Advertisement

ಕಳಸಾ, ಬಂಡೂರಿ ಕಾಮಗಾರಿ ವಿಚಾರವಾಗಿ ಶೀಘ್ರದಲ್ಲಿ ಕೇಂದ್ರ ಸಚಿವರ ಜೊತೆ ಚರ್ಚೆ: ಜಾರಕಿಹೊಳಿ

08:14 AM May 19, 2020 | keerthan |

ಬೆಳಗಾವಿ: ಕಳಸಾ, ಬಂಡೂರಿ ಕಾಮಗಾರಿ ಆರಂಭ ವಿಚಾರ ಕುರಿತು ದೆಹಲಿಗೆ ಹೋಗಲು ವಿಮಾನ ಸೌಲಭ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಸ್ತೆಯ ಮೂಲಕವೇ ಅಧಿಕಾರಿಗಳ ಜೊತೆಗೆ ದೆಹಲಿಗೆ ತೆರಳಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಲಾಗುವದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

Advertisement

ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜಲಸಂಪನ್ಮೂಲ ಸಚಿವನಾದ ಬಳಿಕ ರಾಜ್ಯದ ಎಲ್ಲಾ ಜಲಾಶಯಕ್ಕೆ ಭೇಟಿ ನೀಡಿ ಏನೆಲ್ಲಾ ಕೆಲಸ ಆಗಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.

ಗೋಕಾಕ್ ತಾಲೂಕಿನಲ್ಲಿ ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣ ವಿಚಾರ ಪ್ರಸ್ತಾಪಿಸಿದ ಅವರು ಈ ಯೋಜನೆಯಿಂದ ಅರಣ್ಯ ಪ್ರದೇಶ, ಗ್ರಾಮಗಳಿಗೆ ಯಾವುದೇ ಹಾನಿಯಾಗುವದಿಲ್ಲ. ನಿರ್ವಾಣೇಶ್ವರ ದೇವಸ್ಥಾನ ಮುಳುಗಡೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕುಡಿಯುವ ನೀರು, ಕೆರೆ ತುಂಬುವ ಯೋಜನೆಗೆ ಆದ್ಯತೆ ಕೊಡಲಾಗುವದು. ನವಿಲಿ ಡ್ಯಾಂ, ಗಟ್ಟಿ ಬಸವಣ್ಣ ಡ್ಯಾಂ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನವಲಿ ಡ್ಯಾಂ ನಿರ್ಮಾಣಕ್ಕೆ ತೆಲಂಗಾಣ, ಆಂಧ್ರಪ್ರದೇಶ ಸರ್ಕಾರದಿಂದ ಸಹಕಾರ ಸಿಕ್ಕಿದೆ ಎಂದು ಸಚಿವರು ಹೇಳಿದರು.

ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಶೀಘ್ರದಲ್ಲೇ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ್ ಭೇಟಿ ಮಾಡುತ್ತೇವೆ. ಬೆಂಗಳೂರಿನಲ್ಲಿ ಈ ಬಗ್ಗೆ ಸಭೆ ನಡೆಯಲಿದೆ. ಅಥಣಿ, ಜಮಖಂಡಿ ಭಾಗಕ್ಕೆ ನೀರು ಕಲ್ಪಿಸಲು ಮಹಾರಾಷ್ಟ್ರ ಸರ್ಕಾರದ ಬಳಿ ಮನವಿ ಮಾಡಲಾಗುವದು ಎಂದು ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next