Advertisement

ರಂಜಾನ್‌ ಮಾಸಾಚರಣೆ ಮಹತ್ವದ್ದಾಗಿದೆ: ಸಾರಾ

02:25 PM May 04, 2022 | Team Udayavani |

ಕೆ.ಆರ್‌.ನಗರ: ಉಪವಾಸದಿಂದ ಎಂಥಕಠಿಣ ಸವಾ ಲನ್ನಾದರೂ ಎದುರಿಸ ಬಹುದು ಮತ್ತು ಗೆಲ್ಲಬ ಹುದು ಎಂದು ಅನುಭವದ ಪಾಠ ಕಲಿಸುವ ಪವಿತ್ರ ರಂಜಾನ್‌ ಮಾಸಾಚರಣೆ ಅತ್ಯಂತ ಮಹತ್ವ ದ್ದಾಗಿದೆ. ಅದರ ಮೂಲ ಉದ್ದೇಶ ಅರಿತು ಪ್ರತಿಯೊ ಬ್ಬರೂ ನಡೆಯಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

Advertisement

ಮಂಗಳವಾರ ನಡೆದ ರಂಜಾನ್‌ ಸಾಮೂಜಿಕ ಪ್ರಾರ್ಥನೆಯಲ್ಲಿ ಮಾತನಾಡಿ, ಇಸ್ಲಾಂ ಧರ್ಮದ ಪ್ರರ್ತಕರಾದ ಪ್ರವಾದಿ ಮಹಮ್ಮದರು ಕೆಡುಕಿನಿಂದ ಒಳಿತನ್ನು ಬಯಸಿ ಸಮಾಜವನ್ನು ಮುಕ್ತಗೊಳಿಸಲು ತಮ್ಮದೆಯಾದ ತತ್ವ ಮತ್ತು ಆದರ್ಶಗಳ ತಳಹದಿಯ ಮೇಲೆ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ್ದು, ಇದನ್ನು ನಾವು ಅರಿಯಬೇಕು ಎಂದರು.

ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರು ಪರಸ್ಪರ ಸಹೋದರ ರಂತೆ ಬಾಳುತ್ತಿದ್ದು, ಇದು ಇತರರಿಗೆ ಮಾದರಿ ಯಾಗಿದೆಯೆಂದು ಪ್ರಶಂಸೆ ವ್ಯಕ್ತಪಡಿಸಿದರು. ಈದ್ಗಾ ಮೈದಾನದ ಸುತ್ತ ಕಾಂಪೌಂಡ್‌ ನಿರ್ಮಾಣ ಸೇರಿದಂತೆ ಇತರ ಮೂಲ ಸವಲತ್ತುಗಳನ್ನು ಕಲ್ಪಿಸಲು ಶಾಸಕರ ನಿಧಿಯಿಂದ ಅಗತ್ಯ ಅನುದಾನ ಮತ್ತು ವೈಯಕ್ತಿಕ ಆರ್ಥಿಕಸಹಾಯವನ್ನು ನೀಡಲಾಗುವುದು ಎಂದು ಸಾ.ರಾ.ಮಹೇಶ್‌ ಭರವಸೆ ನೀಡಿದರು.

ಜಾಮೀಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಔರಂಗ್‌ಷಾ, ಮೌಲಾನಾ ಅಲಿಹಸನ್‌, ಮಸೀದಿ ಕಮಿಟಿಯ ಅಧ್ಯಕ್ಷ ಅಪ್ಸರ್‌ಬಾಬು, ಉಪಾ ಧ್ಯಕ್ಷ ಮುಜಾಹಿದ್‌ಪಾಷಾ, ಕಾರ್ಯದರ್ಶಿ ತಸಾ ವರ್‌ಪಾಷಾ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್‌, ಖ್ಯಾತ ಮೂಳೆತಜ್ಞ ಡಾ.ಮೆಹಬೂಬ್‌ಖಾನ್‌, ಕಾಂಗ್ರೆಸ್‌ ವಕ್ತಾರ ಸೈಯದ್‌ಜಾಬೀರ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next