸ ಅಂತ್ಯಗೊಳಿಸಿದರು. ಬಳಿಕ 9ಗಂಟೆಗೆ ನಗರದ ತಿಲಕ್‌ನಗರ, ರಾಜೀವ್‌ನಗರ ಹಾಗೂ ಗೌಸಿಯಾನಗರ ಈದ್ಗಾ ಮೈದಾನಗಳಲ್ಲಿ ಏಕಕಾಲದಲ್ಲಿ ಸಾಮೂಹಿಕ ಪ್ರಾರ್ಥನೆ
ಸಲ್ಲಿಸುವ ಜತೆಗೆ ವಯಸ್ಸಿನ ಅಂತರ ಮರೆತು ಪರಸ್ಪರ ಒಬ್ಬರಿಗೊಬ್ಬರು ಅಪ್ಪಿಕೊಂಡು ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು. ತಿಲಕ್‌ನಗರದ ಈದ್ಗಾ ಮೈದಾನದಲ್ಲಿ ಮೈಸೂರಿನ ಸರ್‌ಖಾಜೀ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ವೇತ ವಸ್ತ್ರಧಾರಿಗಳಾಗಿ ಸಾವಿರಾರು ಜನ ಭಾಗವಹಿಸಿದ್ದರು.
ಪುರುಷರು, ಮಕ್ಕಳು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಂದರೆ ಬಡಾವಣೆಗಳಲ್ಲಿ ಮಹಿಳೆಯರು ಹೊಸ ಉಡುಪುಗಳನ್ನು ಧರಿಸಿ, ಕೈತುಂಬಾ ಮೆಹಂದಿ, ಬಳೆತೊಟ್ಟು ಸಂಭ್ರಮಿಸಿದ ದೃಶ್ಯ ಮಂಡಿಮೊಹಲ್ಲಾ, ರಾಜೀವ್‌ನಗರ, ಗೌಸಿಯಾನಗರ, ಕಲ್ಯಾಣಗಿರಿ, ಬಡೇಮಕಾನ್, ಬೀಡಿ ಕಾರ್ಮಿಕರ ಕಾಲೋನಿ, ಅಜೀಜ್ ಕಾಲೋನಿ ಮೊದಲಾದ ಪ್ರದೇಶಗಳಲ್ಲಿ ಕಂಡು ಬಂತು.
ಪೊಲೀಸ್ ಬಂದೋಬಸ್ತ್: ರಂಜಾನ್ ಹಿನ್ನೆಲೆಯಲ್ಲಿ ನಗರದ ಮಸೀದಿ ಹಾಗೂ ಈದ್ಗಾ ಮೈದಾನಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಸ್ಲಿಮರ ಬಾಹುಳ್ಯವಿರುವ ಮಂಡಿಮೊಹಲ್ಲಾ, ಅಶೋಕ ರಸ್ತೆ, ಎನ್.ಆರ್.ಮೊಹಲ್ಲಾ, ಸಾಡೇರಸ್ತೆ, ಅಕºರ್ ರಸ್ತೆ, ಕಲ್ಯಾಣಗಿರಿ, ಗೌಸಿಯಾನಗರ ಮೊದಲಾದ ಕಡೆಗಳಲ್ಲಿ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು.