Advertisement

ಚಿತ್ತಾಪಹಾರಿ ಚಿತ್ರಕೂಟ

10:22 AM Dec 08, 2019 | mahesh |

ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ¾ಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು ಸುಂದರ…

Advertisement

ಚಿತ್ರಕೂಟಮನುಪ್ರಾಪ್ಯ ಭರದ್ವಾಜಸ್ಯ ಶಾಸನಾತ್‌
ರಮ್ಯಮಾವಸಥಂ ಕೃತ್ವಾ ರಮಮಾಣಾ ವನೇ ತ್ರಯಃ || 1-1-31 ಮೂಲ ವಾಲ್ಮೀಕಿ ರಾಮಾಯಣದಲ್ಲಿ ನಾರದರು ಬಂದು ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳಿಗೆ ಸಂಕ್ಷಿಪ್ತವಾಗಿ ವಿವರಿಸುವಾಗ “ಅನೇಕ ನದಿಗಳನ್ನು ದಾಟಿ ರಾಮ, ಲಕ್ಷ್ಮಣ, ಸೀತೆಯರು ಭಾರದ್ವಾಜರ ಆದೇಶದಂತೆ ಚಿತ್ರಕೂಟಕ್ಕೆ ಬಂದು ರಮ್ಯವಾದ ಕುಟೀರವನ್ನು ರಚಿಸಿ, ದೇವ- ಗಂಧರ್ವರಂತೆ ಆನಂದದಿಂದ ಇದ್ದರು’ ಎಂದು ಬಣ್ಣಿಸುತ್ತಾರೆ.

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಅಂಟಿಕೊಂಡಂತೆ ಇರುವ ಚಿತ್ರಕೂಟದ ರಮ್ಯ ಪರಿಸರ ಈಗಲೂ ಹಾಗೆಯೇ ಕಾಡುವಂತಿದೆ. ಅಲ್ಲಿನ ಹುನುಮಾನ್‌ ಧಾರಾ, ಒಂದು ಮನೋಹರ ತಾಣ. 800 ಮೆಟ್ಟಿಲುಗಳ ಆ ಸುಂದರ ಬೆಟ್ಟವನ್ನು ಏರಿದರೆ, ಅಲ್ಲಿಂದ ಸಂಪೂರ್ಣ ಚಿತ್ರಕೂಟ ಕಾಣಿಸುತ್ತದೆ. ಕಿಷ್ಕಿಂಧೆಯ ಹನುಮನಿಗೂ, ಈ ಬೆಟ್ಟಕ್ಕೂ ಅದೇನು ನಂಟು ಎಂಬ ಪ್ರಶ್ನೆ ನನ್ನಲ್ಲಿತ್ತು. ಹನುಮಂತನು ಲಂಕೆಯನ್ನು ದಹಿಸಿ ಮರಳುವಾಗ, ತೀವ್ರ ಬಾಯಾರಿಕೆ ಆಯಿತಂತೆ. ಶ್ರೀರಾಮನ ಆದೇಶದಂತೆ, ಈ ಬೆಟ್ಟಕ್ಕೆ ಬಾಣ ಬಿಟ್ಟಾಗ, ನೀರು ಚಿಮ್ಮಿತಂತೆ. ಅದೇ “ಹನುಮಾನ್‌ ಧಾರಾ’ ಆಯಿತು ಎಂದು ಹೇಳಲಾಗುತ್ತದೆ. ಬೆಟ್ಟದ ಮೇಲಿನ ಧಾರೆ, ಬೇಸಿಗೆಯಲ್ಲೂ ಇರುತ್ತದೆ. ಹಾಗೆ ಬಿದ್ದು ಹರಿದ ನೀರು, ಎಲ್ಲಿಗೆ ಹೋಗುತ್ತದೆಂದು ಸ್ಥಳೀಯರಿಗೂ ತಿಳಿದಿಲ್ಲ.

ಅದೋ ರಾಮ್‌ ಘಾಟ್‌…
ಅಲ್ಲಿಂದ ಮುಂದೆ ಬಂದರೆ ಸಿಗುವುದು, ರಾಮ ಸ್ನಾನ ಮಾಡುತ್ತಿದ್ದ ಸ್ಥಳ- ರಾಮ್‌ಘಾಟ್‌. ಈ ಕ್ಷೇತ್ರವು ಮಂದಾಕಿನಿ ನದಿಯ ತಟದಲ್ಲಿದೆ. ಇಲ್ಲಿ ಹತ್ತು ಹಲವು ಸ್ನಾನಘಾಟ್‌ಗಳನ್ನು ನೋಡಬಹುದು. ಇದರ ಸನಿಹದಲ್ಲೇ ಬ್ರಹ್ಮ ಯಾಗ ಮಾಡಿದ ಸ್ಥಳ ಎನ್ನಲಾದ, “ಬ್ರಹ್ಮಕುಂಡ’ ಇದೆ. ಭರತ ಮಂದಿರವೂ ಒಂದು ಆಕರ್ಷಣೆ. ಸೀತೆಯು ಸ್ನಾನ ಮಾಡುತ್ತಿದ್ದ ಜಾನಕೀ ಕುಂಡಗಳನ್ನು ನೋಡಬಹುದು. ಇÇÉೇ ಪಕ್ಕದಲ್ಲಿ ತುಲಸೀದಾಸರ ವಿಗ್ರಹವೂ ಇದೆ. “ಕಾಮದ್ಗಿರಿ’ ಎಂಬ 5 ಕಿ.ಮೀ. ಸುತ್ತಳತೆಯ ಪುಟ್ಟ ಬೆಟ್ಟಕ್ಕೆ ಸುತ್ತು ಬರುವುದರಿಂದ, ಮನೋಕಾಮನೆಗಳು ಈಡೇರುತ್ತವೆ ಎಂದು ಜನ ನಂಬುತ್ತಾರೆ. ಕಾಮದನಾಥ ಮಂದಿರ ಅಲ್ಲದೆ, ಸೀತೆ ಅಡುಗೆ ಮಾಡುತ್ತಿದ್ದ “ಸೀತಾ ರಸೋಯಿ’ ಎಂಬ ತಾಣವೂ ಇಲ್ಲಿದೆ. 5 ಕಿ.ಮೀ. ನಡೆದರೂ ಸುಸ್ತೇ ಆಗದಂತೆ ಕಣ್ಮನದ ಜೊತೆಗೆ ಉದರ ತಣಿಸುವ ಅನೇಕ ಮಳಿಗೆಗಳೂ ಇಕ್ಕೆಲಗಳಲ್ಲುಂಟು. 5-10 ರೂ.ಗೆ ಸಿಗುವ ಲಿಂಬೂ ಸೋಡಾ, ಮತ್ತೆ ಮತ್ತೆ ರುಚಿ ಹತ್ತಿಸುತ್ತಲೇ ಇರುತ್ತದೆ.

