Advertisement
ಹೌದು.., ಈಗಾಗಲೇ ಮೂರು ಬಾರಿ ಭೂಮಿಪೂಜೆ ಕಂಡಿರುವ ಆರೋಗ್ಯ ವಿವಿಗೆ ಐದನೇ ಬಾರಿಗೆ ಭೂಮಿಪೂಜೆ ಮಾಡಿಸಲು ಕ್ಷೇತ್ರದ ಶಾಸಕರು ಮುಂದಾಗಿದ್ದಾರೆ. ಈ ಸಂಬಂಧ ನಗರದ ಪ್ರಮುಖ ರಸ್ತೆಯಲ್ಲಿ ಶಾಸಕರ ಬೆಂಬಲಿಗರು ಬ್ಯಾನರ್ ಹಾಕಿಸಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಪ್ರಚಾರ ಮಾಡಿದ್ದು, ಈಗಾಗಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಆರೋಗ್ಯವಿವಿಗೆ ಇದೀಗ ಮತ್ತೆ ಪೂಜೆ ಮಾಡುತ್ತಿರುವುದು ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
Related Articles
Advertisement
ಅಂತರ ಕಾಯ್ದುಕೊಂಡ ಜಿಲ್ಲಾಡಳಿತ, ಆರೋಗ್ಯ ವಿವಿ: ಗುರುವಾರ ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ಭೂಮಿಪೂಜೆ ನಡೆಯ ಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳುತ್ತಿದ್ದಾರೆ. ಇನ್ನು ಕಾಂಗ್ರೆಸ್ ಮುಖಂಡರ ವಾಟ್ಸ್ ಆಪ್ ಗ್ರೂಪ್‌ಗ್ಳಲ್ಲಿ ಸಹ ಈ ಬಗ್ಗೆ ಪೋಸ್ಟ್‌ಗಳು ಹರಿದಾಡುತ್ತಿವೆ. ಆದರೆ, ಕಾರ್ಯ ಕ್ರಮದಿಂದ ಜಿಲ್ಲಾಡಳಿತ ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿವಿ ಅಂತರ ಕಾಯ್ದು ಕೊಂಡಿದೆ. ಸಚಿವರು ಆಗಮಿಸುತ್ತಿರುವ ಕಾರ್ಯಕ್ರಮಕ್ಕೆದ ಬಗ್ಗೆ ಜಿಲ್ಲಾಡಳಿತದಿಂದ ಇದು ವರೆಗೆ ಯಾವುದೇ ಅಧಿಕೃತ ಆಹ್ವಾನ ಪತ್ರ ಬಿಡುಗಡೆಯಾಗಿಲ್ಲ. ಸರ್ಕಾರಿ ಕಾರ್ಯಕ್ರಮ ಎಂದು ಘೋಷಣೆಯೂ ಆಗಿಲ್ಲ. ವೈದ್ಯಕೀಯ ಶಿಕ್ಷಣ ಸಚಿವರ ಪ್ರವಾಸದ ವಿವರ ಸಹ ಬಿಡುಗಡೆಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿ ಉಪಕುಲಪತಿ ಡಾ. ಎಂ.ಕೆ.ರಮೇಶ್, ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿಯೂ ಇಲ್ಲ, ಆಹ್ವಾನವೂ ಇಲ್ಲ ಎಂದು ತಿಳಿಸಿದ್ದಾರೆ. ಇನ್ನು ಕಾರ್ಯಕ್ರಮದ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು ಎಂದು ಕೆಂಗಲ್ ಹನು ಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ರಾಜೀವ್‌ಗಾಂಧಿ ಆರೋಗ್ಯ ವಿವಿ 17 ವರ್ಷಗಳಿಂದ ನನೆ ಗುದಿಗೆ ಬಿದ್ದಿದೆ. ಮುಖ್ಯಮಂತ್ರಿಗಳು ಆರೋಗ್ಯ ವಿವಿ ನಿರ್ಮಾಣಕ್ಕೆ ಉತ್ಸುಕರಾಗಿದ್ದಾರೆ. ಭೂಮಿಪೂಜೆ ಬಳಿಕ ಕಟ್ಟಡ ನಿರ್ಮಾಣ ಕೆಲಸ ನಡೆ ಯಲಿದೆ. ಮೆಡಿಕಲ್ ಕಾಲೇಜು, ವಿವಿ ಎರಡೂ ಇಲ್ಲೆ ಆಗಲಿದೆ. ರಾಮ ನಗರದಲ್ಲಿ ಮಾತ್ರ ಪೂಜೆ ನಡೆಯುತ್ತದೆ. ಸರ್ಕಾರದ ಸೂಚನೆ ಮೇರೆಗೆ ಕಾರ್ಯಕ್ರಮ ನಡೆಯುತ್ತಿದೆ. -ಇಕ್ಬಾಲ್ ಹುಸೇನ್, ಶಾಸಕ, ರಾಮನಗರ
-ಸು.ನಾ.ನಂದಕುಮಾರ್