Advertisement

ಆಪರೇಶನ್ ಕಮಲಕ್ಕೆ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ನೇರ ಕಾರಣ: ರಮೇಶ್ ಜಾರಕಿಹೊಳಿ

10:25 AM Sep 08, 2019 | Team Udayavani |

ಬೆಳಗಾವಿ:  ಸತೀಶ್  ಜಾರಕಿಹೊಳಿ ಒಬ್ಬ ಕುತಂತ್ರಿ ಹಾಗೂ ಮಹಾಮೋಸಗಾರ ರಾಜಕಾರಣಿ.  ಆಪರೇಷನ್ ಕಮಲ ಆಗಲು ಸತೀಶ್ ಮತ್ತು ಎಂ ಬಿ ಪಾಟೀಲ್ ನೇರ ಕಾರಣ  ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಗೋಕಾಕದಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಅನ್ಯಾಯ ಆಗಿದೆ. ಅಥಣಿ ಕ್ಷೇತ್ರವನ್ನೂ ಕಡೆಗಣಿಸಲಾಗಿದ್ದು ಒಂದು ಸಣ್ಣ ಅಭಿವೃದ್ಧಿ ಕೆಲಸವೂ  ಆಗಲಿಲ್ಲ. ಸಿದ್ದರಾಮಯ್ಯ ಹಾಗೂ ಖರ್ಗೆ ಅವರಿಗೆ ಅನೇಕ ಭಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ.  ನಾನು ಕಾಂಗ್ರೆಸ್ ಪಕ್ಷದ ಮೂಲ ಕಾರ್ಯಕರ್ತ. ಅದರೆ ಕಾಂಗ್ರೆಸ್ ನಲ್ಲಿ ಚಮಚಾಗಿರಿ ಮಾಡುವವರಿಗೆ ಬೆಲೆ ಇದೆ . ಇನ್ನೂ 10 ರಿಂದ 15 ಕಾಂಗ್ರೆಸ್ ಶಾಸಕರು ನಮ್ಮ ಜತೆಗೆ ಬರಲು ಸಿದ್ದರಿದ್ದಾರೆ. ನನ್ನ ನಂಬಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರ ಪರ ಕಾನೂನು ಹೋರಾಟ  ಮಾಡುತ್ತೇನೆ.  ಸ್ಪೀಕರ್ ಅನರ್ಹತೆ ಮಾಡಿದ್ದು ಕಾನೂನು ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವರ ಆಶೀರ್ವಾದದಿಂದ ಸುಪ್ರೀಂ ಕೋರ್ಟ್ ನಿಂದ ನ್ಯಾಯ ಸಿಗಲಿದೆ. ಮುಂದಿನ ಚುನಾವಣೆ ನಿಲ್ಲಲು ನನಗೆ ಅವಕಾಶ ಇದೆ.  ನಾನು ಗೋಕಾಕ ಲಕ್ಷ್ಮೀ ದೇವರ ಮೇಲೆ ಪ್ರಮಾಣ ಮಾಡಲು ಸಿದ್ಸನಿದ್ದೇನೆ. ನಾನು ಬೆನ್ನಿಗೆ ಚೂರಿ ಹಾಕಿದ್ದರೆ ಆತ್ಮಹತ್ಯೆಗೂ ಸಿದ್ದ.

ಬುದ್ಧ, ಬಸವ ಹೆಸರಲ್ಲಿ ಸತೀಶ್ ಜಾರಕಿಹೊಳಿ  ಜನರ 1 ಸಾವಿರ ಎಕರೆ ಜಮೀನು ಕಬಳಿಸಿದ್ದಾರೆ.  ನನಗೂ, ಲಖನ್ ಜಾರಕಿಹೊಳಿಗೆ ಜಗಳವನ್ನು  ಹಚ್ಚಿ ತಮಾಷೆ ನೋಡುತ್ತಿದ್ದಾರೆ. ಅವರ ಗೆಳೆಯರು ತುತ್ತೂರಿ ಬಾರಿಸುವವರು. ನನ್ನ ಪಿಎಗಳನ್ನು ಬೈಯುವ ಮಟ್ಟಿಗೆ ಅವರು ಬಂದಿದ್ದಾರೆ . ಯಮಕನಮರಡಿ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲಿ  ನೋಡೊಣ ಎಂದು ಸವಾಲು ಹಾಕಿದರು.

ನಾಳೆ ಉಪ ಚುನಾವಣೆ ಬಂದರೂ ಎದುರಿಸಲು  ಸಿದ್ಧ ಎಂದರು. ನನ್ನ ಹಾಗೂ ಲಖನ್ ಜಾರಕಿಹೊಳಿ ಸೋಲಿಸಲು ಗೋಕಾಕ ಬರೋ ಸಂಚನ್ನು ಸತೀಶ್ ಜಾರಕಿಹೊಳಿ ಮಾಡಿದ್ದಾರೆ. ನನ್ನ ಕರ್ತವ್ಯ ನಾನು ಮಾಡುತ್ತೇನೆ. ಗೋಕಾಕ ಕ್ಷೇತ್ರದ ಜನರಿಗೆ ಪುನರ್ವಸತಿಗೆ ನಾನು ಸಿದ್ದ . ನಾನು ಈ ಬಗ್ಗೆ ಪ್ರತಿಜ್ಞೆ ಮಾಡುತ್ತೇನೆ. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಸಿ ಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದರು.

Advertisement

ಡಿಕೆ ಶಿವಕುಮಾರ್ ಅವರಿಗೆ ದೇವರು ಒಳ್ಳೆಯದು ಮಾಡಲಿ. ಕಾನೂನು ಹೋರಾಟದಲ್ಲಿ ಅವರಿಗೆ ನ್ಯಾಯ ಸಿಗಲಿ ಎಂದರು. ಯಾವ ಪಕ್ಷ ಸೇರ್ಪಡೆಯ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಅನರ್ಹ ಪ್ರಕರಣ ಇತ್ಯರ್ಥವಾದ ನಂತರ ಮುಂದಿನ ತೀರ್ಮಾನ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next