Advertisement

ನಿಗೂಢ ನಡೆ, ಮೌನಮುರಿಯದ ರಮೇಶ

12:30 AM Dec 30, 2018 | |

ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ನಿಗೂಢ ಮೌನಕ್ಕೆ ಶರಣಾಗಿರುವ ರಮೇಶ ಜಾರಕಿಹೊಳಿ ಸದ್ಯ ಯಾರ ಕೈಗೂ ಸಿಗುತ್ತಿಲ್ಲ. ಅವರ ಮುಂದಿನ ನಡೆ ಹಲವು ಕುತೂಹಲಕ್ಕೆ ಕಾರಣವಾಗಿರುವ ನಡುವೆಯೇ,”ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಮೇಶ ಒಪ್ಪಿದರೆ ಪಕ್ಷ ಅವಕಾಶ ನೀಡಲು ಸಿದ್ಧವಿದೆ’ ಎಂದು ಹೇಳಿ ಅವರ ಸಹೋದರ, ಅರಣ್ಯ ಸಚಿವ ಸತೀಶ ಜಾರಕಿಜೊಳಿ ಬಿಕ್ಕಟ್ಟು ಶಮನಗೊಳಿಸಲು ಮುಂದಾಗಿದ್ದಾರೆ.

Advertisement

ರಾಯಚೂರು ಸಂಸದ ಬಿ.ವಿ.ನಾಯಕ ಕಾಂಗ್ರೆಸ್‌ ತೊರೆಯಲಿದ್ದಾರೆ ಎಂಬ ವದಂತಿಗೂ ಇದೇ ಸಂದರ್ಭ ತೆರೆ ಎಳೆದಿದ್ದಾರೆ. ಈ ಮಧ್ಯೆ, “ಅಸಮಾಧಾನ ಸಹಜ, ಸದ್ಯದಲ್ಲೇ ಎಲ್ಲವೂ ಬಗೆಹರಿಯಲಿದೆ, ಯಾರೂ ಕಾಂಗ್ರೆಸ್‌ ತೊರೆಯಲ್ಲ’ ಎನ್ನುವ ಮೂಲಕ ಸಂಸದ ಬಿ.ವಿ.ನಾಯಕ, ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಬಿಕ್ಕಟ್ಟು ಬಗೆಹರಿಯುವ ಆಶಾವಾದ ವ್ಯಕ್ತಪಡಿಸಿದ್ದಾರೆ.

ಲೋಕಸಭೆಗೆ ರಮೇಶ ಸ್ಪರ್ಧಿಸಿದರೆ ಬೆಂಬಲ 
ರಾಯಚೂರು
: “ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಮೇಶ ಜಾರಕಿಹೊಳಿ ಒಪ್ಪಿದರೆ ಪಕ್ಷ ಅವಕಾಶ ನೀಡಲು ಸಿದಟಛಿವಿದೆ. ನಾವೂ ಕೂಡ ಬೆಂಬಲಿಸುತ್ತೇವೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಜೊಳಿ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೈ ತಪ್ಪಿದ್ದರಿಂದ ರಮೇಶ ಜಾರಕಿಹೊಳಿ ಬೇಸರದಲ್ಲಿದ್ದಾರೆ.

ಇದರಿಂದ ಅವರು ಹೊರಗಡೆ ಹೋಗಿದ್ದಾರೆ. ನಾಲ್ಕು ದಿನದಿಂದ ನಮ್ಮ ಸಂಪರ್ಕಕ್ಕೂ ಬಂದಿಲ್ಲ. ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ನೀಡುವುದಿಲ್ಲ. ಅವರ ಮನವೊ ಲಿಸುವ ಪ್ರಯತ್ನದಲ್ಲಿದ್ದೇವೆ. ನಾವ್ಯಾರೂ ಬಿಜೆಪಿ ಸಂಪರ್ಕದಲ್ಲಿಲ್ಲ. ಬಿಜೆಪಿಯವರು ಕೂಡ ನಮ್ಮನ್ನು ಸಂಪರ್ಕಿಸಿಲ್ಲ ಎಂದರು.

ಸಮ್ಮಿಶ್ರ ಸರ್ಕಾರವಾದ್ದರಿಂದ ಕಾಂಗ್ರೆಸ್‌ಗೆ 22 ಸಚಿವ ಸ್ಥಾನ ಸಿಕ್ಕಿದೆ. ಹೀಗಾಗಿ ಕೆಲ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಆದರೆ, ಕೆಲವೊಮ್ಮೆ ರಾಜಕೀಯ ಅನಿವಾರ್ಯತೆಗೆ,ಪಕ್ಷದ ನಿರ್ಧಾರಗಳಿಗೆ ತಲೆ ಬಾಗಲೇಬೇಕಾಗುತ್ತದೆ. 70 ಜನರಿಗೆ ನಿಗಮ ಮಂಡಳಿ ಸೇರಿ ವಿವಿಧ ಅಧಿಕಾರ ನೀಡಲು ಅವಕಾಶವಿದ್ದು, 2ನೇ ಹಂತದಲ್ಲಿ ಉಳಿದವರಿಗೆ ಅಧಿಕಾರ ಸಿಗಲಿದೆ ಎಂದರು.

