Advertisement
ಅರ್ಧ ತಾಸು ಚರ್ಚೆಅಪರಾಹ್ನ 4.30ರಿಂದ ಸುಮಾರು 5 ಗಂಟೆಯವರೆಗೆ ಮಾತುಕತೆ ನಡೆಯಿತು.
“ಪ್ರಧಾನಿ ನಮ್ಮನ್ನು ತುಂಬಾ ಸಂತೋಷದಿಂದ ಸ್ವಾಗತಿಸಿದರು. ಐದು ವರ್ಷಗಳಲ್ಲಿ ಅವರು ಮಾಡಿದ ಸಾಧನೆ, ಅದಕ್ಕೆ ಜನತೆ ನೀಡಿದ ಅದ್ಭುತ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದರು. ದೇಶದ ಅಭಿವೃದ್ಧಿಗಾಗಿ ನಮ್ಮ ಪ್ರಾರ್ಥನೆ
ಯನ್ನು ಕೂಡ ಅವರಿಗೆ ತಿಳಿಸಿದೆ’ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ಪೇಜಾವರ ಶ್ರೀಗಳು ಊರುಗೋಲನ್ನು ಪ್ರಧಾನಿ ನಿವಾಸದ ಹೊರಗೆ ಬಿಟ್ಟಿದ್ದರು. ಅಲ್ಲಿ ಅವರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ಕೈ ಹಿಡಿದು ಕರೆದೊಯ್ದರು. ಪ್ರಭಾವಳಿ ಸಹಿತವಾದ ಶ್ರೀಕೃಷ್ಣನ ವಿಗ್ರಹವನ್ನು ಶ್ರೀಗಳು ಪ್ರಧಾನಿಗೆ ನೀಡಿ ಆಶೀರ್ವದಿಸಿದರು ಎಂದು ಶ್ರೀಗಳ ಆಪ್ತ ಸಹಾಯಕರು ತಿಳಿಸಿದ್ದಾರೆ.
Related Articles
ಹಲವು ವರ್ಷಗಳಿಂದ ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿ ಹೊಸದಿಲ್ಲಿಯ ಅವರ ನಿವಾಸದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಪೇಜಾವರ ಶ್ರೀಗಳು ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸಚಿವರು, ಲೋಕಸಭೆ ಸ್ಪೀಕರ್ ಸಹಿತ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಪೇಜಾವರ ಶ್ರೀಗಳ ಪರ್ಯಾಯ ಅವಧಿಯಲ್ಲಿ ಉಮಾ ಭಾರತಿಯವರೇ ಗುರುಪೂರ್ಣಿಮೆಯಂದು ಉಡುಪಿಗೆ ಆಗಮಿಸಿದ್ದರು.
Advertisement