Advertisement
ಒಂದೂವರೆ ವರ್ಷದಿಂದ ತಣ್ಣ ಗಾಗಿದ್ದ ಸಿ.ಡಿ. ಬೆಳವಣಿಗೆ ಈಗ “ಬಾಂಬೆ ಫ್ರೆಂಡ್ಸ್’ ನಿದ್ದೆಗೆಡಿಸಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸರಕಾರದಲ್ಲಿ ಸಚಿವರಾಗಿರುವವರು ವಾಪಸ್ ಮಾತೃ ಪಕ್ಷಕ್ಕೆ ಬರದಿದ್ದರೆ ಸಿ.ಡಿ. ಬಿಡುಗಡೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬ್ಲ್ಯಾಕ್‌ವೆುàಲ್ ಮಾಡುತ್ತಿದ್ದಾರೆ’ ಎಂಬ ರಮೇಶ ಜಾರಕಿಹೊಳಿ ಆರೋಪ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ.
ಗೋಕಾಕ್‌ನ ಅಂಕಲಗಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, “ನಮ್ಮ ಮೇಲೆ ಸಿ.ಡಿ. ಹೆಸರಿನಲ್ಲಿ ನಿರಂತರ ದಾಳಿ ಮಾಡಿದ ಡಿ.ಕೆ. ಶಿವಕುಮಾರ್ ಈಗ ಸಚಿವರೊಬ್ಬರಿಗೆ ಕಾಂಗ್ರೆಸ್‌ಗೆ ಬರುತ್ತೀಯೋ, ಇಲ್ಲ ನಿನ್ನ ಸಿ.ಡಿ. ಬಿಡಲೋ ಎಂದು ಬೆದರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
Related Articles
Advertisement
ಬೆದರುವುದಿಲ್ಲರೋಣದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಡಿ.ಕೆ. ಶಿವಕುಮಾರ್ ಎಷ್ಟೇ ಹೆದರಿಸಿದರೂ ನಮ್ಮ ಮಂತ್ರಿಗಳು ಇಂಥ ಬೆದರಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ಡಿಜಿಟಲ್ ಯುಗ. ಚುನಾವಣೆ ಸಂದರ್ಭದಲ್ಲಿ ಸಿ.ಡಿ. ಪ್ರಕರಣಗಳು ಮತ್ತೆ ಹೊರ ಬರುತ್ತಿವೆ. ಕಾಂಗ್ರೆಸ್‌ಗೆ ಸೇರದಿದ್ದರೆ ಸಿ.ಡಿ. ಬಿಡುಗಡೆ ಮಾಡಬೇಕಾಗುತ್ತದೆ ಎಂದು ಸಚಿವರೊಬ್ಬರಿಗೆ ಡಿ.ಕೆ.ಶಿ. ಬೆದರಿಕೆ ಹಾಕುತ್ತಿದ್ದಾರೆ ಎಂದು ರಮೇಶ ಜಾರಕಿಹೊಳಿ ಆರೋಪಿಸುತ್ತಿದ್ದಾರೆ. ಆದರೆ ಈ ಕುರಿತು ನನಗೆ ಹೆಚ್ಚಿನ ಮಾಹಿತಿಯಿಲ್ಲ ಎಂದರು. ಬ್ಲ್ಯಾಕ್ ಮೇಲ್ ಬಗ್ಗೆ ಗೊತ್ತಿಲ್ಲ: ಸಿ.ಟಿ.ರವಿ
ರಮೇಶ ಜಾರಕಿಹೊಳಿ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಜಾರಕಿಹೊಳಿಗೆ ಈ ಬಗ್ಗೆ ಮಾಹಿತಿ ಇರಬೇಕು. ಶಿವಕುಮಾರ್ ಹಾಗೂ ಜಾರಕಿಹೊಳಿ ಈ ಹಿಂದೆ ಒಂದೇ ಪಕ್ಷದಲ್ಲಿದ್ದವರು. ಹೀಗಾಗಿ ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎನ್ನುವ ಮಾಹಿತಿ ಜಾರಕಿಹೊಳಿಗೆ ಇರಬಹುದು. ಕಾಂಗ್ರೆಸ್ ಸಂಸ್ಕೃತಿ ಗೊತ್ತಿರುವ ಕಾರಣಕ್ಕೆ ಈ ವಿಚಾರ ಬಹಿರಂಗ ಮಾಡಿದ್ದಾರೆ ಎಂದು ಹೇಳಿದ್ದಾರೆ.