Advertisement

ರಾಯಚೂರು ಸಂಸದ ಬಿ.ವಿ.ನಾಯಕ ಕಾಂಗ್ರೆಸ್‌ ತೊರೆಯಲ್ಲ. ಮತ್ತೆ ಜಿಲ್ಲೆಯಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ನಮಗೆ ಪಕ್ಷ ಮುಖ್ಯ.ಹೈಕಮಾಂಡ್‌ ಆದೇಶದಂತೆ ನಾವು ನಡೆಯುತ್ತಿರುತ್ತೇವೆ. ಸಿದ್ದರಾಮಯ್ಯ ಅವರ ಮೇಲೆ ನಮಗೆ ಯಾವುದೇ ಸಿಟ್ಟಿಲ್ಲ. ಚೆನ್ನಾಗಿಯೇ ಇದ್ದೇವೆ.

ಸರ್ಕಾರದ ಬಗ್ಗೆ ಬಸವರಾಜ ಹೊರಟ್ಟಿ ನೀಡಿದ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಸರ್ಕಾರ ಬೀಳುತ್ತದೆ ಎನ್ನುವುದೆಲ್ಲ ಊಹಾಪೋಹ. ಸರ್ಕಾರವನ್ನು ಯಾರೋ ಎಲ್ಲೋ ಕುಳಿತು ಬೀಳಿಸಲು ಸಾಧ್ಯವಿಲ್ಲ. ಯಡಿಯೂರಪ್ಪನವರು ಮುಹೂರ್ತ ನಿಗದಿ ಮಾಡಿದ್ದರು. ಉಮೇಶ ಕತ್ತಿ ಕೂಡ 24 ಗಂಟೆಯೊಳಗೆ ಸರ್ಕಾರ ಬೀಳುತ್ತದೆ ಎಂದಿದ್ದರು. ಈಗ 15 ದಿನ ಎನ್ನುತ್ತಿದ್ದಾರೆ ಎಂದರು.

ನನಗೆ ಬಹಳ ದಿನಗಳಿಂದ ಅರಣ್ಯ ಸಚಿವನಾಗಬೇಕೆಂಬ ಆಸೆಯಿತ್ತು. ಈಗ ಆ ಕಾಲ ಕೂಡಿ ಬಂದಿದೆ. ಹೈ. ಕರ್ನಾಟಕ ಭಾಗದಲ್ಲಿ ಅರಣ್ಯ ಭೂಮಿ ಕಡಿಮೆಯಿದೆ. ಸಿರವಾರ, ಕಾರವಾರದ ಮಲೆನಾಡು ಭಾಗದಂತೆ ಈ ಭಾಗದಲ್ಲೂ ಹಸಿರೀಕರಣ ಮಾಡಲು ಒತ್ತು ನೀಡಲಾಗುವುದು.
– ಸತೀಶ ಜಾರಕಿಹೊಳಿ, ಅರಣ್ಯ ಸಚಿವ

ಅಸಮಾಧಾನ ಪ್ರಕರಣ ಶೀಘ್ರವೇ ಸುಖಾಂತ್ಯ
ಹರಪನಹಳ್ಳಿ:
ರಮೇಶ್‌ ಜಾರಕಿಹೊಳಿ ಅಸಮಾಧಾನ ಪ್ರಕರಣ ಶೀಘ್ರವೇ ಸುಖಾಂತ್ಯ ಕಾಣಲಿದೆ. ಬಿಜೆಪಿಯವರ ಆಪರೇಷನ್‌ ಕಮಲ ನಡೆಯಲ್ಲ ಎಂದು ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ಮುಜರಾಯಿ ಸಚಿವರಾದ ಬಳಿಕ ಸ್ವಗ್ರಾಮ ಲಕ್ಷ್ಮೀಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಆಗ ಬೀಳುತ್ತದೆ, ಈಗ ಬೀಳುತ್ತದೆ ಎಂದು ಬಿಜೆಪಿಯವರು ಕಾಯುತ್ತಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ಐದು ವರ್ಷ ಅಧಿ ಕಾರ ನಡೆಸುತ್ತದೆ. ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದರು.

