ಚಿಕ್ಕಮಗಳೂರು : ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ಅತೃಪ್ತ ಸಚಿವರು ಹಾಗೂ ಶಾಸಕರ ಗೌಪ್ಯ ಸಭೆಯೊಂದು ನಡೆದಿದ್ದು, ಇದರಿಂದ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಚಲನ ಆರಂಭವಾಗುತ್ತಾ ಎಂಬಂತಾಗಿದೆ.
ಶುಕ್ರವಾರ ರಾತ್ರಿ ಚಿಕ್ಕಮಗಳೂರಿನ ಹೊರವಲಯದಲ್ಲಿರುವ ಸರಾಯ್ ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ, ಸಿ.ಪಿ ಯೋಗೇಶ್ವರ್, ಗೋಪಾಲಯ್ಯ, ಶಾಸಕರಾದ ಎಂಪಿ ಕುಮಾರಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದು.
ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಸಚಿವ ರಮೇಶ್ ಜಾರಕಿಹೊಳಿಯಿಂದಲೇ ನಡೆದಿದೆಯಾ ಸರ್ಕಾರ ಕೆಡವಲು ಪ್ರಯತ್ನ.? ಎಂಬ ಅನುಮಾನವೂ ಹುಟ್ಟಿಕೊಂಡಿದೆ.
ಈ ಕುರಿತು ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಯಾವುದೇ ರಾಜಕೀಯ ಸಭೆಯಲ್ಲ, ಈ ಹಿಂದೆ ಎತ್ತಿನಹೊಳೆ ಯೋಜನೆ ಕುರಿತು ನಡೆಸಲಾದ ಸಭೆ ಅದರ ಮುಂದುವರಿದ ಭಾಗವಾಗಿ ಖಾಸಗಿ ರೆಸಾರ್ಟ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಯಿತು ಎಂದ ಅವರು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಕೊಟ್ಟಿಲ್ಲ ನನ್ನ ಇಲಾಖೆಯ ಅಧಿಕಾರಿಗಳೋಂದಿಗೆ ಸಭೆ ನಡೆಸಲಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ
ಮಾಜಿ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ಅವರ ರಾಜಕೀಯ ಗುರುಗಳ ಮಾಲೀಕತ್ವದಲ್ಲಿ ಇರುವ ರೆಸಾರ್ಟ್ ನಲ್ಲಿ ಸಭೆ ನಡೆಸಲಾಯಿತು ಈ ಕುರಿತು ಮಾಧ್ಯಮದವರು ಗೊಂದಲ ಸೃಷ್ಟಿಸಬೇಡಿ ಎಂದು ಹೇಳಿದರು.