Advertisement

ಮನೆ-ಮನೆಗಳಲ್ಲೂ ರಂಜಾನ್‌ ಸಂಭ್ರಮ

05:55 AM May 26, 2020 | Suhan S |

ಕಲಬುರಗಿ: ಮಸ್ಲಿಂರು ಪವಿತ್ರ ರಂಜಾನ್‌ ಹಬ್ಬವನ್ನು ಜಿಲ್ಲಾದ್ಯಂತ ಸೋಮವಾರ ತಮ್ಮ-ತಮ್ಮ ಮನೆಗಳಲ್ಲೇ ಶ್ರದ್ಧಾ-ಭಕ್ತಿಯಿಂದ ಸರಳವಾಗಿ ಆಚರಿಸಿದರು. ಬೆಳಗಿನ ವಿಶೇಷ ಪ್ರಾರ್ಥನೆ ಮಾತ್ರ ಮಸೀದಿ ಮತ್ತು ದರ್ಗಾಗಳಲ್ಲಿ ನಡೆಯಿತು.

Advertisement

ಪ್ರತಿ ವರ್ಷ ರಂಜಾನ್‌ ಹಬ್ಬದಂದು ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಬಳಿಕ ಮೌಲ್ವಿಗಳು ಧಾರ್ಮಿಕ ಸಂದೇಶ ನೀಡುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ಭೀತಿ ಮತ್ತು ಲಾಕ್‌ಡೌನ್‌ ಪರಿಣಾಮ ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರದ ಕಾರಣ ಹಬ್ಬದ ಸಂಭ್ರಮ ಕಂಡು ಬರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನ ಮತ್ತು ಮಸೀದಿ ಮುಂದೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸಾರ್ವಜನಿಕವಾಗಿ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ಕೋರಲೂ ಅವಕಾಶ ಇರಲಿಲ್ಲ. ಹೀಗಾಗಿ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲೇ ಮುಸ್ಲಿಂರು ನಮಾಜ್‌ ಮಾಡಿದರು. ಧಾರ್ಮಿಕ ಮುಖಂಡರು, ಸಮುದಾಯದ ಹಿರಿಯರು ಮತ್ತು ಮಕ್ಕಳು ಪ್ರಾರ್ಥನೆ ಸಲ್ಲಿಸಿ ಮೊಬೈಲ್‌ನಲ್ಲೇ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಶುಭಾಶಯದ ಸಂದೇಶ ರವಾನಿಸಿ ಇಲ್ಲವೇ, ಕರೆ ಮಾಡಿ ಶುಭಾಶಯ ಹೇಳಿದರು.

ಶಾಂತಿ ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಯಾರೂ ಸಾರ್ವಜನಿಕವಾಗಿ ಪ್ರಾರ್ಥನೆ ಮಾಡದೆ, ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೊಹ್ಮದ್‌ ಅಸಗರ್‌ ಚುಲ್‌ಬುಲ್‌ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ರಿಯಾಜುದೀªನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next