ಕೆಳಗಿಳಿಸಲು ಕಾರಣವಾಯಿತು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮೇಶ ಎಲ್ಲಿದ್ದಾರೆ ಎನ್ನುವುದು ನನಗೂ ಗೊತ್ತಿಲ್ಲ. ಹುಡುಕಿ ಅವರೊಂದಿಗೆ ಮಾತುಕತೆ ನಡೆಸಬೇಕಾಗಿದೆ. ಒಂದೆರಡು ದಿನಗಳಲ್ಲಿ ಭೇಟಿ ಮಾಡುತ್ತೇನೆ. ರಾಜಕೀಯವಾಗಿ ಅವರಿಗೆ ಏನು ಹೇಳಬೇಕೋ ಅದನ್ನು ಹೇಳುವ ಪ್ರಯತ್ನ ಮಾಡುತ್ತೇನೆ. ಅವರು ಸಹ ಯಾವುದೇ ಬೇಡಿಕೆ ಇಟ್ಟಿಲ್ಲ. ನನ್ನ ಮೇಲೆ ಅವರಿಗೆ ಕೋಪವೂ ಇಲ್ಲ ಎಂದರು.
Advertisement
ರಮೇಶ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಮುಖ್ಯವಾಗಿ ಮಾತನಾಡುವಾಗ ಬಹಳ ಜಾಗ್ರತೆ ವಹಿಸಬೇಕು. ಇದರ ಬಗ್ಗೆ ಈ ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಅವರು ಮೊದಲಿನಿಂದಲೂ ಹಾಗೆಯೇ, ಸರಿಯಾಗಿ ಮಾತನಾಡುವುದೇ ಇಲ್ಲ ಎಂದರು. ಬೆಂಗಳೂರಿನಲ್ಲಿ ಮಂಗಳವಾರ ರಾಜ್ಯ ಉಸ್ತುವಾರಿ ವೇಣುಗೋಪಾಲ ಜೊತೆ ನಡೆದ ಚರ್ಚೆಯಲ್ಲಿ ಖಾತೆ ಹಂಚಿಕೆ ವಿಷಯಪ್ರಸ್ತಾಪವಾಗಲಿಲ್ಲ ಎಂದು ಹೇಳಿದರು.
ಸಂಪುಟದಿಂದ ಕೈಬಿಡಲು ಕಾರಣವಾಗಿದೆ. ಅವರು ರಾಜೀನಾಮೆ ನೀಡಿದರೂ ಸರ್ಕಾರ ಸೇಫ್ ಆಗಿರಲಿದೆ.
●ಡಿ.ಎಸ್. ಹೂಲಗೇರಿ, ಶಾಸಕ