Advertisement

ಸಮಾಜದಲ್ಲಿ ಜಾತಿ ಎನ್ನುವುದು ಕ್ಯಾನ್ಸರ್‌ ರೋಗವಿದ್ದಂತೆ

03:27 PM Mar 23, 2021 | Team Udayavani |

ಕೋಲಾರ: ವರ್ಗಗಳಿಗೆ ಇರುವ ಪ್ರಾಧಾನ್ಯತೆ ಜಾತಿಗೆ ಇರುವುದಿಲ್ಲ. ಜಾತಿ ಎನ್ನುವುದು ಕ್ಯಾನ್ಸರ್‌ರೋಗವಿದ್ದಂತೆ. ಎಷ್ಟೇ ಚಿಕಿತ್ಸೆ ಕಲ್ಪಿಸಿದರೂ ಪ್ರಯೋಜನವಾಗುವುದಿಲ್ಲ, ದೇಶದ ಪ್ರಜಾಪ್ರಭುತ್ವ ಸತ್ತುಹೋಗಿದ್ದು, ತಾಂತ್ರಿಕತೆಯ ಮೇಲೆನಡೆಯುತ್ತಿದೆ ಎಂದು ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಕಳವಳ ವ್ಯಕ್ತಪಡಿಸಿದರು.

Advertisement

ನಗರ ಹೊರವಲಯದ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ಬೆಂಗಳೂರಿನ ಸಂಸ ಥಿಯೇಟರ್‌ ಸಹಯೋಗದಲ್ಲಿ ನಡೆದ ಲಂಕೇಶ್‌ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ ವಿಚಾರಗಳಿಂದ ಆರಂಭಗೊಂಡ ಅಭಿಯಾನಕ್ಕೂ ಜಾತಿಯೆನ್ನುವಗೋಡೆಗಳನ್ನು ಕಟ್ಟಲಾಗಿದೆ. ಒಂದು ಕಡೆಕೂಡಲಸಂಗಮದ ಅಭಿವೃದ್ಧಿಗೆ ಹಣ ನೀಡುತ್ತಾರೆ. ಮತ್ತೂಂದು ಕಡೆ ಬಸವೇಶ್ವರರಿಗೇ ಟಾಂಗ್‌ನೀಡುತ್ತಾರೆ. ಇಂತಹ ಅನೇಕ ವಿಚಾರಗಳಿಂದಾಗಿ ಪ್ರಜಾಪ್ರಭುತ್ವ ಸತ್ತುಹೋಗಿದೆ ಎಂದರು.

ಸಂಕಟದಿಂದ ಮಾತನಾಡಬೇಡಿ: ರಾಜಕಾರಣವು ವ್ಯವಸಾಯವಿದ್ದಂತೆ. ಅದರಲ್ಲಿ ಅನೇಕ ಕಾರ್ಯಕ್ರಮಗಳು ಬರುತ್ತವೆ. ಶ್ವೇತ ಪತ್ರದಂತೆ ಇರುವ ರಾಜಕಾರಣಿ ಯಾರಿಗೂ ಭಯಪಡಬೇಕಿಲ್ಲ.ಆದರೆ, ರಾಜಕಾರಣದಲ್ಲಿರುವ ಬಹುತೇಕರುಪ್ಲೆಕ್ಸಿಬಲ್‌ ಪೀಪಲ್‌. ಇಂತಹ ಕಾರ್ಯಕ್ರಮಗಳಲ್ಲಿಮಾತನಾಡುವುದು ಸುಲಭವೇನಲ್ಲ. ಆದರೆ,ಮಾತು ಮನದಾಳದಿಂದ ಬರುವಂತಾಗಬೇಕೇಹೊರತು ಒಬ್ಬರನ್ನು ಮೆಚ್ಚಿಸಲು ಸಂಕಟದಿಂದಮಾತನಾಡುವಂತಾಗಬಾರದು ಎಂದು ಹೇಳಿದರು.

ಅಂಬೇಡ್ಕರ್‌ ಮಹಾತ್ಮರು: ಪಂಚೇಂದ್ರಿಯಗಳು ಸದಾ ಚಟುವಟಿಕೆಯಿಂದ ಇದ್ದುದರಿಂದಲೇ ಅಂಬೇಡ್ಕರ್‌ ಎಲ್ಲ ವಿಚಾರಗಳಲ್ಲಿಯೂ ಸಫಲರಾಗಲುಸಾಧ್ಯವಾಯಿತು. ಗಾಂ ಧಿಯನ್ನು ಮಹಾತ್ಮರಲ್ಲಎಂದು ಒಪ್ಪಿಕೊಳ್ಳದೆ ಅದಕ್ಕೆ ನೇರವಾಗಿ ಉತ್ತರನೀಡಿದ ಮಹಾತ್ಮರು ಅಂಬೇಡ್ಕರರು. ಅವರವಿಚಾರಗಳನ್ನು ನಾನು ಮಾತನಾಡಿದರೆ ಅನಾಮಧೇಯ ಪತ್ರ ಬರೆದು, ನನ್ನ ಹುಟ್ಟಿನ ಮೂಲವನ್ನುಕೇಳುತ್ತಾರೆಂದರೆ ಇದಕ್ಕೆ ಅರ್ಥವೇನು ಎಂದರು.

