ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಪರಶುರಾಮ ಕ್ಷೇತ್ರದ ತುಂಗಾ ತೀರದಲ್ಲಿ ಎಳ್ಳಮಾವಾಸ್ಯೆ ಜಾತ್ರೆಯ ವಿಶೇಷ ತೆಪ್ಪೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಸಂಜೆ 7 ಗಂಟೆಗೆ ತೆಪ್ಪೋತ್ಸವ ಆರಂಭವಾಗಿದ್ದು ಈ ಬಾರಿ ಬೇಗ ತೆಪ್ಪೋತ್ಸವ ಮುಗಿಯಿತು.
ತೆಪ್ಪೋತ್ಸವದ ಜನಾಕರ್ಷಣೆಗಾಗಿ ರಾಜ್ಯದ ಪ್ರಖ್ಯಾತ ಯುವ ಜಾನಪದ ತಂಡಗಳಿಂದ ಮನರಂಜನಾ ಕಾರ್ಯಕ್ರಮವಾದ ಯುವಜನೋತ್ಸವ ನಡೆಯಿತು. ಯುವಜನೋತ್ಸವವನ್ನು ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ಪಪಂ ಅಧ್ಯಕ್ಷೆ ಶಬನಂ, ತಹಶೀಲ್ದಾರ್ ಶ್ರೀಪಾದ್, ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ, ಪಪಂ ಮುಖ್ಯಾ ಧಿಕಾರಿ ಕುರಿಯಾಕೋಸ್, ಡಿವೈಎಸ್‌ಪಿ ಶಾಂತವೀರ ಹಾಗೂ ಅನೇಕ ಗಣ್ಯರು ಅತಿಥಿಗಳಾಗಿದ್ದರು. ನೈಟ್ ಕರ್ಪೂÂ ಹಿನ್ನೆಲೆಯಲ್ಲಿ ತೆಪ್ಪೋತ್ಸವ ಸಂಜೆ 7 ಗಂಟೆಗೇ ಆರಂಭವಾಗಿದ್ದು,ಬಣ್ಣ ಬಣ್ಣದ ಸಿಡಿಮದ್ದುಗಳ ಸಿಡಿತದ ಚಿತ್ತಾರವನ್ನು ಸಾವಿರಾರು ಸಾರ್ವಜನಿಕರು ವೀಕ್ಷಿಸಿದರು. ಪೊಲೀಸ್ ಇಲಾಖೆಯವರು, ಸಾರ್ವಜನಿಕರು ತಮ್ಮ ವಾಹನಗಳನ್ನು ಆದಷ್ಟು ದೂರದಲ್ಲೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬಂದು ತೆಪೋತ್ಸವವನ್ನು ವೀಕ್ಷಿಸಿದರು.