ಮುಂಬೈ: ರಾಮನ ಧನುಸ್ಸನ್ನು ರಾವಣ ಹಿಡಿಯಲು ಸಾಧ್ಯವಿಲ್ಲ ಎಂದು ಶಿವಸೇನೆ ಠಾಕ್ರೆ ಬಣದ ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಚುನಾವಣಾ ಆಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿದ ಕಾರಣಕ್ಕೆ ಉದ್ದವ್ ಠಾಕ್ರೆ ಈ ರೀತಿ ಹೇಳಿಕೆ ನೀಡಿದ್ದಾರೆ.
“ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕದ್ದಿದ್ದಾರೆ, ಆದರೆ ಅವರು ಠಾಕ್ರೆ ಹೆಸರನ್ನು ಕದಿಯಲು ಸಾಧ್ಯವಿಲ್ಲ. ಅವರಿಗೆ ಬಾಳಾಸಾಹೇಬರ ಮಗನಾಗಿ ಹುಟ್ಟುವ ಭಾಗ್ಯವಿಲ್ಲ,” ಎಂದು ಉದ್ಧವ್ ಹೇಳಿದರು, ಅಲ್ಲದೆ ಶಿಂಧೆ ಗುಂಪನ್ನು “ಕಳ್ಳರು” ಎಂದು ಉಲ್ಲೇಖಿಸಿದ ಅವರು, ‘ ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:ಎರಡು ಪಂದ್ಯ ಸೋತ ಆಸೀಸ್ ಗೆ ಮತ್ತೊಂದು ಆಘಾತ; ಗಾಯಗೊಂಡು ಕೂಟದಿಂದಲೇ ಹೊರಬಿದ್ದ ವೇಗಿ
ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೇರವಾಗಿ ಒಂದು ಬಣಕ್ಕೆ ನೀಡಿದ ಒಂದೇ ಒಂದು ಉದಾಹರಣೆ ಇಲ್ಲ ಎಂದು ಪುನರುಚ್ಚರಿಸಿದ ಉದ್ಧವ್, ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು ಎಂದು ಹೇಳಿದರು.
ಶಿವಸೇನೆಯನ್ನು ಮುಗಿಸಲು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಸಿದು ಬಿಜೆಪಿ ಪಿತೂರಿ ಮಾಡಿದೆ ಎಂದು ಉದ್ಧವ್ ಹೇಳಿದ್ದಾರೆ.