Advertisement

ರಾಮನ ಪಾದದ ಅಚ್ಚಿರುವ, ಮಂದಾಕಿನಿ ನದಿಯ ಪಕ್ಕದಲ್ಲಿರುವ ಸ್ಫಟಿಕಶಿಲಾ ಮಂದಿರ ದರ್ಶನದ ನಂತರ ಪ್ರವಾಸಿಗರನ್ನು ಸೆಳೆಯುವುದು, ರಾಮದರ್ಶನ ಭವನ. ಇಲ್ಲಿ ಇಂಡೋನೇಷ್ಯಾ, ಫ್ರಾನ್ಸ್‌, ಶ್ರೀಲಂಕಾ ಇತ್ಯಾದಿ ರಾಮಾಯಣ ಗ್ರಂಥಗಳ ಸಂಗ್ರಹ, ಹಲವಾರು ದೇಶಗಳ ರಾಮನ ಮುಖವರ್ಣಿಕೆ, ನಾಟ್ಯ- ಸಂಸ್ಕೃತಿಯನ್ನೂ ಕಾಣಬಹುದು. ರಾಮಾಯಣದ ಕತೆಗಳನ್ನು ವರ್ಣಿಸುವ, 25- 30 ಉಬ್ಬು ಶಿಲ್ಪಗಳನ್ನು ನೋಡಬಹುದು. ಇಲ್ಲಿಂದ 16 ಕಿ.ಮೀ. ಕ್ರಮಿಸಿದರೆ ಸೀತೆಗೆ ಪಾತಿವ್ರತ್ಯವನ್ನು ಬೋಧಿಸಿದ ಅನಸೂಯಾ ದೇವಿ ಮಂದಿರ ಸಿಗುತ್ತದೆ. ಎರಡು ಸುಂದರ ಗುಹೆಗಳನ್ನು ಹೊಕ್ಕಿದರೆ ಮೊದಲು ಸಿಗುವುದೇ ಶಿವನ ದೇಗುಲ. ಇನ್ನೊಂದು ಗುಹೆಯೊಳಗೆ 200 ಮೀಟರ್‌ ನೀರಿನಲ್ಲಿ ನಡೆದರೆ ಗೋದಾವರಿ ನದಿಯ ಉಗಮ ಸ್ಥಾನ “ಗುಪ್ತ ಗೋದಾವರಿ’ ಆನಂದ ಹುಟ್ಟಿಸುತ್ತಾಳೆ. ಇಷ್ಟು ಎತ್ತರದ ಬೆಟ್ಟದ ಮೇಲೆ ಇದು ಹೇಗೆ ಸಾಧ್ಯ ಎಂಬ ಅಚ್ಚರಿಯೂ ಮೂಡುತ್ತದೆ.

ರಘುರಾಮನು ವನರಾಮನಾಗಿ ಆರಾಮದಿಂದ ಇದ್ದ ಸ್ಥಳವೇ ಚಿತ್ರಕೂಟ. ರಾಮ, ಲಕ್ಷ್ಮಣ, ಸೀತೆಯರ ಚಿತ್ತಾಪಹಾರ ಮಾಡಿದ್ದ ಚಿತ್ರಕೂಟವು ಪ್ರವಾಸಿಗರ ಚಿತ್ತವನ್ನೂ ಅಪಹರಿಸುವಷ್ಟು ಸುಂದರ.

ಇದುವೇ ಮಾರ್ಗ…
ಚಿತ್ರಕೂಟವು ಪ್ರಯಾಗದಿಂದ 120 ಕಿ.ಮೀ. ದೂರದಲ್ಲಿದೆ. ಬಸ್ಸಿನ ವ್ಯವಸ್ಥೆಯ ಜೊತೆಗೆ ರೈಲು ವ್ಯವಸ್ಥೆಯೂ ಇದೆ. 500 ರೂ.ಗಳಿಗೆ ಸಂಪೂರ್ಣ ಚಿತ್ರಕೂಟ ದರ್ಶನ ಮಾಡಿಸುವ ವ್ಯವಸ್ಥೆಯೂ ಇದೆ. ಆದಿಚುಂಚನಗಿರಿ ಮಠವು 2015ರಿಂದ ಇಲ್ಲಿ ತನ್ನ ಶಾಖೆ ತೆರೆದಿದ್ದು, ಕರುನಾಡಿನ ಪ್ರವಾಸಿಗರಿಗೆ ಇದು ಅನುಕೂಲವಾಗಬಹುದು.

– ಸುನೀಲ ಕಕ್ಕಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next