Advertisement

ದ್ರೋಣಾಚಾರ್ಯಕ್ಕೆ ಅರ್ಜಿ ಸಲ್ಲಿಸಿದ ಮಾಜಿ ಹಾಕಿ ಕೋಚ್‌ ಆರ್‌. ಪರಮೇಶ್ವರನ್‌

10:27 PM Jun 17, 2020 | Sriram |

ಬೆಂಗಳೂರು: ಭಾರತೀಯ ಹಾಕಿ ತಂಡದ ಮಾಜಿ ಸಹಾಯಕ ಕೋಚ್‌, ಬೆಂಗಳೂರಿನ ರಮೇಶ್‌ ಪರಮೇಶ್ವರನ್‌ “ಹಾಕಿ ಕರ್ನಾಟಕ’ ಮೂಲಕ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ತಮ್ಮ ಹೆಸರನ್ನು ಸೂಚಿಸಿದ್ದಾರೆ. ಆದರೆ ಹಾಕಿ ಇಂಡಿಯಾ ಈಗಾಗಲೇ ಬಿ.ಜೆ. ಕಾರ್ಯಪ್ಪ ಮತ್ತು ರೊಮೇಶ್‌ ಪಠಾಣಿಯ ಹೆಸರನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

Advertisement

“ಜೂನಿಯರ್‌ ಆಟಗಾರನಿಂದ ಮೊದಲ್ಗೊಂಡು ರಾಷ್ಟ್ರೀಯ ತಂಡದ ಕೋಚ್‌ ಆಗುವ ಹಂತದ ವರೆಗಿನ ನನ್ನ ಪಯಣ ಅತ್ಯಂತ ರೋಮಾಂಚಕಾರಿಯಾಗಿತ್ತು. ಈ ಹಂತದಲ್ಲಿ ಸಾಕಷ್ಟು ಏರಿಳಿತ, ಸೋಲು-ಗೆಲುವುಗಳನ್ನು ಕಾಣಬೇಕಾಯಿತು. ಒಟ್ಟಾರೆಯಾಗಿ ಇದೊಂದು ತೃಪ್ತಿಕರ ಅನುಭವ’ ಎಂಬುದಾಗಿ 70 ವರ್ಷದ ರಮೇಶ್‌ ಪರಮೇಶ್ವರನ್‌ ಹೇಳಿದ್ದಾರೆ.

1969ರಲ್ಲಿ ಪಯಣ ಆರಂಭ
1969ರ ಜೂನಿಯರ್‌ ನ್ಯಾಶನಲ್‌ ಚಾಂಪಿಯನ್‌ಶಿಪ್‌ನಲ್ಲಿ ಮೈಸೂರು ತಂಡವನ್ನು ಪ್ರತಿನಿಧಿಸುವ ಮೂಲಕ ರಮೇಶ್‌ ಪರಮೇಶ್ವರನ್‌ ತಮ್ಮ ಹಾಕಿ ಪಯಣವನ್ನು ಆರಂಭಿಸಿದ್ದರು. 1978ರಲ್ಲಿ ಮೊದಲ ಸಲ ಭಾರತ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ಬ್ಯಾಂಕಾಕ್‌ ಏಶ್ಯಾಡ್‌ನ‌ಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡದ ಸದಸ್ಯರಲ್ಲಿ ಆರ್‌. ಪರಮೇಶ್ವರನ್‌ ಕೂಡ ಒಬ್ಬರಾಗಿದ್ದರು.

ಬೆಂಗಳೂರಿನ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದ ಪರಮೇಶ್ವರನ್‌, 1985ರಿಂದ ಕರ್ನಾಟಕ ಹಾಕಿ ತಂಡದ ತರಬೇತುದಾರನಾಗಿ ಕರ್ತವ್ಯ ನಿಭಾಯಿಸತೊಡಗಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next