Advertisement
ತೀರ್ಹಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಗ್ರಾಮದವರಾದ ಆಚಾರ್ಯರು ತಂದೆ ಸ್ಥಾಪಿಸಿದ ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯಲ್ಲಿ ವೇಷ ಮಾಡ ತೊಡಗಿದರು. ಬಚ್ಚನಕೊಡಗೆ ನರಸಿಂಹ ಆಚಾರ್ಯರಿಂದ ತಾಳ ಲಯದ ಅಭ್ಯಾಸಮಾಡಿ ಪೂರ್ಣ ಪ್ರಮಾಣದ ಕಲಾವಿದರಾಗಿ ರೂಪುಗೊಂಡರು.ಬಳಿಕ ಬಡಗುತಿಟ್ಟಿನ ಗುರು ವೀರಭದ್ರ ನಾಯ್ಕರಿಂದ ಹೆಚ್ಚಿನ ಅಭ್ಯಾಸ ಪಡೆದು ಮಂದಾರ್ತಿ ಮೇಳಕ್ಕೆ ಪೂರ್ಣಾವಧಿಯ ಕಲಾವಿದರಾಗಿ ಸೇರ್ಪಡೆಗೊಂಡರು. ಕುರಿಯ ವಿಠಲ ಶಾಸ್ತ್ರಿಗಳ ಪ್ರೇರಣೆಯಂತೆ ಧರ್ಮಸ್ಥಳ ಮೇಳ ಸೇರಿದ ಅವರು ತೆಂಕುತಿಟ್ಟಿನ ಮೇರು ಕಲಾವಿದರಾಗಿ ಮೂಡಿ ಬಂದರು. 20 ವರ್ಷ ಸುರತ್ಕಲ್ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಶೇಣಿ, ಸಾಮಗರೊಂದಿಗೆ ಕುಳಿತು ಅರ್ಥ ಹೇಳುವಷ್ಟು ತಾಳಮದ್ದಳೆಯ ಅರ್ಥದಾರಿಯಾಗಿ ರೂಪುಗೊಂಡರು. ಶನೀಶ್ವರ ಮಹಾತ್ಮೆ,ಬಪ್ಪನಾಡು ಕ್ಷೇತ್ರ ಮಹಾತ್ಮೆ,ಪಾಪಣ್ಣ ವಿಜಯ-ಗುಣಸುಂದರಿ, ನಳ ದಮಯಂತಿ ಮುಂತಾದ ಪ್ರಸಂಗಗಳಲ್ಲಿ ಇವರ ದಮಯಂತಿ, ಸೀತೆ, ಚಂದ್ರಮತಿ, ದಾಕ್ಷಾಯಣಿ ಮುಂತಾದ ಪಾತ್ರಗಳು ಮೆಚ್ಚುಗೆ ಗಳಿಸಿದ್ದವು. ಶೃಂಗ ಸಾರಂಗ, ಸಿಂಧು ಭೈರವಿ, ಸಮರಸಿಂಹ ಶಿವರಂಜಿನಿ , ನಾಗಮಚ್ಚೆ ಮುಂತಾದ ಹೊಸ ಪ್ರಸಂಗಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.ಪ್ರಸ್ತುತ ತೆಂಕಿನ ಹನುಮಗಿರಿ ಮೇಳದ ಪ್ರಧಾನ ಕಲಾವಿದರಾಗಿ ತಿರುಗಾಟ ನಡೆಸುತಿದ್ದಾರೆ.
Advertisement
ಚಂದು ಪೂಜಾರಿ ಸಂಸ್ಮರಣಾ ಪ್ರಶಸ್ತಿಗೆ ರಮೇಶಾಚಾರ್ಯ
06:00 AM Nov 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.