Advertisement
ನಗರದ ಈದ್ಗಾ ಮೈದಾನದಲ್ಲಿ ಕಳೆದ ರವಿವಾರ ಮಿಲಾದ್ ಕಪ್ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾ ವಳಿಗೆ ಚಾಲನೆ ನೀಡಿದ್ದ ಜನಾರ್ದನ ರೆಡ್ಡಿ, ನಾನು ಬೆಳೆಸಿದ ಪಕ್ಷದವರೇ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಕುರಿತು ಪಕ್ಷದ ಹೈಕಮಾಂಡ್ ಜತೆ ಚರ್ಚಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ನ.1ರಂದು ರಾಜ್ಯೋತ್ಸವ ಕಾರ್ಯಕ್ರಮ ವೇಳೆ ಪ್ರತಿಕ್ರಿಯಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ನ.1ರಂದು ಮಂಗಳವಾರ ಕಾಲುವೆ ಕಾಮಗಾರಿ ಬಳಿಗೆ ತೆರಳಿ ಅಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದ್ದ ಸಚಿವ ಶ್ರೀರಾಮುಲು ಅವರನ್ನು ರೆಡ್ಡಿ ರಹಸ್ಯವಾಗಿ ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ.
Advertisement
ಕುತೂಹಲ ಮೂಡಿಸಿದ ರಾಮುಲು-ಜನಾರ್ದನ ರೆಡ್ಡಿ ಮಧ್ಯರಾತ್ರಿ ರಹಸ್ಯ ಭೇಟಿ
10:20 PM Nov 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.