Advertisement
ಕಾಶ್ಮೀರದಲ್ಲಿ ಕದನ ವಿರಾಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಕ್ರುದ್ಧಗೊಂಡ ಪಾಕಿಸ್ಥಾನ ಗಡಿಯಲ್ಲಿ ಗುಂಡಿನ ದಾಳಿಯನ್ನು ಹೆಚ್ಚಿಸಿದೆ. ಬುಧವಾರ ಪಾಕ್ ನಡೆಸಿದ ದಾಳಿಗೆ 5 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದರು. ಇನ್ನೊಂದೆಡೆ ಕದನ ವಿರಾಮ ಘೋಷಿಸಿದ ಅನಂತರ ಮೇ 20ರವರೆಗೆ ಕಲ್ಲು ತೂರಾಟದ ಕೇವಲ 6 ಘಟನೆಗಳು ವರದಿಯಾಗಿವೆ ಎಂದು ಜಮ್ಮು ಪೊಲೀಸರು ಹೇಳಿದ್ದಾರೆ.