Advertisement

ರಮೇಶ್‌ ಕುಮಾರ್‌ ಅಮಾನತಿಗೆ ಪಟ್ಟು

11:48 PM Mar 11, 2020 | Lakshmi GovindaRaj |

ವಿಧಾನಮಂಡಲ: ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಸದನದಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ್ದು, ನಿಯಮಾನುಸಾರ ಕ್ರಮ ಕೈಗೊಂಡು ಅವರನ್ನು ಈ ಅಧಿವೇಶನ ಮುಗಿಯುವವರೆಗೆ ಅಮಾನತಿನಲ್ಲಿಡಬೇಕು ಎಂದು ಕೋರಿ ಹಲವು ಬಿಜೆಪಿ ಶಾಸಕರು ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿ ಕೆಯ ನಿಯಮ 363ರಡಿ ರಮೇಶ್‌ ಕುಮಾರ್‌ ವಿರುದ್ಧ ಕ್ರಮ ಜರುಗಿಸುವಂತೆ ಸ್ಪೀಕರ್‌ಗೆ ಮನವಿ ಮಾಡಲಾಗಿದೆ. ಮನವಿ ಪತ್ರಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ಜಗದೀಶ ಶೆಟ್ಟರ್‌, ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ, ಶಾಸಕರಾದ ವಿ.ಸುನೀಲ್‌ ಕುಮಾರ್‌, ಕುಮಾರ್‌ ಬಂಗಾರಪ್ಪ, ದೊಡ್ಡನಗೌಡ ಪಾಟೀಲ್‌, ರೂಪಾಲಿ ನಾಯಕ್‌, ಹರೀಶ್‌ ಪೂಂಜಾ, ಉಮಾನಾಥ ಕೋಟ್ಯಾನ್‌, ಸಿದ್ದು ಸವದಿ, ಸಂಜೀವ್‌ ಮಟ್ಟಂದೂರು ಅವರು ಸಹಿ ಮಾಡಿದ್ದಾರೆ.

ಮನವಿಯ ಸಾರಾಂಶ ಹೀಗಿದೆ: ಮಂಗಳವಾರ ಮಧ್ಯಾಹ್ನ ವಿಧಾನಸಭೆಯ ಕಲಾಪದಲ್ಲಿ ಸಂವಿಧಾನ ಕುರಿತ ಚರ್ಚೆ ವೇಳೆ ಡಾ.ಕೆ.ಸುಧಾಕರ್‌ ಅವರು ಮಾತನಾಡುತ್ತಿದ್ದಾಗ ರಮೇಶ್‌ ಕುಮಾರ್‌ ಹಾಗೂ ಇತರರು ಪದೇ ಪದೆ ಅಡ್ಡಿಪಡಿಸುತ್ತಿದ್ದರು. ಅದನ್ನು ಲೆಕ್ಕಿಸದೆ ಸಚಿವರು ಮಾತನಾಡುತ್ತಾ ಸಂದಭೋìಚಿತವಾಗಿ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ಬಗ್ಗೆ ಸುಪ್ರೀಂ ತನ್ನ ಆದೇಶ ದಲ್ಲಿ ಉಲ್ಲೇಖೀಸಿರುವ ಕೆಲ ಅಂಶ, ಪ್ಯಾರಾವನ್ನು ಉಲ್ಲೇಖೀಸು ತ್ತಿ ದ್ದರು. ಆಗ ಏಕಾಏಕಿ ಆವೇಶಭರಿತರಾಗಿ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಇಲ್ಲಿ ಉಲ್ಲೇಖ ಮಾಡು ವಂತಿಲ್ಲ ಎಂದು ರಮೇಶ್‌ ಕುಮಾರ್‌ ಹೇಳಿದರು.

ಅದಕ್ಕೆ ಸುಧಾಕರ್‌ ಪ್ರತಿಕ್ರಿಯಿಸಿ, ಉಲ್ಲೇಖೀಸುವ ಅಧಿಕಾರವಿದೆ ಎಂದರು. ಇದಕ್ಕೆ ರಮೇಶ್‌ ಕುಮಾರ್‌ ಅವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಏಕಾಏಕಿ ಸದನದ ಬಾವಿಗೆ ಬಂದು ಏಕವಚನದಲ್ಲಿ “ನೀನು ಯಾವನೋ.. ನಿನ್ನ ಎಲ್ಲಾ ಹಣೆಬರಹ ಗೊತ್ತು…’ ಎನ್ನುತ್ತಾ ಇನ್ನಷ್ಟು ಅಸಂವಿಧಾನಿಕ ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲ ಉಂಟಾಗಿ ಪೀಠದಲ್ಲಿ ಆಸೀನರಾಗಿದ್ದ ಸಭಾಧ್ಯ ಕ್ಷರು ಸದನವನ್ನು ಕೆಲ ಸಮಯ ಮುಂದೂಡಿದರು.

ರಮೇಶ್‌ ಕುಮಾರ್‌ ಅವರ ವರ್ತನೆ, ಅಸಂಸದೀಯ ಪದಗಳ ಬಳಕೆಯಿಂದ ಕೇವಲ ಸಚಿವರಿಗಷ್ಟೇ ಅವಮಾನವಾಗದೆ, ಇಡೀ ಸದನ ಹಾಗೂ ಎಲ್ಲಾ ಶಾಸಕರಿಗೂ ಅವಮಾನವಾಗಿದೆ. ಈ ಘಟನೆಯು ಕರ್ನಾಟಕ ವಿಧಾನಸಭೆಗೆ ಒಂದು ಕಪ್ಪು ಚುಕ್ಕೆಯಾಗಿದೆ. ಇಂತಹ ಘಟನೆ ಪುನರಾವರ್ತನೆಯಾಗುವುದನ್ನು ತಪ್ಪಿಸಲು ಈ ಘಟನೆಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ, ಈ ರೀತಿಯ ಅವಾಚ್ಯ ಶಬ್ದಗಳನ್ನು ಬಳಸಿದ ರಮೇಶ್‌ ಕುಮಾರ್‌ ಅವರನ್ನು ಈ ಅಧಿವೇಶನ ಮುಕ್ತಾಯವಾಗುವವರೆಗೆ ಅಮಾನತ್ತಿನಲ್ಲಿ ಇಡಬೇಕು ಎಂದು ಮನವಿ ಮಾಡುತ್ತಿದ್ದೇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next