ಇನ್ನು ಲಂಕೇಶ್‌ ಅವರು ಮಡಿವಂತಿಕೆಯಿಂದದೂರ ಹೋಗಿ, ಆಡು ಭಾಷೆಗೆ ಅರ್ಥಪೂರ್ಣವಾಗಿಜೀವ ತುಂಬಿದ್ದರಿಂದಾಗಿ ಅವರು ಹೆಚ್ಚುಜನಪ್ರಿಯರಾಗಿದ್ದರು ಎಂದು ಬಣ್ಣಿಸಿದರು.

Advertisement

ದೇವರನ್ನು ಬೈಯ್ಯುವುದನ್ನು ನಿಲ್ಲಿಸಿದೆ: ಕವಿ,ಚಿಂತಕ ಡಾ.ಸಿದ್ದಲಿಂಗಯ್ಯ ಮಾತನಾಡಿ, ಇಂದುಉನ್ನತ ಜಾತಿಯವರು ಮೀಸಲಾತಿಗೆ ಹೋರಾಡು ತ್ತಿರುವುದನ್ನು ನೋಡಿದರೆ ಮಂಟೇಸ್ವಾಮಿಹೇಳಿದಂತೆ ಮೇಲು ಕೆಳಗೆ ಹೋಗುತ್ತದೆ, ಕೀಳು ಮೇಲೆ ಹೋಗುತ್ತದೆ ಎನ್ನುವುದು ನಿಜವಾಗಿದೆ.ದಲಿತ ವರ್ಗದವರಿಗೆ ಬಾಂಬ್‌ ಮಾಡುವುದುಗೊತ್ತಿದೆ ಎನ್ನುವುದು ಮಾದೇಶ್ವರ ಸ್ವಾಮಿಯಿಂದತಿಳಿದುಬಂದಿದೆ. ದಲಿತರೇ ದೇವರನ್ನು ಜೀತದಿಂದ ಬಿಡುಗಡೆ ಮಾಡಿದ್ದಾರೆ. ಇಂತಹ ಅನೇಕವಿಚಾರಗಳನ್ನು ಅರಿತ ಬಳಿಕ ನಾನು ದೇವರನ್ನು ಬೈಯ್ಯುವುದನ್ನು ನಿಲ್ಲಿಸಿದೆ. ನೆಲ ಮೂಲ ಸಂಸ್ಕೃತಿ ಇರುವುದೇ ದಲಿತ ಸಂಸ್ಕೃತಿಯಲ್ಲಿ ಎಂದರು.

ಗ್ರಾಮೀಣ ಭಾಗದ ಬಡವರು, ಯುವಕರಿಗೆ ಆತ್ಮವಿಶ್ವಾಸ ಕಲ್ಪಿಸಿದವರೇ ಲಂಕೇಶ್‌. ಅಂತಹವ್ಯಕ್ತಿಯ ಸ್ಮರಣೆ, ಸಪ್ತಾಹ ಮಾಡುತ್ತಿರುವುದುಶ್ಲಾಘನೀಯ. ಕೃತಿಗಳ ಮೂಲಕ ಅನೇಕರಿಗೆಮಾರ್ಗದರ್ಶನವಾಗಿದ್ದಾರೆ ಎಂದು ಸ್ಮರಿಸಿದರು.

ನಾನು ಬಿಪಿಎಲ್‌ ಶಾಸಕ: ಡಾ.ಸಿದ್ದಲಿಂಗಯ್ಯಮಾತನಾಡಿ, ಊಳಿಗಮಾನ್ಯ ಪದ್ಧತಿಯಿರುವಕೋಲಾರ ಭಾಗದಲ್ಲಿ ದಲಿತರಿಗೆ ಚೈತನ್ಯ ತಂದುಕೊಟ್ಟ ಧಿ àಮಂತ ನಾಯಕ ರಮೇಶ್‌ಕುಮಾರ್‌ಅವರಿಗೆ ರಾಜ್ಯದ ಮುಖ್ಯಮಂತ್ರಿಗಳಾಗುವ ಶಕ್ತಿಬಂದರೆ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ಕುಮಾರ್‌,ನಾನು ಬಿಪಿಎಲ್‌ ಕಾರ್ಡ್‌ ಶಾಸಕ. ನಮ್ಮ ಜೇಬಲ್ಲಿಇರುವುದು ನಾಲ್ಕು ಆಣಿ. ನನಗೆ ಸಿಎಂ ಆಗುವ ಶಕ್ತಿ, ಆಸೆಯೂ ಇಲ್ಲ. ನಮ್ಮ ಮನೆಯವರಿಗೂಅದರ ಮೇಲೆ ಆಸಕ್ತಿ ಬಂದಿಲ್ಲ. ಯಾರಾದರೂ ಆಗಿಕೊಳ್ಳಲಿ ಎಂದು ಹಾಸ್ಯವಾಗಿಯೇ ಉತ್ತರಿಸಿದರು.ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಲಂಕೇಶ್‌ ಸಪ್ತಾಹದ ಜತೆಗೆ ರಾಗಿ ಲಕ್ಷ್ಮಣಯ್ಯರ ಸ್ಮರಣೆಯೂ ಮುಖ್ಯವಾಗಿದ್ದು, ಈ ಅಂಗಳದಲ್ಲಿ ಅವರ ಸ್ಮಾರಕ ನಿರ್ಮಾಣವಾಗಬೇಕಿದೆ ಎಂದರು.

ವೇದಿಕೆಯಲ್ಲಿ ಆದಿಮ ಕೇಂದ್ರದ ಅಧ್ಯಕ್ಷ ಮುನಿಸ್ವಾಮಿ, ಖಜಾಂಚಿ ಹ.ಮಾ.ರಾಮಚಂದ್ರಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next