ಕಾಂಗ್ರೆಸ್‌ ಮುಖಂಡರಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಇದ್ದಾರೆ. ದಲಿತ ಮುಖ್ಯಮಂತ್ರಿ ವಿಷಯವನ್ನು ಹೈಕಮಾಂಡ್‌ ನೋಡಿಕೊಳ್ಳುತ್ತದೆ. ಯಾರಿಗೆ ಯಾವ ಸಮಯದಲ್ಲಿ ಯಾವ ಹುದ್ದೆ ಕೊಡಬೇಕೆಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರಿಗೆ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಅದು ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದರು.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ.ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ.ಕಾಂಗ್ರೆಸ್‌ ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ.
– ಶಿವರಾಜ ತಂಗಡಗಿ, ಮಾಜಿ ಸಚಿವ

“ರಮೇಶ ಜತೆ ಸ್ನೇಹವಿದೆ, ಪಕ್ಷ ಬಿಡಲ್ಲ’
ರಾಯಚೂರು:
“ಜಾರಕಿಹೊಳಿ ಕುಟುಂಬದೊಂದಿಗೆ ಮೊದಲಿನಿಂದಲೂ ಅನ್ಯೋನ್ಯವಾಗಿದ್ದು, ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ’ಎಂದು ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಗುಂಪಿನಲ್ಲಿ ನಾನೂ ಇದ್ದೆ. ಆದರೆ, ಬೆಳಗಾವಿ ಅಧಿ ವೇಶನ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರೊಂದಿಗೆ ಮಾತು ಕೂಡ ಆಡಿಲ್ಲ ಎಂದರು.

ಸಚಿವ ಸ್ಥಾನ ನೀಡದೇ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಅಮರೇಶ ನಾಯಕ ನಂತರ 14 ವರ್ಷದಿಂದ ಜಿಲ್ಲೆಗೆ ಕಾಂಗ್ರೆಸ್‌ ಸಚಿವ ಸ್ಥಾನ ನೀಡಿಲ್ಲ. ಹೈಕ ಭಾಗದಲ್ಲಿ ಬಳ್ಳಾರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ,ಜಿಲ್ಲೆಯಲ್ಲಿ ಮೂವರು ಶಾಸಕರಿದ್ದರೂ ಸಚಿವ ಸ್ಥಾನ ದೊರಕಿಲ್ಲ. ಕನಿಷ್ಠ ಪಕ್ಷ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವನ್ನಾದರೂ ಜಿಲ್ಲೆಗೆ ನೀಡ ಬೇಕಿತ್ತು. ಇದರಿಂದ ಅಸಮಾಧಾನವಾಗಿದೆ. ಪಕ್ಷದ ವರಿಷ್ಠರೊಂದಿಗೆ ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷರು ಅನ್ಯಾಯ ಸರಿಪಡಿಸುವುದಾಗಿ ಭರವಸೆ ನೀಡಿದ್ದು, ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.

“ಹಿನ್ನಡೆಯನ್ನು ಅರಗಿಸಿಕೊಳ್ಳಬೇಕು’
ರಾಯಚೂರು:
“ರಾಜಕೀಯಲ್ಲಿ ಏಳು ಬೀಳು ಸಹಜ. ಇಲ್ಲಿ ಯಾವ ಸ್ಥಾನವೂ ಶಾಶ್ವತವಲ್ಲ. ಆಗಿರುವ ಹಿನ್ನಡೆಯನ್ನು ರಮೇಶ ಜಾರಕಿಹೊಳಿ ಅವರು ಅರಗಿಸಿಕೊಳ್ಳಬೇಕು’ ಎಂದು ಸಂಸದ ಬಿ.ವಿ.ನಾಯಕ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಮೇಶ ಜಾರಕಿಹೊಳಿ ಕಾಂಗ್ರೆಸ್‌ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಸುದೀರ್ಘ‌ ಸೇವೆ ಸಲ್ಲಿಸಿ ಹಿರಿಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ. ಸಚಿವ ಸ್ಥಾನ ಕೈ ತಪ್ಪಿದೆ ಎಂದು ಬೇರೆ ಪಕ್ಷಕ್ಕೆ ಹೋದರೆ ಇಲ್ಲಿ ಸಿಕ್ಕ ಸ್ಥಾನಮಾನ, ಗೌರವಗಳು ಅಲ್ಲಿ ಸಿಗುವುದಿಲ್ಲ ಎಂದು ಅವರಿಗೆ ಮನವರಿಕೆ ಮಾಡಲಾಗಿದೆ ಎಂದರು.

ವಾರದ ಹಿಂದೆ ರಮೇಶ ಅವರೊಂದಿಗೆ ಮಾತನಾಡಿದ್ದು, ಬಳಿಕ ಅವರನ್ನು ಸಂಪರ್ಕಿಸಿಲ್ಲ.ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರು ಬೇಸರಗೊಂಡಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ, ಅವರೇನು ದೇಶ ಬಿಟ್ಟು ಹೋಗಿಲ್ಲ. ಪಕ್ಷ ಇದ್ದರೆ ನಾವು, ನಾವಿದ್ದರೆ ಪಕ್ಷ. ಹೀಗಾಗಿ ಕಾಂಗ್ರೆಸ್‌ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next