Advertisement

Railways: ಗಾಲಿಕುರ್ಚಿ ಬಳಸುವವರಿಗೆ ರೈಲಿನಲ್ಲಿ ರ್‍ಯಾಂಪ್‌

12:36 AM Oct 01, 2023 | Team Udayavani |

ಹೊಸದಿಲ್ಲಿ: ಗಾಲಿಕುರ್ಚಿ ಬಳಸುವವರು ಹಾಗೂ ಹಿರಿಯ ನಾಗರಿ ಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೇಯು ಮಹತ್ವದ ಹೆಜ್ಜೆಯಿಟ್ಟಿದ್ದು, ಇನ್ನು ಮುಂದೆ ರೈಲುಗಳಲ್ಲೂ ರ್‍ಯಾಂಪ್‌ಗ್ಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಶನಿವಾರ ತಿಳಿಸಿದ್ದಾರೆ. ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ರ್‍ಯಾಂಪ್‌ಗ್ಳ ಚಿತ್ರ ಗಳನ್ನು ಬಿಡುಗಡೆಗೊಳಿಸಿದ ಸಚಿವ ವೈಷ್ಣವ್‌ ಇದನ್ನು ಸದ್ಯಕ್ಕೆ ಚೆನ್ನೈ ರೈಲು ನಿಲ್ದಾಣದಲ್ಲಿ ಬಳಸಲಾಗುತ್ತಿದೆ. ರ್‍ಯಾಂಪ್‌ನ ಅಗತ್ಯವಿರುವ ಪ್ರಯಾಣಿಕರಿಗೆ ಇದರಿಂದ ಬಹಳ ಅನುಕೂಲವಾಗುತ್ತಿದೆ ಎಂದಿದ್ದಾರೆ.

Advertisement

ಬಾಗಿಲ ಬಳಿ ಅಳವಡಿಕೆ: ಶೀಘ್ರವೇ ನಾವು ವಂದೇ ಭಾರತ್‌ ರೈಲುಗಳಲ್ಲಿ ಇದನ್ನು ಪರಿಚಯಿಸಲಿದ್ದೇವೆ. ಅನಂತರದಲ್ಲಿ ಇತರ ಎಲ್ಲ ರೈಲುಗಳಲ್ಲೂ ರ್‍ಯಾಂಪ್‌ ಅಳವಡಿಸಲಾಗುತ್ತದೆ ಎಂದಿದ್ದಾರೆ. ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸುವ ಸಂದರ್ಭದಲ್ಲೇ ತಮಗೆ ವ್ಹೀಲ್‌ಚೇರ್‌ ಅಗತ್ಯವಿದೆ ಎಂಬುದನ್ನು ಅವರು ನಮೂದಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಅನಂತರ ಆಯಾ ರೈಲು ನಿಲ್ದಾಣಗಳಿಗೆ ಅಲರ್ಟ್‌ ಕಳುಹಿಸಿ, ರ್‍ಯಾಂಪ್‌ ಸಿದ್ಧಪಡಿಸಿ ಇಡುವಂತೆ ಸೂಚಿಸ ಲಾಗುತ್ತದೆ ಎಂದು ವೈಷ್ಣವ್‌ ಹೇಳಿದ್ದಾರೆ. ರೈಲಿನ ಬಾಗಿಲಿನ ಕೆಳ ಭಾಗದಲ್ಲಿ ರ್‍ಯಾಂಪ್‌ ಅನ್ನು ಅಳವಡಿಸಲಾಗುತ್ತದೆ. ಅದನ್ನು ಬಳಸಿ ಕೊಂಡು ಗಾಲಿಕುರ್ಚಿಯಲ್ಲಿ ಪ್ರಯಾಣಿಕರು ಕೆಳಗಿಳಿಯಬಹುದು ಎಂದಿದ್ದಾರೆ.

14 ನಿಮಿಷಕ್ಕೊಮ್ಮೆ ಸ್ವತ್ಛತೆ: ಅ.1ರಿಂದ ರೈಲುಗಳ ಕ್ಷಿಪ್ರ ಸ್ವತ್ಛತೆಗಾಗಿ “14 ನಿಮಿಷಗಳ ಪವಾಡ’ ಎಂಬ ಪರಿಕಲ್ಪನೆಯನ್ನು ಜಾರಿ ಮಾಡಲಾಗುತ್ತಿದೆ. ಅದರಂತೆ ಇದೇ ಮೊದಲ ಬಾರಿಗೆ ಕೇವಲ 14 ನಿಮಿಷಗಳಲ್ಲಿ ರೈಲುಗಳನ್ನು ಸ್ವತ್ಛಗೊಳಿಸಲಾಗುತ್ತದೆ. ಆರಂಭದಲ್ಲಿ 29 ವಂದೇ ಭಾರತ್‌ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next